ನವದೆಹಲಿ: ಪ್ರಧಾನಿ ಮೋದಿ ಭದ್ರತೆಗೆ ಎಸ್‍ಪಿಜಿ ಹೊಸದೊಂದು ಕಾರು ತಂದಿದೆ. ಮೆರ್ಸಿಡೆಸ್-ಮೈಬ್ಯಾಕ್ ಎಸ್-650 ಗಾರ್ಡ್‍ನ ಎರಡು ಕಾರುಗಳನ್ನು 24 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿ ಮಾಡಿದೆ. ಇದು ವಿಆರ್-10 ಶ್ರೇಣಿಯ ಭದ್ರತೆ ಒದಗಿಸಲಿದೆ.
Advertisement
ಶಸ್ತ್ರಾಸ್ತ್ರ ದಾಳಿಯಿಂದ ಈ ಕಾರು ಬಲವಾದ ರಕ್ಷಣೆ ಒದಗಿಸಲಿದೆ. ಇತ್ತೀಚಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಪ್ರವಾಸದ ವೇಳೆ ಪ್ರಧಾನಿ ಮೋದಿ ಇದೇ ಕಾರಿನಲ್ಲಿ ಹೈದ್ರಾಬಾದ್ ಹೌಸ್‍ಗೆ ತೆರಳಿದ್ರು. ಒಂದು ಕಾರನ್ನು ಪ್ರಧಾನಿ ಮೋದಿ ಬಳಸಿದ್ರೆ, ಮತ್ತೊಂದು ಕಾರು ಡಿಕಾಯ್ (ಪ್ರಧಾನಿಯೇ ಇದ್ದಾರೆ ಎಂದು ಎಲ್ಲರೂ ಭಾವಿಸುವ ವಾಹನ)ಆಗಿ ಬಳಕೆ ಮಾಡಲಾಗುತ್ತದೆ.
Advertisement
Advertisement
ಮೋದಿ ಗುಜರಾತ್ ಸಿಎಂ ಆಗಿದ್ದಾಗ ಮಹೀಂದ್ರಾ ಸ್ಕಾರ್ಪಿಯೋ ಕಾರು ಬಳಸುತ್ತಿದ್ರು. ಪ್ರಧಾನಿಯಾದ ಮೇಲೆ ಬಿಎಂಡಬ್ಲ್ಯೂ 7 ಸೀರೀಸ್‍ನ ಹೈ ಸೆಕ್ಯೂರಿಟಿ ಎಡಿಷನ್, ರೇಂಜ್ ರೋವರ್ ವೋಗ್, ಟಯೋಟಾ ಲ್ಯಾಂಡ್ ಕ್ರ್ಯೂಸರ್ ಕಾರುಗಳನ್ನು ಮೋದಿ ಬಳಸುತ್ತಿದ್ದರು. ಇದನ್ನೂ ಓದಿ: ಪಂಜಾಬ್ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಮಾಜಿ ಕ್ರಿಕೆಟಿಗ ದಿನೇಶ್ ಮೊಂಗಿಯಾ
Advertisement
ಹೊಸ ಕಾರ್ ವಿಶೇಷತೆ..!
ವಿಲಾಸಿ ಕಾರು, ಅತ್ಯುನ್ನತ ಶ್ರೇಣಿಯ ರಕ್ಷಣೆ ಇದೆ. ಕಾರಿನ ಬಾಡಿ, ಕಿಟಕಿಯಿಂದ ಗರಿಷ್ಠ ಸುರಕ್ಷತೆ ಇದ್ದು, ಎಕೆ-47 ಗನ್‍ನಿಂದ ದಾಳಿ ನಡೆಸಿದರೂ ಏನೂ ಆಗಲ್ಲ. 2 ಮೀಟರ್ ದೂರದಲ್ಲಿ 15 ಕಿಲೋ ಟಿಎನ್‍ಟಿ ಸ್ಫೋಟಿಸಿದ್ರೂ ಏನೂ ಆಗಲ್ಲ. ನೆಲ ಬಾಂಬ್ ನಡೆದರೂ ತಾಳಿಕೊಳ್ಳುವ ಶಕ್ತಿ ಇದೆ. ವಿಷ ವಾಯು ದಾಳಿ ನಡೆದರೂ ತಡೆಯುವ ಶಕ್ತಿ ಇದೆ.
ಕಾರಿನಲ್ಲಿ ಕುಳಿತವರಿಗೆ ವಿಶೇಷ ಆಕ್ಸಿಜನ್ ವ್ಯವಸ್ಥೆ ಇದ್ದು, ಅಗ್ನಿ ಅವಘಡ ಉಂಟಾದರೆ ತನ್ನಿಂತಾನೆ ತೈಲ ಕೊಳವೆ ಬಂದ್ ಆಗುತ್ತದೆ. ಭಾರೀ ಎಂಜಿನ್ ಇದ್ದರೂ, ವೇಗಮಿತಿ 160 ಕಿ.ಮೀ ಇದೆ. ಪ್ರತ್ಯೇಕವಾದ ಫ್ಲ್ಯಾಟ್ ಟೈರ್ ಬಳಕೆ, ಪಂಕ್ಚರ್/ಹಾನಿ ಆದರೂ ಸಮಸ್ಯೆ ಇಲ್ಲ. ಇದನ್ನೂ ಓದಿ: ಮದ್ಯ ಖರೀದಿಸಲು ಹಣ ನೀಡದ್ದಕ್ಕೆ ಗೆಳತಿಯ ಮೂಗನ್ನೇ ಕತ್ತರಿಸಿದ!