ಭೋಪಾಲ್: ವ್ಯಕ್ತಿಯೊಬ್ಬ ಮದ್ಯಕ್ಕೆ 200 ರೂ. ಹಣ ನೀಡದ ಕಾರಣ ಲಿವ್-ಇನ್ ರಿಲೆಷನ್‍ಶಿಪ್‍ನಲ್ಲಿದ್ದ ಗೆಳತಿಯ ಮೂಗನ್ನು ಕೊಡಲಿಯಿಂದ ಕತ್ತರಿಸಿದ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಬಮಂಗಾವ್‍ನಲ್ಲಿ ನಡೆದಿದೆ.
Advertisement
ಸೋನು (35) ಹಲ್ಲೆಗೊಳಗಾದ ಮಹಿಳೆ. ಸೋನು ತನ್ನ ಪ್ರೇಮಿ ಲವಕುಶ್ ಜೊತೆ 2 ವರ್ಷ ಲಿವ್-ಇನ್ ರಿಲೆಷನ್‍ಶಿಪ್‍ನಲ್ಲಿದ್ದಳು. ಮಹಿಳೆಯ ಪತಿ 8 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದನು. ಆ ಬಳಿಕದಿಂದ ಆಕೆ ಹೊಲ-ಗದ್ದೆಯಲ್ಲಿ ಕೆಲಸ ಮಾಡುತ್ತಾ ತನ್ನ ಜೀವನವನ್ನು ಸಾಗಿಸುತ್ತಿದ್ದಳು. ಆದರೆ ಆಕೆಯ ಪ್ರೇಮಿ ಸದಾ ಮದ್ಯದ ಅಮಲಿನಲ್ಲಿರುತ್ತಿದ್ದು, ಯಾವುದೇ ಕೆಲಸ ಕಾರ್ಯವಿಲ್ಲದೆ ಅಲೆದಾಡುತ್ತಿದ್ದನು. ಇದನ್ನೂ ಓದಿ: 17 ವರ್ಷ ಹಿಂದಿನ ಕೊಲೆಯ ಗುಟ್ಟು- ಕೈದಿ ಮತ್ತೆ ಅರೆಸ್ಟ್
Advertisement
ಶನಿವಾರ ಬೆಳಗ್ಗೆ ಮದ್ಯದ ಅಮಲಿನಲ್ಲಿದ್ದ ಆತ, ಮತ್ತೆ ಕುಡಿಯಲು ಅವಳ ಹತ್ತಿರ ಹಣ ಕೇಳಿದ್ದಾನೆ. ಆದರೆ ಸೋನು ಕೂಲಿಗಾಗಿ ಅವರಿವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದು, ಅವಳ ಜೀವನ ದುಡಿದ ಕೂಲಿಯ ಮೇಲೆ ನಡೆಯುತ್ತಿತು. ಆದ ಕಾರಣ ಪ್ರೇಮಿಗೆ ಹಣ ಕೊಡಲು ಆಕೆ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಲವಕುಶ್ ಅಲ್ಲೇ ಇದ್ದ ಕೊಡಲಿ ತೆಗೆದುಕೊಂಡು ಆಕೆಯ ಮೂಗನ್ನು ಕತ್ತರಿಸಿ ಬಿಟ್ಟಿದ್ದಾನೆ.
Advertisement
Advertisement
ಘಟನೆಯಿಂದ ಗಂಭೀರಗಾಯಗೊಂಡ ಮಹಿಳೆಯನ್ನು ಸ್ಥಳೀಯ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಮಹಿಳೆ ಭಾರೀ ಅಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಖಾಂಡ್ವಾ ಸಿಟಿ ಕೊಟ್ವಾಲಿ ಉಸ್ತುವಾರಿ ಬಲ್ಜಿತ್ ಸಿಂಗ್ ಬಿಸೆನ್ ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯ ಮನೆ, ಆಟೋಗೆ ಬೆಂಕಿ ಹಚ್ಚಿದ ಮಹಿಳೆ!
ಆರೋಪಿಯ ವಿರುದ್ಧ ಮಹಿಳೆ ದೂರು ನೀಡಿದ್ದು, ಕೊಟ್ವಾಲಿ ಪೊಲೀಸರು ಐಪಿಸಿ ಸೆಕ್ಷೆನ್ 307 ರ ಅಡಿ ಪ್ರಕರಣ ದಾಖಲಿಸಿದ್ದಾರೆ.