– ಬುದ್ದನ ಪ್ರತಿಮೆ ಉಡುಗೊರೆ ನೀಡಿದ ಸಂಸದ ಮುನಿಸ್ವಾಮಿ
– ಕರಿ ಕಂಬಳಿ ಹಾಕಿ ಗೌರವಿಸಿದ ವರ್ತೂರು ಪ್ರಕಾಶ್
ಕೋಲಾರ: ನವ ಕರ್ನಾಟಕ ಸಂಕಲ್ಪ ಸಮಾವೇಶಕ್ಕೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಗಮಿಸಿದರು. ಕೋಲಾರ (Kolar) ತಾಲೂಕಿನ ಕೆಂದಟ್ಟಿ ಬಳಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಮಾವೇಶಕ್ಕೆ ಆಗಮಿಸಿದ ಮೋದಿ ಅಲ್ಲಿನ ಜನರು ಅದ್ಧೂರಿ ಸ್ವಾಗತ ಕೋರಿದರು.
ಸಮಾವೇಶದ ಪಕ್ಕದಲ್ಲೇ ನಿರ್ಮಾಣ ಮಾಡಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಮೋದಿಯವರನ್ನು ಬಿಜೆಪಿ (BJP) ನಾಯಕರು ಸ್ವಾಗತ ಮಾಡಿದರು. ಈ ವೇಳೆ ಅವರ ಕಾಲಿಗೆರಗಿದ ಕೆಜಿಎಫ್ ಬಿಜೆಪಿ ಮುಖಂಡ ಶ್ರೀನಿವಾಸ್‌ಗೆ ಮೋದಿ ಬೆನ್ನಿಗೆ ಗುದ್ದಿ ಇದು ಬಿಜೆಪಿ ಸಂಸ್ಕೃತಿಯಲ್ಲ ಎಂದು ತಿಳಿ ಹೇಳಿದರು.
ನಂತರ ವೇದಿಕೆಗೆ ಆಗಮಿಸಿದ ಮೋದಿಯವರಿಗೆ ಸಂಸದ ಮುನಿಸ್ವಾಮಿ (Muniswamy) ಮೂರುವರೆ ಅಡಿ ಎತ್ತರದ 30 ಕೆ.ಜಿ ತೂಕದ ಬುದ್ದನ ಪ್ರತಿಮೆಯನ್ನು ನೆನಪಿನ ಕಾಣಿಕೆಯನ್ನು ನೀಡಿದರು. ಇನ್ನೂ ಇದೇ ವೇಳೆ ಪ್ರಧಾನಿ ಮೋದಿ ಅವರಿಗೆ ಕರಿ ಕಂಬಳಿ ಹೊದಿಸಿ ಗೌರವಿಸಿದ ಮಾಜಿ ಸಚಿವ ವರ್ತೂರು ಪ್ರಕಾಶ್ (Varthur Prakash), ವಿಜಯದ ಕಂಬಳಿ ಬೀಸಿದರು. ಇದನ್ನೂ ಓದಿ: ಅಶ್ವಥ್ ನಾರಾಯಣ್ ಸಹಭಾಗಿತ್ವದಲ್ಲಿ ಮತ್ತೊಂದು ಹಗರಣ ನಡೆದಿದೆ: ಗೌರವ್ ವಲ್ಲಭ್ ಅರೋಪ
ಈ ವೇಳೆ ಮೋದಿ ಕಾಲಿಗೆ ಬಿದ್ದು ನಮಸ್ಕರಿಸಿದ ಮುಳಬಾಗಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿಗೇಹಳ್ಳಿ ಸುಂದರ್ ಹಾಗೂ ಇನ್ನಿತರರಿಗೆ ಮೋದಿ ತಲೆ ಭಾಗಿ ನಮಸ್ಕರಿಸಿದರು. ಅಲ್ಲದೆ ನೆರೆದಿದ್ದ ಜನರಿಗೆ ತಲೆ ಭಾಗಿ ನಮಸ್ಕರಿಸಿದ ಮೋದಿ ಅವರು, ಬಿಜೆಪಿಗೆ ಬೂಸ್ಟರ್ ಡೋಸ್ ನೀಡಿದರು. ಇದನ್ನೂ ಓದಿ: ಪ್ರಿಯಾಂಕಾ – ರಾಹುಲ್ ಗಾಂಧಿ ಬಿಜೆಪಿಗೆ ಅಡಿಷನಲ್ ಸ್ಟಾರ್ ಪ್ರಚಾರಕರು: ಸಿ.ಟಿ ರವಿ