ಹಾಸನ: ಪ್ರಿಯಾಂಕಾ -ರಾಹುಲ್ ಗಾಂಧಿ ಬಿಜೆಪಿಗೆ (BJP) ಅಡಿಷನಲ್ ಸ್ಟಾರ್ ಪ್ರಚಾರಕರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ (Narendra Modi) ಹೋದ ಕಡೆಯಲ್ಲಾ ಬಿಜೆಪಿ ಗೆಲ್ಲುತ್ತದೆ. ಅದೇ ರೀತಿ ಪ್ರಿಯಾಂಕಾ – ರಾಹುಲ್ ಗಾಂಧಿ (Rahul Gandhi) ಹೋದಲೆಲ್ಲ ಕಾಂಗ್ರೆಸ್ ಸೋಲುತ್ತದೆ. ಅವರು ಹೋದಲ್ಲೆಲ್ಲಾ ಕಾಂಗ್ರೆಸ್ (Congress) ಸೋಲುತ್ತೆ. ಮೋದಿ ಹೋದಲ್ಲೆಲ್ಲಾ ಬಿಜೆಪಿ ಗೆಲ್ಲುತ್ತೆ, ಹಿಂದಿನ ಫಲಿತಾಂಶ ನೋಡಿದಾಗ ಗೊತ್ತಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಅಶ್ವಥ್ ನಾರಾಯಣ್ ಸಹಭಾಗಿತ್ವದಲ್ಲಿ ಮತ್ತೊಂದು ಹಗರಣ ನಡೆದಿದೆ: ಗೌರವ್ ವಲ್ಲಭ್ ಅರೋಪ
Advertisement
Advertisement
ಮೋದಿ ಮೊದಲ ಬಾರಿ ಹಾಸನ ಜಿಲ್ಲೆಗೆ ಬಂದಿದ್ದಾರೆ. ಈ ಬಾರಿ ಹಾಸನ (Hassan) ಜಿಲ್ಲೆಯಲ್ಲೂ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಹಾಸನ, ಬೇಲೂರು, ಅರಸೀಕೆರೆ, ಸಕಲೇಶಪುರದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯಿದೆ. ಮೋದಿ ಆಗಮನ ಹಾಸನ ಜಿಲ್ಲೆಗೆ ಒಂದು ಸಂಚಲನ ಮೂಡಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಕ್‍ಪಿಟ್‍ಗೆ ಸ್ನೇಹಿತೆ ಕರೆದೊಯ್ದ ಪೈಲೆಟ್ – ಏರ್ ಇಂಡಿಯಾ ಸಿಇಒಗೆ ಶೋಕಾಸ್ ನೋಟಿಸ್