ಕಾರವಾರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದಿಂದ ಅಭಿಮಾನಿಯೊಬ್ಬ ಬರೋಬ್ಬರಿ 30 ಗಂಟೆಯಲ್ಲಿ ಬಂಗಾರದ ಕೇದಾರನಾಥ ದೇವಾಲಯವನ್ನು ನಿರ್ಮಿಸಿ ಉಡುಗೊರೆ ನೀಡಲು ತಯಾರಿ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಡವಾಡದ ನಿವಾಸಿ ಮಿಲಿಂದ ಉದಯಕಾಂತ ಅಣ್ವೇಕರ್ ಕೇದಾರನಾಥ ದೇವಸ್ಥಾನದ ಪ್ರತಿಕೃತಿಯನ್ನು ತಯಾರಿಸಿದ್ದಾರೆ. ಇವರು ಬೆಳ್ಳಿ, ಬಂಗಾರ ಹಾಗೂ ತಾಮ್ರ ಮಿಶ್ರಣ ಮಾಡಿದ 54 ಗ್ರಾಂ ತೂಕದ ಮೂರು ಇಂಚು ಅಗಲ, ಮೂರು ಇಂಚು ಉದ್ದದ ಕೇದಾರನಾಥ ಮಂದಿರ ನಿರ್ಮಾಣ ಮಾಡಿದ್ದು, ಮೋದಿ ಅವರಿಗೆ ಉಡುಗೊರೆ ನೀಡಲು ಮುಂದಾಗಿದ್ದಾರೆ.
Advertisement
Advertisement
ಅಣ್ವೇಕರ್ 30 ಗಂಟೆಯಲ್ಲಿ ಇದರ ನಿರ್ಮಾಣ ಮಾಡಿದ್ದು, ದೇವಸ್ಥಾನದ ಗರ್ಭ ಗುಡಿಯಲ್ಲಿ 4mm ನ ಅತಿಚಿಕ್ಕ ಬಂಗಾರದ ಶಿವಲಿಂಗ ಸಹ ನಿರ್ಮಿಸಲಾಗಿದೆ. ಮೂಲತಃ ಅಕ್ಕಸಾಲಿಗರಾಗಿರುವ ಇವರು 2013ರಲ್ಲಿ 19.975 ಇಂಚಿನ ಚೈನ್ ತಯಾರಿಸಿ ಲಿಮ್ಕಾ ದಾಖಲೆ ನಿರ್ಮಿಸಿದ್ದರು. ಈ ಬಾರಿ ಮೋದಿಯವರ ಇಷ್ಟ ದೈವ ಕೇದಾರನಾಥ ಮಂದಿರ ನಿರ್ಮಿಸಿ ಉಡುಗೊರೆ ಯಾಗಿ ನೀಡಲು ಬಯಸಿದ್ದಾರೆ. ಹೀಗಾಗಿ ಇದನ್ನು ನಿರ್ಮಿಸಿರುವುದಾಗಿ ಪಬ್ಲಿಕ್ ಟಿ.ವಿ ಗೆ ಮಾಹಿತಿ ನೀಡಿದ್ದಾರೆ.