– ತುರ್ತು ಪರಿಸ್ಥಿತಿ ಹೇರದೇ ಪ್ರಜಾಪ್ರಭುತ್ವವನ್ನು ಕೊಲ್ಲದೇ ದಾಖಲೆ
– ಕಾಂಗ್ರೆಸ್ಸಿಗೆ ಬಿಜೆಪಿ ಗುದ್ದು
ಬೆಂಗಳೂರು: ತುರ್ತು ಪರಿಸ್ಥಿತಿಯನ್ನು ಹೇರದೆ, ಪ್ರಜಾಪ್ರಭುತ್ವವನ್ನು ಕೊಲ್ಲದೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದಿರಾ ಗಾಂಧಿಯವರ (Indira Gandhi) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ ಎಂದು ಬಿಜೆಪಿ ಕಾಂಗ್ರೆಸಿಗೆ ತಿವಿದಿದೆ.
ಪ್ರಧಾನಿಯಾಗಿ 4,078 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಇಂದು ವಿಶೇಷ ಪೋಸ್ಟ್ ಹಾಕಿ ನರೇಂದ್ರ ಮೋದಿ ಅವರ 10 ಸಾಧನೆಯನ್ನು ಕೊಂಡಾಡಿದೆ.
And all this without imposing Emergency/killing democracy. https://t.co/ZJPsZYEAXE
— BJP Karnataka (@BJP4Karnataka) July 25, 2025
ಪೋಸ್ಟ್‌ನಲ್ಲಿ ಏನಿದೆ?
ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸತತ 4,078 ದಿನಗಳನ್ನು ಅಧಿಕಾರದಲ್ಲಿ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಇಂದಿರಾ ಗಾಂಧಿ (1966 ರಿಂದ 1977 ರವರೆಗೆ 4,077 ದಿನಗಳು) ಅವರನ್ನು ಮೀರಿಸುವ ಮೂಲಕ ಅಧಿಕೃತವಾಗಿ ಭಾರತದ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಇದು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ಮುಖ್ಯಸ್ಥರಾಗಿ ಪ್ರಧಾನಿ ಮೋದಿಯವರ ಸುಮಾರು 24 ವರ್ಷಗಳ ಪ್ರಯಾಣದಲ್ಲಿ ಕೇವಲ ಒಂದು ಮೈಲಿಗಲ್ಲಾಗಿದೆ ಎಂದು ಬಿಜೆಪಿ ಬರೆದಿದೆ. ಇದನ್ನೂ ಓದಿ: ದೇಶದ 2ನೇ ಅತಿ ಸುದೀರ್ಘ ಪ್ರಧಾನಿ ಮೋದಿ – ಇಂದಿರಾ ಗಾಂಧಿ ದಾಖಲೆ ಭಗ್ನ
ಮೋದಿ 10 ಸಾಧನೆಗಳು
1. ಭಾರತದ ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಮತ್ತು ಏಕೈಕ ಪ್ರಧಾನಿ
2. ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ಪ್ರಧಾನಿ
3. ಹಿಂದಿ ಮಾತನಾಡದ ರಾಜ್ಯದಿಂದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿ
4. ಎಲ್ಲಾ ಪ್ರಧಾನಿಗಳಲ್ಲಿ ಅತಿ ಹೆಚ್ಚು ಕಾಲ ಚುನಾಯಿತ ಸರ್ಕಾರದ (ರಾಜ್ಯ + ಕೇಂದ್ರ) ಮುಖ್ಯಸ್ಥರು
5. ಎರಡು ಪೂರ್ಣ ಅವಧಿಗಳನ್ನು ಪೂರ್ಣಗೊಳಿಸಿದ ಮೊದಲ ಮತ್ತು ಏಕೈಕ ಕಾಂಗ್ರೆಸ್ಸೇತರ ಪ್ರಧಾನಿ
6. ಎರಡು ಬಾರಿ ಮರು ಆಯ್ಕೆಯಾದ ಮೊದಲ ಮತ್ತು ಏಕೈಕ ಕಾಂಗ್ರೆಸ್ಸೇತರ ಪ್ರಧಾನಿ
7. ಸ್ವಂತವಾಗಿ ಲೋಕಸಭೆ ಬಹುಮತವನ್ನು ಗೆದ್ದ ಮೊದಲ ಮತ್ತು ಏಕೈಕ ಕಾಂಗ್ರೆಸ್ಸೇತರ ನಾಯಕ
8. ಇಂದಿರಾ ಗಾಂಧಿ (1971) ನಂತರ ಬಹುಮತದೊಂದಿಗೆ ಮರು ಆಯ್ಕೆಯಾದ ಮೊದಲ ಹಾಲಿ ಪ್ರಧಾನಿ ಇದನ್ನೂ ಓದಿ: Exclusive: ಸರ್ಕಾರದ ಅಧಿಕಾರಿಗಳ ನಡುವೆಯೇ ಬೀದಿ ಕಾಳಗ – ಸಿಎಂ & ಡಿಸಿಎಂ ವಿಶೇಷಾಧಿಕಾರಿಗಳ ಮಧ್ಯೆ ಜಗಳ
9. ನೆಹರೂ ಹೊರತುಪಡಿಸಿ ಸತತ ಮೂರು ರಾಷ್ಟ್ರೀಯ ಚುನಾವಣೆಗಳನ್ನು ಗೆದ್ದ ಏಕೈಕ ಪ್ರಧಾನಿ
10. ಪಕ್ಷದ ನಾಯಕರಾಗಿ ಸತತ ಆರು ಚುನಾವಣೆಗಳನ್ನು ಗೆದ್ದ ಭಾರತದ ಏಕೈಕ ನಾಯಕ:
🔹 2002 ಗುಜರಾತ್
🔹 2007 ಗುಜರಾತ್
🔹 2012 ಗುಜರಾತ್
🔹 2014 ಲೋಕಸಭೆ
🔹 2019 ಲೋಕಸಭೆ
🔹 2024 ಲೋಕಸಭೆ