ನವದಹಲಿ: ಪ್ರಧಾನಿ ನರೇಂದ್ರ ಮೋದಿ ಎರಡು ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿ ಹೊಂದಿದ್ದು, ಮನೆಯೊಂದನ್ನು ಬಿಟ್ಟು, ಕಾರು, ಬೈಕ್ ಸೇರಿದಂತೆ ಯಾವುದೇ ಚರಾಸ್ತಿಯನ್ನು ಹೊಂದಿಲ್ಲ.
ನರೇಂದ್ರ ಮೋದಿ ಅವರ ವಾರ್ಷಿಕ ಆಸ್ತಿ ವಿವರವನ್ನು ಪ್ರಧಾನಿ ಕಾರ್ಯಾಲಯ ಸ್ವಯಂ ಪ್ರೇರಣೆಯಿಂದ ಪ್ರಕಟಿಸಿದ್ದು, ಇದರಲ್ಲಿ 2018ರ ಮಾರ್ಚ್ 31ರ ವರೆಗಿನ ಮಾಹಿತಿಯನ್ನು ನೀಡಿದೆ.
Advertisement
48,944 ರೂ. ನಗದು, ಗುಜರಾತ್‍ನ ಗಾಂಧಿನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆಯಲ್ಲಿ 11,29,690 ರೂ. ಹಾಗೂ ಮತ್ತೊಂದು ಖಾತೆಯಲ್ಲಿ 1,09,96,288 ರೂ. ಠೇವಣಿ ಹೊಂದಿದ್ದಾರೆ ಎಂದು ತಿಳಿಸಲಾಗಿದೆ.
Advertisement
Advertisement
ಗಾಂಧಿನಗರಲ್ಲಿ ಮೋದಿ ಅವರು 2002ರಲ್ಲಿ ನಾಲ್ಕನೇ ಒಂದರಷ್ಟು ಷೇರು (1.30 ಲಕ್ಷ ರೂ.) ನೀಡಿ, ವಸತಿ ಕಟ್ಟಡವೊಂದನ್ನು ಖರೀದಿಸಿದ್ದರು. ಅದರ ಬೆಲೆ ಈಗ ಒಂದು ಕೋಟಿ ರೂ. ಮೌಲ್ಯ ಎಂದು ಅಂದಾಜಿಸಲಾಗಿದೆ.
Advertisement
ಮೋದಿ ಅವರು ಚರಾಸ್ತಿಯಾಗಿ ಮನೆಯನ್ನು ಮಾತ್ರ ಹೊಂದಿದ್ದಾರೆ. ಉಳಿದಂತೆ ಅವರ ಬಳಿ ಯಾವುದೇ ಸ್ವಂತ ಕಾರು, ಬೈಕ್ ಸೇರಿದಂತೆ ಯಾವುದೇ ವಾಹನಗಳು ಕೂಡಾ ಇಲ್ಲ ಎಂದು ಉಲ್ಲೇಖಿಸಲಾಗಿದೆ.
ನಾಲ್ಕು ಚಿನ್ನದ ಉಂಗುರಗಳಿದ್ದು, ಅವುಗಳ ಮೌಲ್ಯ 1,38,060 ರೂ. ಆಗಿದೆ. ಎಲ್ ಅಂಡ್ ಟಿ ಇನ್‍ಫ್ರಾಸ್ಟ್ರಕ್ಚರ್ ನಲ್ಲಿ ಸದ್ಯ 20,000 ರೂ. ಮೌಲ್ಯದ ಹೂಡಿಕೆ ಹಾಗೂ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಅಡಿ 5,18,235 ರೂ. ಹೂಡಿಕೆ ಮಾಡಿದ್ದಾರೆ. ಇದರ ಜೊತೆಗೆ 1,59,281 ರೂ. ಮೌಲ್ಯದ ಎಲ್‍ಐಸಿ ಪಾಲಿಸಿಯನ್ನು ಮೋದಿ ಹೊಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv