ಬಿಜೆಪಿ ಸರ್ಕಾರಕ್ಕೆ ರೆಡ್ ಅಲರ್ಟ್: ಅಖಿಲೇಶ್ ಯಾದವ್

Public TV
2 Min Read
Akhilesh Yadav

ಲಕ್ನೋ: ಸಮಾಜವಾದಿ ಪಕ್ಷ ಬೆಂಬಲಿಸುವ ಮುನ್ನ ಉತ್ತರಪ್ರದೇಶ ಜನರು ಎಚ್ಚರಿಕೆಯಿಂದಿರಿ. ಕೆಂಪು ಟೋಪಿ ಧರಿಸುವವರು ರಾಜ್ಯಕ್ಕೆ ಅಪಾಯಕಾರಿ. ಸಮಾಜವಾದಿ ಪಕ್ಷದ ಕೆಂಪು ಟೋಪಿ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಎಸ್‍ಪಿ ಮುಖಂಡ ಅಖಿಲೇಶ್ ಯಾದವ್, ಕೆಂಪು ಟೋಪಿಗಳು ಬಿಜೆಪಿ ಸರ್ಕಾರಕ್ಕೆ ರೆಡ್ ಅಲರ್ಟ್ ಅಗಿವೆ ಎಂದು ಟಾಂಗ್‍ ಕೊಟ್ಟಿದ್ದಾರೆ.

modi

ತಮ್ಮ ಪಕ್ಷದ ಸದಸ್ಯರ ಟ್ರೇಡ್‍ಮಾರ್ಕ್ ಕೆಂಪು ಟೋಪಿಗಳನ್ನು ಧರಿಸಿರುವ ಜನರು ಮುಂದಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಕಾರಣ ಬಿಜೆಪಿಗೂ ರೆಡ್ ಅಲರ್ಟ್ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

akhilesh yadav

ಮೋದಿ ಹೇಳಿದ್ದೇನು?: ಗೋರಖ್‍ಪುರದಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆ ಹಾಗೂ ಎಐಐಎಂಎಸ್ ಶಾಖೆ ಉದ್ಘಾಟಿಸಿದ ನಂತರ ಸಭೆಯಲ್ಲಿ ಅವರು ಮಾತನಾಡಿದರು. ಕೆಂಪು ಟೋಪಿ ಧರಿಸುವ ಈ ಜನರಿಗೆ ಸಾಮಾನ್ಯ ಜನರ ಬಗ್ಗೆ ಕಳಕಳಿ ಇಲ್ಲ. ಕೆಂಪು ಬಣ್ಣ ಅಪಾಯದ ಸಂಕೇತ. ರೆಡ್ ಕ್ಯಾಪ್ (ಕೆಂಪು ಟೋಪಿ) ಎಂದರೆ ಉತ್ತರ ಪ್ರದೇಶ ಪಾಲಿಗೆ ರೆಡ್ ಅಲರ್ಟ್ ಇದ್ದ ಹಾಗೆ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತಿ ಹೈಟೆಕ್ ಐಸಿಯು ವಾರ್ಡ್

narendra modi 1

ತಮ್ಮ ತಿಜೋರಿಯನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ಸಮಾಜವಾದಿ ಪಕ್ಷದ ನಾಯಕರಿಗೆ ಅಧಿಕಾರ ಬೇಕಾಗಿತ್ತು. ಜೈಲಿನಲ್ಲಿರುವ ಉಗ್ರರ ಬಿಡುಗಡೆ ಹಾಗೂ ಪಾತಕಿಗಳಿಗೆ ಮುಕ್ತ ಅವಕಾಶ ನೀಡುವುದಕ್ಕಾಗಿಯೂ ಅಧಿಕಾರ ಬೇಕಿತ್ತು. ಸಮಾಜವಾದಿ ಚಿಂತಕರಾದ ರಾಮಮನೋಹರ್ ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರು ಪ್ರತಿಪಾದಿಸಿದ ತತ್ವಗಳನ್ನು ಸಮಾಜವಾದಿ ಪಕ್ಷ ಪಾಲನೆ ಮಾಡುತ್ತಿಲ್ಲ ಎಂದು ವಾಗ್ದಾಳಿ ಮಾಡಿದದರು. ಈ ವಿಚಾರವಾಗಿ ಅಖಿಲೇಶ್ ಯಾದವ್, ಮೋದಿ ಅವರಿಗೆ ತಿರುಗೇಟು ಟ್ವೀಟ್ ಮೂಲಕವಾಗಿ ನೀಡಿದ್ದಾರೆ. ಇದನ್ನೂ ಓದಿ: ಕೆಂಪು ಟೋಪಿ ಧರಿಸಿದವರು ಉತ್ತರಪ್ರದೇಶಕ್ಕೆ ಅಪಾಯಕಾರಿ: ಮೋದಿ

ಟ್ವೀಟ್‍ನಲ್ಲಿ ಏನಿದೆ: ಬಿಜೆಪಿಗೆ ಕೆಂಪು ಟೋಪಿ ಜೊತೆಗೆ ಹಣದುಬ್ಬರ, ನಿರುದ್ಯೋಗ, ರೈತರು ಮತ್ತು ಕಾರ್ಮಿಕರ ದುಃಸ್ಥಿತಿ, ಹತ್ರಾಸ್ ಮತ್ತು ಲಖಿಂಪುರ ಖೇರಿ (ಘಟನೆಗಳು) ಮಹಿಳೆಯರು ಮತ್ತು ಯುವಕರ ದಬ್ಬಾಳಿಕೆ, ನಾಶವಾದ ಶಿಕ್ಷಣ ವ್ಯವಸ್ಥೆ, ವ್ಯಾಪಾರ ಮತ್ತು ಆರೋಗ್ಯದ ಬಗ್ಗೆ ರೆಡ್ ಅಲರ್ಟ್ ಇದೆ. ಇದು ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕುತ್ತದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *