ಕಾಂಗ್ರೆಸ್ ನಾಯಕರಿಗೆ ಮುಸಲ್ಮಾನರೇ ಅಪ್ಪ-ಅಮ್ಮ: ನಾರಾಯಣಸಾ ಭಾಂಡಗೆ

Public TV
1 Min Read
Narayan sa bandage

ಬಾಗಲಕೋಟೆ: ಕಾಂಗ್ರೆಸ್‍ಗರಿಗೆ ಮುಸಲ್ಮಾನರೇ ಅಪ್ಪ-ಅಮ್ಮ, ಕಾಂಗ್ರೆಸ್ ಪಕ್ಷ ಮುಸಲ್ಮಾನರ ಪಕ್ಷ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರೇ ಹೇಳಿದ್ದಾರಲ್ಲ ಎಂದು ಮೇಲ್ಮನೆಯ ಬಿಜೆಪಿ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

RAHUL 2

ಬಾಗಲಕೋಟೆಯಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಮಗುವನ್ನು ಹೆತ್ತವರು ನಾವು ಟ್ಯಾಕ್ಸ್ ಕಟ್ಟಬೇಕು. ಅದೇ 10 ಮಕ್ಕಳ ಹೆತ್ತವರು ಅದರ ಉಪಯೋಗ ಪಡೆದುಳ್ಳುತ್ತಿದ್ದಾರೆ. ಎಲ್ಲ ಸವಲತ್ತುಗಳನ್ನು ಮುಸಲ್ಮಾನರಿಗೆ ಕೊಡಬೇಕೆಂದು ಕಾಂಗ್ರೆಸ್ ಪಕ್ಷದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರಲ್ಲ ಎಂದು ಆಧಾರ ರಹಿತವಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ಭಟ್ಕಳದಲ್ಲಿ ಪಾಕಿಸ್ತಾನಿ ಮಹಿಳೆಗೆ ಆಧಾರ್ ಕಾರ್ಡ್ – ಚುನಾವಣೆ ಆಯೋಗದಿಂದ 100ಕ್ಕೂ ಹೆಚ್ಚು ಅರ್ಜಿಗಳು ವಜಾ

Manmohan Singh A

ಭಾರತ ಮಾತೆಯ ಬಗ್ಗೆ ಅವಮಾನ ಮಾಡಿದ ಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನ್ ಗಣಿ ಹುಮನಾಬಾದ್ ವಿರುದ್ಧ ಹರಿಹಾಯ್ದ ಭಾಂಡಗೆ, ಬಸವಣ್ಣನವರ ಬಗ್ಗೆ ಮಾತನಾಡಲು ಸೊಕ್ಕಾ ಈ ಮಕ್ಕಳಿಗೆ, ಹಿಡಿದು ಒದಿಬೇಕು ಇಂತಹವರಿಗೆ. ನಾನು ಇದ್ದಿದ್ರೆ ಮಾತ್ರ ಒದಿತಿದ್ದೆ. ಬಸವಣ್ಣನವರ ಬಗ್ಗೆ ಹೀನವಾಗಿ ಮಾತಾಡಿದ್ರೂ ಯಾವ ಮಠಾಧೀಶರು ಮಾತನಾಡಲಿಲ್ಲ. ನನಗೆ ಇದು ಆಶ್ಚರ್ಯ ಆಯಿತು. ಮಠಾಧೀಶರು ಸಹಿತ ರಾಜಕಾರಣಕ್ಕೆ ಇಳಿದಿದ್ದಾರೆ ಅಲ್ಲಿದ್ದವರು ಹೇಗೆ ಸುಮ್ಮನೇ ಕೂತ್ರೋ ಗೊತ್ತಿಲ್ಲ. ಜಿಲ್ಲಾ ಪೊಲೀಸರು ಉಸ್ಮಾನ್ ಗಣಿಯನ್ನು ಗಡಿಪಾರು ಮಾಡ್ತೀವಿ ಎಂದಿದ್ದಾರೆ ಎಂದರು. ಇದನ್ನೂ ಓದಿ: ಭಾರತ ಹಿಂದೂ ರಾಷ್ಟ್ರವಾಗುತ್ತಿದೆ, ಜನರಿಗೆ ಅಭದ್ರತೆ ಕಾಡುತ್ತಿದೆ: ಅನ್ಸಾರಿ

ಉಸ್ಮಾನ್ ಗಣಿ ಕೆಲ ದಿನಗಳ ಹಿಂದೆ ಭಾರತ ಮಾತಾಕಿ ಜೈ, ಗಾಯ್ ಮಾತಾಕಿ ಜೈ ಎಂದು ಅವಮಾನ ಮಾಡಿ ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ಮಾತಾಡಿದ್ದ. ಸದ್ಯಕ್ಕೆ ಗಣಿ ತಲೆ ಮರೆಸಿಕೊಂಡಿದ್ದಾನೆ ಇನ್ನೊಮ್ಮೆ ಅವನು ಬಾಯಿಂದ ಮಾತನಾಡದ ಹಾಗೆ ಮಾಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *