ನೇತ್ರದಾನ ಮಾಡೋದು ರಾಜ್ ಫ್ಯಾಮಿಲಿ ಟ್ರೆಡಿಷನ್ ಆಗಿದೆ: ಡಾ.ಭುಜಂಗ ಶೆಟ್ಟಿ

Public TV
2 Min Read
Dr. Bhujangashetti 1

ಬೆಂಗಳೂರು: ನೇತ್ರದಾನ ಮಾಡೋದು ರಾಜ್ ಫ್ಯಾಮಿಲಿ ಟ್ರೆಡಿಷನ್ ಆಗಿದೆ ಎಂದು ಹೇಳುವ ಮೂಲಕ ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಭುಜಂಗ ಶೆಟ್ಟಿಯವರು ಅಣ್ಣಾವ್ರ ಕುಟುಂಬವನ್ನು ಶ್ಲಾಘಿಸಿದರು.

Dr. Bhujangashetti

ನಾರಾಯಣ ನೇತ್ರಾಲಯ ಕಣ್ಣುದಾನ ಮಾಡಲು ಬಯಸುವವರಿಗಾಗಿ ಸುಲಭ ವಿಧಾನವನ್ನು ಕಂಡುಹಿಡಿದಿದ್ದು, ಆ ಯೋಜನೆಯನ್ನು ಅಪ್ಪು ಸಮಾಧಿ ಬಳಿ ನೆರವೇರಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ಅಪ್ಪುದು ಟ್ರ್ಯಾಜಿಕ್ ಡೆತ್ ಆಯ್ತು. ತಕ್ಷಣ ರಾಘಣ್ಣ ನನಗೆ ಕರೆ ಮಾಡಿ ತಿಳಿಸಿದರು. ಆಗ ನಾವು ಅಪ್ಪು ಕಣ್ಣನ್ನು ತೆಗೆದುಕೊಂಡೆವು. ಮರುದಿನವೇ ಅವರ ಕಣ್ಣನ್ನು ಇಬ್ಬರಲ್ಲ ನಾಲ್ವರಿಗೆ ಜೋಡಿಸಿದ್ದೇವೆ ಎಂದರು. ಇದನ್ನೂ ಓದಿ: ಅಪ್ಪು ಸಿನಿಮಾಗಳು ಈಗ ಲೆಕ್ಕಕ್ಕೆ ಬರೋದಿಲ್ಲ, ಅವನ ಸಮಾಜಸೇವೆ ಎಲ್ಲವನ್ನೂ ಪಕ್ಕಕ್ಕಿಟ್ಟಿದೆ: ರಾಘಣ್ಣ

Appu Samadhi 2

ಈ ಜಾಗದಲ್ಲಿಯೇ ನಾವು ಏಕೆ ಹೈ ಪ್ಲೇಡ್ಜಿಂಗ್ ಜಸ್ಟ್ ಕಾಲ್ ನಂಬರ್ ನ ಉದ್ಘಾಟನೆ ಮಾಡುತ್ತಿದ್ದೇವೆ, ನೇತ್ರದಾನ ಮಾಡುವುದು ಈ ಫ್ಯಾಮಿಲಿ ಟ್ರೆಡಿಷನ್. ಈ ಹಿಂದೆಯೂ ಅಣ್ಣಾವ್ರು, ಪಾರ್ವತಮ್ಮನವರು ಮತ್ತು ಅಪ್ಪು ನೇತ್ರದಾನ ಮಾಡಿದ್ದರು. ಅವರು ಇರುವ ಸ್ಥಳ ಇದು. ಅದಕ್ಕೆ ನಾವು ಇಲ್ಲೇ ಈ ಯೋಜನೆಗೆ ಚಾಲನೆಯನ್ನು ನೀಡುತ್ತಿದ್ದೇವೆ. ಇದಕ್ಕೆ ನಾವು ರಾಘಣ್ಣ, ಶಿವಣ್ಣ ಮತ್ತು ಅವರ ಕುಟುಂಬಕ್ಕೆ ವಂದನೆಗಳನ್ನು ತಿಳಿಸಬೇಕು ಎಂದರು.

Raghavendra Rajkumar

ಅಪ್ಪು ಕಣ್ಣು ಕೊಟ್ಟ ಮೇಲೆ 440ಕ್ಕೂ ಹೆಚ್ಚು ಮಂದಿ ಕಣ್ಣುದಾನ ಮಾಡಿದ್ದಾರೆ. ಯಾವತ್ತು ಇಷ್ಟು ಆಗಿರಲಿಲ್ಲ. 12 ಸಾವಿರ ಜನ ಕಣ್ಣುದಾನ ಮಾಡುವುದಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅಲ್ಲದೆ ಸಾಕಷ್ಟು ಜನ ಕಣ್ಣುದಾನ ಮಾಡಬೇಕು ಎಂದು ಕಾಲ್ ಮಾಡುತ್ತಿರುತ್ತಾರೆ. ಹೀಗಾಗಿ ನಾವು ಹೈ ಪ್ಲೇಡ್ಜಿಂಗ್ ಜಸ್ಟ್ ಕಾಲ್ ನಂಬರ್ ನ ಉದ್ಘಾಟನೆ ಮಾಡ್ತಾ ಇದ್ದೀವಿ. ನೇತ್ರದಾನ ಮಾಡಲು ಬಯಸುವವರು ‘ರಾಜ್‍ಕುಮಾರ್ ನೇತ್ರ ಬ್ಯಾಂಕ್’ ಗೆ ಮಿಸ್ ಕಾಲ್ ಕೊಟ್ಟು ನೋಂದಣಿ ಮಾಡಿಕೊಳ್ಳಬಹುದು ಎಂದು ವಿವರಿಸಿದರು. ಇದನ್ನೂ ಓದಿ:  ಅಪ್ಪು ಅಗಲಿ ಇಂದಿಗೆ 2 ತಿಂಗಳು – ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಅಭಿಮಾನಿಗಳ ದಂಡು

Appu Samadhi rabhvendra rajkumar 1

ನಟ, ನಿರ್ಮಾಪಕ ರಾಘವೇಂದ್ರ ರಾಜ್‍ಕುಮಾರ್ ಈ ವಿನೂತನ ಯೋಜನೆಗೆ ಚಾಲನೆ ನೀಡಿದ್ದು, ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿ ಬಳಿ ಈ ಕಾರ್ಯಕ್ರಮ ನಡೆಯಿತು. ಈ ವೇಳೆ ರಾಘವೇಂದ್ರ ಅವರು ನೇತ್ರದಾನದ ಯೋಜನೆಯ ನಂಬರ್ ಬಿಡುಗಡೆಗೊಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *