‘ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ

Public TV
2 Min Read
Nanny is a supersta

ನ್ನಡದ ಜನಪ್ರಿಯ ರಿಯಾಲಿಟ ಶೋ ‘ನನ್ನಮ್ಮ ಸೂಪರ್ ಸ್ಟಾರ್’ಗೆ ಅದ್ಧೂರಿ ತೆರೆಬಿದ್ದಿದೆ. ನವೆಂಬರ್ 27 ರಂದು ಅದ್ಧೂರಿಯಾಗಿ ಪ್ರಾರಂಭವಾಗಿದ್ದ ‘ನನ್ನಮ್ಮ ಸೂಪರ್ ಸ್ಟಾರ್’ ನಾಲ್ಕು ತಿಂಗಳು ಪ್ರದರ್ಶನಗೊಂಡ ಬಳಿಕ ಭಾನುವಾರ ಗ್ರ್ಯಾಂಡ್ ಫಿನಾಲೆ ನಡೆದಿದೆ. ಆನಂದ್ ಹಾಗೂ ಯಶಸ್ವಿನಿ ದಂಪತಿ ಪುತ್ರಿ ವಂಶಿಕಾ ಅಂಜನಿ ಕಶ್ಯಪ್ ವಿಜೇತರಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಕಿರುತೆರೆ ಕಲಾವಿದೆ ಪುನೀತಾ ಹಾಗೂ ಮಗಳು ಆರ್ಯ ಪಾಲಿಗೆ ಹೋಗಿದೆ, ಮೂರನೇ ಸ್ಥಾನವನ್ನ ವಿಂಧ್ಯಾ – ರೋಹಿತ್ ಮುಡಿಗೇರಿಸಿಕೊಂಡಿದ್ದಾರೆ.

namma super stear winner

ಹನ್ನೆರಡು ಅಮ್ಮಂದಿರು ಅವರ ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ರು. ಕನ್ನಡದ ಖಾಸಗಿ ವಾಹಿನಿಯ ಈ ವಿನೂತನ ರಿಯಾಲಿಟಿ ಶೋ ಕಳೆದ ನಾಲ್ಕು ತಿಂಗಳಿಂದ ಕರುನಾಡ ಅಮ್ಮ ಮಕ್ಕಳನ್ನ ರಂಜಿಸಿತ್ತು. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ

ಈ ಶೋಗೆ 12 ಅಮ್ಮ-ಮಕ್ಕಳ ಜೋಡಿ ಆಯ್ಕೆಯಾಗಿದ್ದು, ಕಿರುತೆರೆ ಲೋಕದಲ್ಲಿ ಮಿಂಚಿದ್ದ ಅಮ್ಮಂದಿರು ಹಾಗೂ ಅವರ ಪುಟಾಣಿ ಮಕ್ಕಳ ಟ್ಯಾಲೆಂಟ್ ಹಂಟಿಂಗ್ ಶೋ ಇದಾಗಿತ್ತು. ಮೊದಲ ಎಂಟ್ರಿಯಲ್ಲೇ ವಂಶಿಕಾ ಕರುನಾಡ ಜನಮನ ಗೆದ್ದುಬಿಟ್ಟಿದ್ರು. ಪಟಾ ಪಟಾ ಅಂತ ಮಾತನಾಡುವ ಪೋರಿ, ಗೊಂಬೆಯಂತೆ ಮುದ್ದಾಗಿ ಕುಣಿಯುವ ವಂಶಿಕ ತಂದೆಯಂತೆಯೇ ಮಾತಿನಲ್ಲೇ ಮೋಡಿ ಮಾಡಿದ ಬಾಲ ಪ್ರತಿಭೆ. ಇದೀಗ ಅಮ್ಮ ಯಶಸ್ವಿನಿ ಜೊತೆ ವಂಶಿಕಾ ಬಂಗಾರದ ನನ್ನಮ್ಮ ಸೂಪರ್ ಸ್ಟಾರ್ ಟ್ರೋಫಿ ಗೆದ್ದಿದ್ದಾಳೆ.

ವಂಶಿಕಾಗೆ ಟಫ್ ಫೈಟ್ ಕೊಟ್ಟಿದ್ದು ಬೇಬಿ ಆರ್ಯ. ಅಮ್ಮ ಪುನೀತಾ ಜೊತೆ ಸೈಲೆಂಟಾಗೇ ಎಂಟ್ರಿ ಕೊಟ್ಟ ಆರ್ಯ ಕೊನೆಗೆ ಜಬರ್ದಸ್ತ್ ಮನರಂಜನೆ ಕೊಟ್ಟ ಪುಟಾಣಿ, ಇದೀಗ ಎರಡನೇ ಸ್ಥಾನದಲ್ಲಿ ಗೆದ್ದಿದ್ದಾಳೆ.

ಮೂರನೇ ಸ್ಥಾನ ಮಾಸ್ ಬೇಬಿ ಎಂದೇ ಹೆಸರು ಪಡೆದುಕೊಂಡಿದ್ದ ರೋಹಿತ್ ಮುಡಿಗೇರಿದೆ. ಅಮ್ಮ ವಿಂಧ್ಯಾ ಜೊತೆ ಮಸ್ತ್ ಎಂಟರ್ಟೈನ್ಮೆಂಟ್ ಕೊಟ್ಟ ಈ ಪುಟಾಣಿ ಮೊದಲನೆ ಎಪಿಸೋಡ್‍ನಲ್ಲೇ ರಂಜಿಸಿ ಕನ್ನಡಿಗರ ಮನ ಗೆದ್ದಿದ್ದಳು. ಇದನ್ನೂ ಓದಿ: ದೃಢಸಂಕಲ್ಪ, ಜಾಣ್ಮೆ, ತಾಳ್ಮೆ ಇವು ಯಶಸ್ಸಿನ ಸೂತ್ರಗಳು: ಆನಂದ್ ಮಹೀಂದ್ರಾ

namma super staer

ಅನುಪಮ ಗೌಡ ನಿರೂಪಣೆ, ತಾರಾ ಅನೂರಾಧ, ಸೃಜನ್ ಲೋಕೇಶ್ ಹಾಗೂ ಅನುಪ್ರಭಾಕರ್ ನಿರ್ಣಾಯಕರ ಸ್ಥಾನದಲ್ಲಿದ್ದು ಕಾರ್ಯಕ್ರಮವನ್ನು ಅಂದಗೊಳಿಸಿದ್ದರು. ಇದೀಗ ಕರುನಾಡ ಏಕೈಕ ಅಮ್ಮ ಮಕ್ಕಳ ಮಮತೆಯ ಶೋ ಸಕ್ಸಸ್‍ಫುಲ್ ಆಗಿ ತೆರೆಬಿದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *