ಮೈಸೂರು: ನಂಜನಗೂಡಿನ ಹುಚ್ಚುಗಣಿ ದೇವಾಲಯ ಧ್ವಂಸ, ಅಧಿಕಾರಿಗಳಿಂದ ತಪ್ಪಾಗಿದೆ. ಅವರು ಮಾಡಿದ್ದು ಸರಿಯಲ್ಲ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ನಗರದಲ್ಲಿಂದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡಿನ ಹುಚ್ಚುಗಣಿ ದೇವಸ್ಥಾನ ತೆರುವು ಮಾಡಿದ್ದು ಸರಿಯಲ್ಲ. ಅಧಿಕಾರಿಗಳು ಸರ್ಕಾರದ ಗಮನಕ್ಕೆ ಬಾರದಂತೆ ಈ ಕೆಲಸ ಮಾಡಿದ್ದಾರೆ. ಈ ವಿಚಾರದಲ್ಲಿ ಅಧಿಕಾರಿಗಳ ತಲೆದಂಡದ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಯೋಚನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಸ್ತೆಬದಿ ದಹಿ ಕಚೋರಿ ಮಾರುವ 14ರ ಬಾಲಕನ ಭಾವನಾತ್ಮಕ ಕಥೆ
Advertisement
Advertisement
ದೇವಸ್ಥಾನದ ವಿಚಾರ, ಅಧಿವೇಶನದಲ್ಲು ಚರ್ಚೆ ಆಗಿದೆ. ದೇವಸ್ಥಾನಗಳ ಬಗ್ಗೆ ಸರ್ಕಾರ ಮಸೂದೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇದು ಜನರ ಭಾವನಾತ್ಮಕ ವಿಚಾರ, ಅವರ ಭಾವನೆಗೂ ಬೆಲೆ ಕೊಡಬೇಕು. ಉಚ್ಚ ನ್ಯಾಯಾಲಯದ ಅದೇಶವನ್ನು ಪಾಲನೆ ಮಾಡಿಕೊಂಡು ಮಸೂದೆ ಜಾರಿಗೆ ತರಲಾಗುವುದು ಎಂದರು. ಈ ಮಸೂದೆಯಿಂದ ರಾಜ್ಯದಲ್ಲಿ ಸಾವಿರಾರು ದೇವಾಲಯಗಳು ರಕ್ಷಣೆಯಾಗಲಿವೆ. ಎಲ್ಲಾ ದೇವಸ್ಥಾನ, ಚರ್ಚ್, ಮಸೀದಿಗಳ ರಕ್ಷಣೆಯನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು. ಇದನ್ನೂ ಓದಿ: ಮಳೆಗಾಗಿ ಭಕ್ತನಿಂದ ಪ್ರಾರ್ಥನೆ – ಹೂ ಪ್ರಸಾದ ನೀಡಿದ ಆಂಜನೇಯ
Advertisement
ಹುಚ್ಚುಗಣಿ ದೇವಸ್ಥಾನ ತೆರುವು ಮಾಡಿದ್ದು, ರಾಜ್ಯದೆಲ್ಲೆಡೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಸರ್ಕಾರದ ಈ ನಿಲುವಿಗೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಜನರ ಆಕ್ರೋಶಕ್ಕೆ ಬೆದರಿದ ಸರ್ಕಾರ, ಹುಚ್ಚುಗಣಿ ದೇವಸ್ಥಾನದ ಮರುನಿರ್ಮಾಣ ಮಾಡುವ ಭರವಸೆಯನ್ನು ನೀಡಿದೆ.