ಬೆಂಗಳೂರು/ನೆಲಮಂಗಲ: ಮಳೆಗಾಗಿ ಹನುಮನ ಭಕ್ತರೊಬ್ಬರು ಆಂಜನೇಯನಿಗೆ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಭಕ್ತಿಗೆ ಮೆಚ್ಚಿದ ಆಂಜನೇಯ ಭಕ್ತನಿಗೆ ಹೂವನ್ನು ಪ್ರಸಾದವಾಗಿ ನೀಡಿದ್ದಾನೆ.
ಹಳೇ ಮೈಸೂರು ಭಾಗದಲ್ಲಿ ವರುಣನ ಕಣ್ಣಾಮುಚ್ಚಾಲೆ ಆಟದಿಂದ ಕೇವಲ ಸಾಧಾರಣವಾಗಿ ಮಳೆಯಾಗುತ್ತಿದೆ. ಈ ನಡುವೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನಲ್ಲಿ ಕೂಡ ರೈತರು ಬೆಳೆದಿರುವ ನಾನಾ ಬೆಳೆಗಳು ಉತ್ತಮ ಮಳೆಯಿಲ್ಲದೇ ಒಣಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಮಳೆಗಾಗಿ ಹನುಮ ಭಕ್ತರೊಬ್ಬರು ಬೆಟ್ಟದ ಆಂಜನೇಯನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ತುಂಬಾ ಮಿಸ್ ಮಾಡ್ಕೊಳ್ತೇನೆ – ಐಟಿ ಅಧಿಕಾರಿಗಳಿಗೆ ಹೇಳಿದ್ರಂತೆ ಸೋನು ಸೂದ್
Advertisement
Advertisement
ಪುರಾತನ ಇತಿಹಾಸ ಇರುವ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿಯ ನಿಜಗಲ್ಲು ಸಿದ್ದರಬೆಟ್ಟದ ಆಂಜನೇಯ ಸ್ವಾಮಿಯ ಮುಂದೆ ಮಳೆಗಾಗಿ ಮೂರು ದಿನದಿಂದ ನಿರಂತರ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ ಭಕ್ತನಿಗೆ ಆಂಜನೇಯ ಹೂ ಪ್ರಸಾದವನ್ನು ನೀಡಿ ಅಚ್ಚರಿ ಮೂಡಿಸಿದ್ದಾನೆ. ಇನ್ನೂ ಬಲಗಡೆ ಹೂ ಪ್ರಸಾದ ನೀಡುವ ಮೂಲಕ ವಿಸ್ಮಯ ನಡೆದಿದೆ ಎಂದು ನಂಬಿರುವ ಭಕ್ತರು ಹಾಗೂ ರೈತರು ಮಳೆಯ ಮುನ್ಸೂಚನೆ ಸಿಕ್ಕಿದೆ ಎಂದು ಸಂತಸಗೊಂಡಿದ್ದಾರೆ. ಇದನ್ನೂ ಓದಿ: ರಸ್ತೆಬದಿ ದಹಿ ಕಚೋರಿ ಮಾರುವ 14ರ ಬಾಲಕನ ಭಾವನಾತ್ಮಕ ಕಥೆ
Advertisement
Advertisement