ಚಿತ್ರರಂಗದಲ್ಲಿ ಬಾಲಿವುಡ್ ಸಿನಿಮಾಗಳ ಎದುರು ದಕ್ಷಿಣದ ಚಿತ್ರಗಳು ಸೌಂಡ್ ಮಾಡುತ್ತಿದೆ. ಈ ವೇಳೆ ಭಾಷಾ ಚರ್ಚೆಗಳ ಬಗ್ಗೆ ನ್ಯಾಚುರಲ್ ಸ್ಟಾರ್ ನಾನಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಚಿತ್ರರಂಗವನ್ನ ಸೌತ್ ವರ್ಸಸ್ ನಾರ್ತ್ ಎಂದವರಿಗೆ ಸ್ಟುಪಿಡ್ ಎಂದು ನಟ ನಾನಿ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಬಿಟೌನ್ ಅಂಗಳದಲ್ಲಿ ಹಿಂದಿ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲಲು ಹೆಣಗಾಡುತ್ತಿವೆ. ಆರ್‌ಆರ್‌ಆರ್, ಪುಷ್ಪ, `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಬಾಲಿವುಡ್‌ನಲ್ಲಿ ಹಿಂದಿ ಚಿತ್ರಗಳಿಗೆ ನೆಲೆ ಇಲ್ಲದಂತಾಗಿದೆ. ಉತ್ತರ ಮತ್ತು ದಕ್ಷಿಣ ಸಿನಿಮಾಗಳು ಅಂತಾ ವಿಭಜನೆಯಾಗುತ್ತಿದೆ. ಈ ಕುರಿತು ಇದೀಗ ಸ್ಟಾರ್ ನಟ ನಾನಿ ಮಾತನಾಡಿದ್ದಾರೆ. ಇದನ್ನೂ ಓದಿ: ಥೈಲ್ಯಾಂಡ್ ಟ್ರಿಪ್‌ನಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್
Advertisement
Advertisement
ಒಳ್ಳೆಯ ಕಂಟೆಂಟ್ ಸಿನಿಮಾ ಕೊಟ್ಟರೆ ಗೆಲ್ಲುತ್ತದೆ ಅಂತಹ ಚಿತ್ರಗಳನ್ನು ಪ್ರೇಕ್ಷಕರು ಎಂದು ಕೈ ಬಿಡುವುದಿಲ್ಲ. ನಾವುಗಳೇ ಬಾಲಿವುಡ್,ಹಾಲಿವುಡ್, ಟಾಲಿವುಡ್, ಕಾಲಿವುಡ್ ಎಂದು ವಿಭಜಿಸಿದ್ದೇವೆ. ಎಲ್ಲರೂ ಯಾಕೆ ಈ ರೀತಿ ಕರೆಯುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಭಾಷೆಗಳು ವಿಭಿನ್ನವಾಗಿರಬಹುದು ಆದರೆ ನಾವು ಒಂದೇ ರಾಷ್ಟ್ರ. ಭಾಷೆ ಬೇರೆ ಇರಬಹುದು, ನಾವೆಲ್ಲ ಒಂದೇ ಚಿತ್ರರಂಗ ಎಂದು ಮಾತನಾಡಿದ್ದಾರೆ.
Advertisement
ಸೌರ್ತ್ ಮತ್ತು ನಾರ್ತ್ ಸಿನಿಮಾಗಳು ಎಂದು ಕರೆಯುವವರಿಗೆ `ಸ್ಟುಪಿಡ್’ ಎಂದು ನಟ ನಾನಿ ರಿಯಾಕ್ಟ್ ಮಾಡಿದ್ದಾರೆ. ಒಟ್ನಲ್ಲಿ ನಾನಿ ಹೇಳಿರುವ ವಿಚಾರ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.