CinemaKarnatakaLatestMain PostSouth cinema

ತೆಲುಗಿನ ಖ್ಯಾತ ನಟನಿಗೆ ಬೆವರಳಿಸಿದ ಕನ್ನಡಿಗರು: ಕೊನೆಗೂ ಕ್ಷಮೆ ಕೇಳಿದ ನಟ

ಕ್ಷಿಣದ ಬಹುತೇಕ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿವೆ. ಆರ್.ಆರ್.ಆರ್, ಪುಷ್ಪಾ, ಕೆಜಿಎಫ್ 2 ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಬೇರೆ ಬೇರೆ ಭಾಷೆಗೆ ಡಬ್ ಆಗಿ, ಸಖತ್ ಕಮಾಯಿ ಮಾಡುತ್ತಿವೆ. ಈ ನಡುವೆ ತೆಲುಗಿನ ನ್ಯಾಚುರಲ್ ಸ್ಟಾರ್ ಎಂದೇ ಖ್ಯಾತರಾಗಿರುವ ನಾನಿ ನಟನೆಯ ಸಿನಿಮಾವೊಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಕುರಿತು ಮೊನ್ನೆಯಷ್ಟೇ ಪ್ರೆಸ್ ಮೀಟ್ ಕೂಡ ಆಗಿದೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

ಸದ್ಯ ನಾನಿ ನಟನೆಯ ‘ಅಂತೆ ಸುಂದರಾನಿಕಿ’ ಸಿನಿಮಾ ಹಲವು ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಎಲ್ಲ ಭಾಷೆಗೂ ನಿಮ್ಮ ಸಿನಿಮಾ ಡಬ್ ಆಗಿದೆ. ಕನ್ನಡಕ್ಕೆ ಯಾಕೆ ಡಬ್ ಆಗಿಲ್ಲ’ ಎಂಬ ಪ್ರಶ್ನೆಯೊಂದು ಎದುರಾಯಿತು. ಈ ಪ್ರಶ್ನೆಗೆ ಧೈರ್ಯದಿಂದಲೇ ಉತ್ತರಿಸಿದ ನಾನಿ, ‘ಕನ್ನಡಿಗರಿಗೆ ತೆಲುಗು ತುಂಬಾ ಚೆನ್ನಾಗಿ ಬರುತ್ತದೆ. ಅವರು ಅದೇ ಭಾಷೆಯಲ್ಲೇ ಸಿನಿಮಾ ನೋಡುತ್ತಾರೆ. ಕನ್ನಡಕ್ಕೆ ಈ ಸಿನಿಮಾವನ್ನು ಡಬ್ ಮಾಡುವುದರ ಅವಶ್ಯಕತೆ ಇಲ್ಲ’ ಎಂದು ಉತ್ತರ ಕೊಟ್ಟಿದ್ದರು. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

ನಾನಿ ಈ ಉತ್ತರಕ್ಕೆ ಕನ್ನಡಿಗರ ಗರಂ ಆಗಿದ್ದರು. ‘ಬೈಕಾಟ್ ಅಂತೆ ಸುಂದರಾನಿಕಿ’ ಎನ್ನುವ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಸಿನಿಮಾವನ್ನು ಬೈಕಾಟ್ ಮಾಡುವುದಾಗಿ ಕೆಲವು ಕನ್ನಡಿಗರು ಹೇಳಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ನಾನಿ, ಕನ್ನಡಿಗರಿಗೆ ಕ್ಷಮೆ ಕೇಳಿದ್ದಾರೆ. ನನಗೆ ಕನ್ನಡದ ಬಗ್ಗೆ ಅಪಾರ ಗೌರವವಿದೆ. ಭಾಷೆಗೆ ನಾನು ಅವಹೇಳನ ಮಾಡಿಲ್ಲ. ಕನ್ನಡಿಗರಿಗೆ ತೆಲುಗು ಚೆನ್ನಾಗಿ ಗೊತ್ತಿದೆ ಎಂದು ಹೆಮ್ಮೆಯಿಂದ ಹೇಳಿದ್ದೆ. ಅದನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

ಅಪಾಲಜಿ ಕೇಳಿದ ವಿಷಯವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಕನ್ನಡಿಗರ ಬಗ್ಗೆ ತಮಗೆ ಅಪಾರ ಗೌರವ ಇರುವುದಾಗಿಯೂ ನಾನಿ ಹೇಳಿದ್ದಾರೆ. ಕನ್ನಡಿಗರ ಎಲ್ಲ ಭಾಷೆಯನ್ನೂ ಪ್ರೀತಿಸುತ್ತಾರೆ. ನನ್ನ ಮಾತಿನಿಂದ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ನಾನಿ.

Leave a Reply

Your email address will not be published.

Back to top button