ಬೆಂಗಳೂರು: ಅಸಮಾಧಾನಿತರನ್ನು ಸಮಾಧಾನ ಪಡಿಸಲು ಬಿಜೆಪಿ ಮುಂದಾಗಿದ್ದು, ಮಾಜಿ ಶಾಸಕ ನಂದೀಶ್ ರೆಡ್ಡಿ ಅವರನ್ನು ರಾಜ್ಯ ಬಿಜೆಪಿ (BJP) ಉಪಾಧ್ಯಕ್ಷರಾಗಿ ನೇಮಿಸಿ ಆದೇಶ ಹೊರಡಿಸಿದೆ.
ಇತ್ತೀಚೆಗೆ ನಂದೀಶ್ ರೆಡ್ಡಿ (Nandiesha Reddy) ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಹೀಗಾಗಿ, ಕಾಂಗ್ರೆಸ್ (Congress) ಸೇರುವ ಬಗ್ಗೆ ಮನಸ್ಸು ಮಾಡಿದ್ದಾರೆಂಬ ಸುದ್ದಿ ಹರಿದಾಡಿತ್ತು. ಅಷ್ಟೇ ಅಲ್ಲ ಸಚಿವ ಬೈರತಿ ಬಸವರಾಜು ವಿರುದ್ಧ ರೆಡ್ಡಿ ಬಂಡಾಯ ಎದ್ದಿದ್ದರು. ಇದನ್ನೂ ಓದಿ: ಹಳೆ ದೋಸ್ತಿಗಳ ಹೊಸ ಕುಸ್ತಿ – ಮಾತೃ ಪಕ್ಷವನ್ನು ಟಾರ್ಗೆಟ್ ಮಾಡಿದ ಗುರು, ಶಿಷ್ಯ
ನಂದೀಶ್ ರೆಡ್ಡಿಗೆ ಪಕ್ಷದಲ್ಲಿ ಮಹತ್ವದ ಸ್ಥಾನ ಕೊಟ್ಟು ಹಿಡಿದಿಟ್ಟುಕೊಳ್ಳುವ ತಂತ್ರವನ್ನು ಬಿಜೆಪಿ ಮಾಡಿದೆ. ಹೀಗಾಗಿ ಅವರನ್ನು ಪಕ್ಷದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಿದೆ.
ಜೊತೆಗೆ ಚಾಮರಾಜನಗರ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾಗಿ ಜಿ.ನಾರಾಯಣ ಪ್ರಸಾದ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ನನ್ನನ್ನು ಟಗರು ಅಂತಾರೆ.. ಆದ್ರೆ ನಾನು ಎಲ್ಲಾ ಜಾತಿಯ ಬಡವರ ಪರ – ಸಿದ್ದರಾಮಯ್ಯ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k