ಚಿಕ್ಕಬಳ್ಳಾಪುರ: ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟವನ್ನು ಇಂದಿನಿಂದ ಮತ್ತೆ ತೆರೆಯಲಾಗಿದ್ದು, ನಂದಿ ಬೆಟ್ಟ ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.
Advertisement
ಆಗಸ್ಟ್ 24 ರಂದು ಭೂ ಕುಸಿತ ಉಂಟಾಗಿಗಿ ನಂದಿಬೆಟ್ಟದ ರಸ್ತೆ ಕೊಚ್ಚಿ ಹೋಗಿತ್ತು. ಇದರಿಂದ ವಾಹನಗಳ ಸಂಚಾರ ಸಂಪೂರ್ಣ ಕಡಿತಗೊಂಡಿತ್ತು. ಈಗ 80 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಕೊಚ್ಚಿ ಹೋದ ರಸ್ತೆ ದುರಸ್ಥಿ ಕಾರ್ಯ ಪೂರ್ಣಗೊಂಡ ಹಿನ್ನೆಲೆ ಮೂರು ತಿಂಗಳ ನಂತರ ನಂದಿಗಿರಿಧಾಮದ ಬಾಗಿಲನ್ನು ತೆರೆಯಲಾಗಿದ್ದು, ನಂದಿಬೆಟ್ಟಕ್ಕೆ ಪ್ರವಾಸಿಗರು ಆಗಮಿಸಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಶಾಲೆಯಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ- ಮೂರು ಮಕ್ಕಳು ಸಾವು
Advertisement
Advertisement
ಮುಂಜಾನೆ ಚುಮು, ಚುಮು ಚಳಿ ಮಂಜಿನ ನಡುವೆ ಕಾರು ಹಾಗೂ ಬೈಕ್‍ಗಳಲ್ಲಿ ನೂರಾರು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೊರೊನಾ ಹಾಗೂ ಓಮಿಕ್ರಾನ್ ವೈರಸ್ ಆತಂಕದ ಹಿನ್ನೆಲೆಯಲ್ಲಿ ವೀಕೆಂಡ್‍ನಲ್ಲಿ ನಿಬರ್ಂಧ ವಿಧಿಸಲಾಗಿದೆ. ಆದರೆ ಎರಡು-ಮೂರು ವಾರಗಳ ಕಾಲ ಪ್ರವಾಸಿಗರ ಆಗಮನದ ಸಂಖ್ಯೆಗೆ ಅನುಗುಣವಾಗಿ ವೀಕೆಂಡ್‍ನಲ್ಲಿ ಅವಕಾಶ ಕಲ್ಪಿಸಲು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ. ಇದನ್ನೂ ಓದಿ: ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ – ಇಂದಿನಿಂದ ಆಟೋ ದರ ಕಾಸ್ಟ್ಲಿ
Advertisement