ವಾಷಿಂಗ್ಟನ್: ಮಧ್ಯಂತರ ಚುನಾವಣೆಯಲ್ಲಿ ಪಕ್ಷದ ನಿಯಂತ್ರಣವನ್ನು ರಿಪಬ್ಲಿಕನ್ನರು ಪಡೆದ ಬಳಿಕ ಅಮೆರಿಕದ ಹೌಸ್ ಸ್ಪೀಕರ್ (US House Speaker) ನ್ಯಾನ್ಸಿ ಪೆಲೋಸಿ (Nancy Pelosi) ಅವರು ಹೊಸ ಕಾಂಗ್ರೆಸ್‌ನಲ್ಲಿ ನಾಯಕತ್ವದ ಸ್ಥಾನವನ್ನು ಬಯಸುವುದಿಲ್ಲ ಎಂದಿದ್ದಾರೆ. ಈ ಮೂಲಕ ಮೊದಲ ಮಹಿಳಾ ಹೌಸ್ ಸ್ಪೀಕರ್ ಎಂಬ ಐತಿಹಾಸಿಕ ಸ್ಥಾನವನ್ನು ಪೆಲೋಸಿ ತ್ಯಜಿಸಿದ್ದಾರೆ.
ಡೆಮೋಕ್ರಾಟ್‌ನವರು ಪಕ್ಷದ ನಿಯಂತ್ರಣವನ್ನು ಕಳೆದುಕೊಂಡ ಬಳಿಕ ಮಾತನಾಡಿದ ನ್ಯಾನ್ಸಿ ಪೆಲೋಸಿ, ಹೊಸ ಪೀಳಿಗೆಗೆ ಪಕ್ಷವನ್ನು ಮುನ್ನಡೆಸಲು ದಾರಿ ಮಾಡಿಕೊಡುವುದಾಗಿ ಹೇಳಿದ್ದಾರೆ.
Advertisement
Advertisement
ಸುಮಾರು 20 ವರ್ಷಗಳ ಕಾಲ ಡೆಮೋಕ್ರಾಟ್ ಹಿಡಿತವನ್ನು ಮುನ್ನಡೆಸಿದ್ದ ಪೆಲೋಸಿ ಕಳೆದ ತಿಂಗಳು ತಮ್ಮ ಪತಿಯ ಮೇಲೆ ನಡೆದ ದಾಳಿಯಿಂದಾಗಿ ಆಘಾತಕ್ಕೊಳಗಾಗಿದ್ದರು. ಪೆಲೋಸಿ ಅವರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಮನೆಗೆ ದುಷ್ಕರ್ಮಿಯೊಬ್ಬ ನುಗ್ಗಿ, ಅವರ ಪತಿ ಪಾಲ್ ಮೇಲೆ ಕ್ರೂರವಾಗಿ ದಾಳಿ ನಡೆಸಿದ್ದ. ಇದಾದ ಬಳಿಕ ಪೆಲೋಸಿ ತಮ್ಮ ಉನ್ನತ ಸ್ಥಾನದಿಂದ ಹಿಂದೆ ಸರಿಯುವ ಬಗ್ಗೆ ತಿಳಿಸಿದ್ದರು. ಇದನ್ನೂ ಓದಿ: ಖರೀದಿಸಿದ ಆರೇ ತಿಂಗಳಲ್ಲಿ ವಾಹನ ರಿಪೇರಿ- ಹಳೆ ಇಂಜಿನ್‍ಗೆ ಹೊಸ ಬಾಡಿ ಹಾಕಿರುವ ಆರೋಪ
Advertisement
Advertisement
ಮುಂದಿನ ಕಾಂಗ್ರೆಸ್‌ನಲ್ಲಿ ನಾನು ಡೆಮಾಕ್ರಟಿಕ್ ನಾಯಕತ್ವಕ್ಕೆ ಮರುಚುನಾವಣೆಯನ್ನು ಬಯಸುವುದಿಲ್ಲ. ಇದೀಗ ಡೆಮಾಕ್ರಟಿಕ್ ಸಭೆಯನ್ನು ಮುನ್ನಡೆಸಲು ಹೊಸ ಪೀಳಿಗೆಗೆ ಸಮಯ ಬಂದಿದೆ. ನಾನು ಈ ಕ್ಷಣವನ್ನು ಗೌರವಿಸುತ್ತೇನೆ. ಈಗ ನಾವು ಭವಿಷ್ಯದಲ್ಲಿ ಧೈರ್ಯದಿಂದ ಸಾಗಬೇಕಿದೆ ಎಂದು ಪೆಲೋಸಿ ಭಾಷಣದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಗಾಜಾದ ನಿರಾಶ್ರಿತರ ಶಿಬಿರದಲ್ಲಿ ಭೀಕರ ಅಗ್ನಿ ಅವಘಡ – 7 ಮಕ್ಕಳು ಸೇರಿ 21 ಸಾವು