ಬಿಗ್ ಬಾಸ್ ಕನ್ನಡ 10ರ ಆಟಕ್ಕೆ (Bigg Boss Kannada 10) ಅಂತಿಮ ಪರದೆ ಬೀಳುವ ಸಮಯ ಬಂದಿದೆ. ತುಕಾಲಿ ಸಂತು ನಂತರ ಸ್ಟ್ರಾಂಗ್ ಸ್ಪರ್ಧಿಯೊಬ್ಬರು ಮನೆಯಿಂದ ಹೊರಬಂದಿದ್ದಾರೆ. ಸದ್ಯ 5 ಸ್ಪರ್ಧಿಗಳ ಭವಿಷ್ಯ ನಮ್ರತಾ (Namratha Gowda) ಕೈಯಲ್ಲಿದೆ.
ತುಕಾಲಿ ಸಂತು (Tukali Santhu) ಔಟ್ ಆದ್ಮೇಲೆ ಈಗ ಮನೆಯಲ್ಲಿ 5 ಜನ ಸ್ಪರ್ಧಿಗಳಿದ್ದಾರೆ. ಕಾರ್ತಿಕ್, ವಿನಯ್, ಸಂಗೀತಾ, ವರ್ತೂರು, ಪ್ರತಾಪ್ ಇದ್ದಾರೆ. ಈ 5 ಜನ ಸ್ಪರ್ಧಿಗಳಲ್ಲಿ ಒಬ್ಬರಿಗೆ ದೊಡ್ಮನೆ ಆಟ ಅಂತ್ಯವಾಗಿದೆ. ಇದನ್ನೂ ಓದಿ:ನನ್ನ ಮಗನನ್ನು ವಾಪಸ್ಸು ಕೊಟ್ಟಿದ್ದೀರಿ: ಡ್ರೋನ್ ತಾಯಿ ಕಣ್ಣೀರು
ಸುದೀಪ್ (Sudeep) ಕಾರ್ಯಕ್ರಮ ಶುರುವಿನಲ್ಲೇ ಶಾಕ್ ಕೊಟ್ಟಂತಿದೆ. ಈ ಕವರ್‌ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಯ ಹೆಸರಿದೆ. ನಿಮಗೆ ಪರಿಚಯ ಇರುವ ಒಬ್ಬರು ಮನೆಯೊಳಗೆ ಬರುತ್ತಾರೆ. ಆ ಸ್ಪರ್ಧಿಯ ಹೆಸರು ಹೇಳಿ ಹೊರ ಕರೆದುಕೊಂಡು ಬರುತ್ತಾರೆ ಎಂದು ಸುದೀಪ್ ಅನೌನ್ಸ್ ಮಾಡಿದ್ದಾರೆ.
ಬಳಿಕ ನಮ್ರತಾ ಅವರು ಬಿಗ್ ಮನೆಯೊಳಗೆ ಎಂಟ್ರಿ ಕೊಟ್ಟು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ನಂತರ ನಮ್ರತಾ, ಕವರ್ ತೆಗೆದು ಇವರು ಟಾಪ್ 2ನಲ್ಲಿ ಇರುತ್ತಾರೆ ಎಂಬ ನಿರೀಕ್ಷೆ ತುಂಬಾನೇ ಇತ್ತು ಆದರೆ.. ಅವರೇ ಹೊರಬರುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ನಮ್ರತಾ ಶಾಕ್ ಕೊಟ್ಟಿದ್ದಾರೆ. ಸದ್ಯ ಎಲಿಮಿನೇಟ್ ಆಗಿರುವ ಆ ಸ್ಪರ್ಧಿ ಯಾರು ಎಂಬುದು ಕುತೂಹಲ ಕೆರಳಿಸಿದೆ. ಈ ಕುರಿತ ಪ್ರೋಮೋ ವಾಹಿನಿಯ ಖಾತೆಯಲ್ಲಿ ಸದ್ದು ಮಾಡುತ್ತಿದೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ನಮ್ರತಾ ಅನೌನ್ಸ್ ಮಾಡಿರುವ ಆ ಸ್ಪರ್ಧಿ ಹೆಸರು ವರ್ತೂರು ಸಂತೋಷ್ (Varthur Santhosh) ಎನ್ನಲಾಗುತ್ತಿದೆ. ಈ ಸುದ್ದಿ ನಿಜಾನಾ ಬಿಗ್ ಬಾಸ್ (Bigg Boss) ಎಪಿಸೋಡ್ ಪ್ರಸಾರ ಆಗುವವರೆಗೂ ಕಾಯಬೇಕಿದೆ.