ಬಿಗ್ ಬಾಸ್ (Bigg Boss) ಮನೆಯ ಆಟ ಇದೀಗ ಫಿನಾಲೆ ದಿನದತ್ತ ಸಾಗುತ್ತಿದೆ. ಇನ್ನೇನು ಫಿನಾಲೆ ವಾರಕ್ಕೆ ಕಾಲಿಡಬೇಕು ಎನ್ನುವಾಗಲೇ ನಮ್ರತಾ (Namratha Gowda) ಔಟ್ ಆಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಫಿನಾಲೆಗೆ ಮೊದಲು ಟಿಕೆಟ್ ಗಿಟ್ಟಿಸಿಕೊಂಡವರು ಸಂಗೀತಾ. ಬಳಿಕ ತುಕಾಲಿ 2ನೇ ಫೈನಲಿಸ್ಟ್ ಆಗಿ ಫಿನಾಲೆಗೆ ಹೋದರು. ವರ್ತೂರು ಸಂತೋಷ್, ವಿನಯ್, ಡ್ರೋನ್ ಪ್ರತಾಪ್ ಅವರು ಟಾಪ್ ಸ್ಥಾನಗಳನ್ನ ಅಲಂಕರಿಸಿದ್ದರು. ಟಾಪ್ 6ರಲ್ಲಿ ಕಾರ್ತಿಕ್ ಮತ್ತು ನಮ್ರತಾ ನಡುವೆ ಟಫ್ ಫೈಟ್ ಇತ್ತು. ಇದೀಗ ಕಾರ್ತಿಕ್ ಸೇವ್ ಆಗಿ ನಮ್ರತಾ ಎಲಿಮಿನೇಟ್ ಆಗಿದ್ದಾರೆ. ಇದನ್ನೂ ಓದಿ: Bigg Boss: ಟೀಕಿಸಿದ ನಮ್ರತಾ, ಸಂಗೀತಾಗೆ ತಿರುಗೇಟು ಕೊಟ್ಟ ಕಾರ್ತಿಕ್
ವಿನಯ್ ಚಮಚ, ಶ್ಯಾಡೋ ಎಂದೇ ಬಿಂಬಿತರಾಗಿದ್ದ ನಮ್ರತಾ ಇತ್ತೀಚಿನ ಈ ಆರೋಪಗಳನ್ನು ತಮ್ಮ ಆಟದ ಮೂಲಕ ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ನಮ್ರತಾ ಸಖತ್ ಆಗಿ ಆಟ ಆಡುತ್ತಿದ್ದರು. ಎಲಿಮಿನೇಷನ್ ಆಗಿರೋದು ನಮ್ರತಾಗೇ ಸ್ವತಃ ಶಾಕ್ ಕೊಟ್ಟಿದೆ.
ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಮ್ರತಾ, ಆಕಾಶದೀಪ, ಪುಟ್ಟಗೌರಿ ಮದುವೆ, ನಾಗಿಣಿ-2 ಸೀರಿಯಲ್ ನಮ್ರತಾ ನಟಿಸಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ನೀವಿಲ್ಲ ಅಂದ್ರೆ ಈ ಸೀಸನ್ ಅಪೂರ್ಣ- ಸಂಗೀತಾ, ವಿನಯ್ಗೆ ಕಿಚ್ಚನ ಚಪ್ಪಾಳೆ