ಪ್ರತಿ ವಾರವೂ ಕಿಚ್ಚನ ಜೊತೆ ಮಾತನಾಡಲು ದೊಡ್ಮನೆ ಕಂಟೆಸ್ಟೆಂಟ್ ಕಾಯುತ್ತಿರುತ್ತಾರೆ. ಸುದೀಪ್ (Sudeep) ಜೊತೆ ಮಾತನಾಡುವುದಕ್ಕಾಗಿಯೇ ವಿಶೇಷ ವಿನ್ಯಾಸದ ಬಟ್ಟೆಗಳನ್ನು ಧರಿಸಿಕೊಂಡು ಕ್ಯಾಮೆರಾ ಮುಂದೆ ಕುಂತಿರುತ್ತಾರೆ. ಮೂರ್ನಾಲ್ಕು ದಿನಗಳಿಂದ ಸೀದಾ ಸಾದಾ ಸೀರೆಯಲ್ಲೇ ಓಡಾಡಿಕೊಂಡಿದ್ದ ನಮ್ರತಾ ಗೌಡ (Namratha Gowda) , ವೀಕೆಂಡ್ ಕಾರ್ಯಕ್ರಮಕ್ಕಾಗಿ ಸಖತ್ ಮಾಡ್ ಡ್ರೆಸ್ (Mod Look) ಹಾಕಿಕೊಂಡಿದ್ದಾರೆ. ಈ ಮೂಲಕ ತಮಗೆ ಎಂತಹ ಕಾಸ್ಟ್ಯೂಮ್ ಆದರೂ, ಒಪ್ಪುತ್ತದೆ ಎಂದು ತೋರಿಸಿಕೊಂಡಿದ್ದಾರೆ.
Advertisement
ಮಹಿಳಾ ಕಂಟೆಸ್ಟೆಂಟ್ ನಲ್ಲಿ ಬೆಸ್ಟ್ ಯಾರು?
Advertisement
ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಮಹಿಳೆಯರ ದಂಡೇ ಇದೆ. ಈ ಬಾರಿ ದೊಡ್ಮನೆಯಲ್ಲಿ ಇರಲು ಏಳು ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ಸೀರಿಯಲ್ ನಟಿಯರಾದ ನಮ್ರತಾ, ಸಿರಿ, ಭಾಗ್ಯಶ್ರೀ, ಸಿನಿಮಾ ನಟಿಯರಾದ ತನಿಷಾ, ಸಂಗೀತಾ, ಗಾಯಕಿ ಇಶಾನಿ ಮತ್ತು ಟ್ರಾನ್ಸ್ ಝಂಡರ್ ನೀತು ವನಜಾಕ್ಷಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ವಯೋಮಾನವಾದರೂ, ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಆಟವಾಡುತ್ತಿದ್ದಾರೆ. ಅದರಲ್ಲೂ ಸಂಗೀತಾ, ನಮ್ರತಾ ಮತ್ತು ತನಿಷಾ ಆಟ ಬಿಗ್ ಬಾಸ್ ಮನೆಯಲ್ಲಿ ಜೋರಾಗಿದೆ.
Advertisement
Advertisement
ಬಿಗ್ ಬಾಸ್ ಶುರುವಿಗೆ ಇಡೀ ಮನೆಯನ್ನು ಆವರಿಸಿಕೊಂಡಿದ್ದು ನಮ್ರತಾ. ಪುರುಷರ ಸರಿ ಸಮಾನವಾಗಿ ನಿಂತುಕೊಂಡು ನಮ್ರತಾ ಫೈಟ್ ಕೊಡುತ್ತಾರೆ ಎಂದೇ ನಂಬಲಾಗಿತ್ತು. ಆದರೆ, ಬರ್ ಬರ್ತಾ ನಮ್ರತಾ ಚಾರ್ಮ್ ಕಳೆದುಕೊಂಡರು. ಹೊಂದಾಣಿಕೆಯ ಆಟ ಆಡಲು ಶುರು ಮಾಡಿದರು. ಇತ್ತೀಚಿನ ದಿನಗಳಲ್ಲಿ ನಮ್ರತಾ ತನ್ನದೇ ಆದ ರೀತಿಯಲ್ಲಿ ಟಾಸ್ಕ್ ಮಾಡದೇ ವಿನಯ್ ಅವರ ಆಶ್ರಯ ಕೋರಿದ್ದಾರೆ. ಹಾಗಾಗಿ ನಮ್ರತಾ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ಕರೆಯಿಸಿಕೊಳ್ತಾರಾ ಎನ್ನುವುದೇ ಸದ್ಯದ ಪ್ರಶ್ನೆ.
ಎರಡು ವಾರಗಳಿಂದ ದೊಡ್ಮನೆಯಲ್ಲಿ ದೊಡ್ಡ ಸೌಂಡ್ ಮಾಡ್ತಿರೋದು ಸಂಗೀತಾ ಶೃಂಗೇರಿ. ಹಳ್ಳಿಮನೆ ಆಟದಲ್ಲಂತೂ ಸಂಗೀತಾ ಅಬ್ಬರಿಸಿದ್ದಾರೆ. ಬಲಿಷ್ಠ ಎದುರಾಳಿ ಅನಿಸಿರುವ ವಿನಯ್ ಗೆ ಸರಿಯಾಗಿ ಠಕ್ಕರ್ ಕೊಟ್ಟಿದ್ದಾರೆ. ಮಹಿಳೆಯರೂ ಸಮರ್ಥವಾಗಿ ಎಲ್ಲವನ್ನೂ ಎದುರಿಸಬಲ್ಲರು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಸಂಗೀತಾ ಟೀಮ್ ಟಾಸ್ಕ್ ನಲ್ಲಿ ಸೋತರೂ, ಸರಿಯಾದ ಪೆಟ್ಟನ್ನೇ ವಿನಯ್ ಗೆ ನೀಡಿದ್ದಾರೆ. ಸಂಗೀತಾ ವಿಷಯದಲ್ಲಿ ವಿನಯ್ ಯಾವ ರೀತಿಯಲ್ಲಿ ಭಯ ಪಟ್ಟಿದ್ದಾರೆ ಅಂದರೆ, ಸಂಗೀತಾರನ್ನು ಜೈಲಿಗೆ ಹಾಕುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
ಸಂಗೀತಾರಷ್ಟೇ ಸಮರ್ಥವಾಗಿ ಎಲ್ಲವನ್ನೂ ನಿಭಾಯಿಸ್ತಾ ಇರೋದು ತನಿಷಾ. ಮನೆಯೊಳಗೆ ಕಾಲಿಟ್ಟ ಮೊದಲ ವಾರದಲ್ಲಿ ಸೈಲೆಂಟ್ ಆಗಿದ್ದ ತನಿಷಾ, ಇದೀಗ ಘರ್ಜಿಸುತ್ತಿದ್ದಾರೆ. ತಾನೂ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸುತ್ತಿದ್ದಾರೆ. ಅದರಲ್ಲೂ ದೊಡ್ಮನೆಯಲ್ಲಿ ಯಾರದ್ದಾದರೂ ಜೋರು ಧ್ವನಿ ಕೇಳಿದರೆ, ಅದಕ್ಕೆ ಸಮರ್ಥವಾಗಿ ನಿಲ್ಲುವಷ್ಟು ಶಕ್ತಿಯನ್ನು ತನಿಷಾ ಬೆಳೆಸಿಕೊಂಡಿದ್ದಾರೆ. ಹೀಗಾಗಿ ತನಿಷಾ ಕೂಡ ಬಹಳ ದಿನಗಳವರೆಗೂ ಬಿಗ್ ಬಾಸ್ ಮನೆಯಲ್ಲಿ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.
ಸಿರಿ, ಭಾಗ್ಯಶ್ರೀ ಮತ್ತು ಇಶಾನಿ ಅಷ್ಟೇನೂ ಉತ್ಸಾಹ ಅನ್ನುವ ಹಾಗೆ ಮನೆಯೊಳಗೆ ಇಲ್ಲ. ಪಾಲಿಗೆ ಬಂದಿದ್ದು ಪಂಚಾಮೃತ ಎನ್ನುವಂತೆ ಟಾಸ್ಕ್ ನಲ್ಲಿ ಭಾಗಿಯಾಗುತ್ತಿದ್ದಾರೆ. ನೀತು ಹಾಗಿಲ್ಲ. ತಮಗೆ ಎಲ್ಲ ಸಾಮರ್ಥ್ಯವಿದ್ದರೂ, ಅದನ್ನು ಹೊರ ಹಾಕುವಲ್ಲಿಇನ್ನೂ ಮೀನಾಮೇಷ ಎಣೆಸುತ್ತಿದ್ದಾರೆ. ಒಂದು ವಾರ ನೀತುಗೆ ಕ್ಯಾಪ್ಟನ್ ಆಗಲು ಅವಕಾಶ ಸಿಕ್ಕರೂ, ಅದನ್ನು ಅವರು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಿಲ್ಲ. ನಮ್ರತಾ ಹಾಗೆ ನವೀನ್ ಗೌಡನ ಹಿಂದೆಯೇ ನೀತು ಬಿದ್ದಿದ್ದಾರೆ. ಹಾಗಾಗಿ ನೀತು ಸದ್ಯಕ್ಕೆ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ಅನಿಸಿಕೊಳ್ಳುತ್ತಿಲ್ಲ.
ಮಹಿಳೆಯರ ಗುಂಪಿನಲ್ಲಿ ಪುರುಷರ ಜೊತೆ ಸಖತ್ ಫೈಟ್ ಮಾಡುವಂತಹ ಲಿಸ್ಟ್ ಮಾಡಿದರೆ, ನಮ್ರತಾ, ಸಂಗೀತಾ ಮತ್ತು ತನಿಷಾ ಹೆಸರು ಕೇಳಿ ಬರುತ್ತದೆ. ಈ ಮೂವರಲ್ಲಿ ಇನ್ನೂ ಬೆಸ್ಟ್ ಯಾರು ಎನ್ನುವುದನ್ನು ಸಾಬೀತು ಪಡಿಸಬೇಕಿದೆ. ಸದ್ಯ ಬಿಗ್ ಬಾಸ್ ಮೂರು ವಾರಗಳನ್ನು ಸಮರ್ಥವಾಗಿ ಮುಗಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಮೂವರ ನಡುವೆಯೇ ಫೈಟ್ ನಡೆಯುತ್ತದೆ. ಆಗ ಯಾರು ಹಿತವರ ಎನ್ನುವ ಫಲಿತಾಂಶ ಸಿಗಬಹುದು. ಅಲ್ಲಿವರೆಗೂ ಕಾಯೋಣ.