ಟಾಲಿವುಡ್‌ನ (Tollywood) ಬೆಸ್ಟ್ ಜೋಡಿಯಾಗಿ ಮಹೇಶ್ ಬಾಬು (Mahesh Babu) ಮತ್ತು ನಮ್ರತಾ ಶಿರೋಡ್ಕರ್ (Namratha Shirodkar) ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ ನಮ್ಮ ಸಂಸಾರದಲ್ಲಿ ಜಗಳ ನಡೆಯಲು ನಮ್ಮ ಮಕ್ಕಳೇ ಕಾರಣ ಅಂತಾ ಅಚ್ಚರಿಯ ಸಂಗತಿಯೊಂದನ್ನ ಹೇಳಿಕೊಂಡಿದ್ದಾರೆ.
Advertisement
ನಮ್ರತಾ ಮತ್ತು ಮಹೇಶ್ ಬಾಬು ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. 2000 `ವಂಶಿ’ (Vamsi) ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದರು. ಈ ಚಿತ್ರ ಮುಗಿಯುವುದರ ಒಳಗೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ನಂತರ ಗುರುಹಿರಿಯರ ಒಪ್ಪಿಗೆಯ ಮೇರೆಗೆ ಹಸೆಮಣೆ ಏರಿದ್ದರು. ಜೊತೆಗೆ ಮದುವೆಗೂ ಮುನ್ನ ಮಹೇಶ್ ಬಾಬು ಕೆಲವು ಷರತ್ತುಗಳನ್ನ ಹಾಕಿದ್ರಂತೆ ಈ ಬಗ್ಗೆ ಸಂದರ್ಶನವೊಂದರಲ್ಲಿ ನಟಿ ತಿಳಿಸಿದ್ದಾರೆ. ಇದನ್ನೂ ಓದಿ: ಗುರೂಜಿನ ಕಳಪೆ ಎಂದ ಅಮೂಲ್ಯಗೆ ಕಿಚ್ಚನ ಖಡಕ್ ಕ್ಲಾಸ್
Advertisement
Advertisement
ಮದುವೆಗೂ ಮುನ್ನವೇ, ನಮ್ಮ ಮದುವೆಯ ಬಳಿಕ ನಟನೆ ಬಿಡಬೇಕು ಎಂದು ಹೇಳಿದ್ರಂತೆ, ಅದರಂತೆ ನಮ್ರತಾ ಕೂಡ ನಟನೆ ಬಿಟ್ಟು ತಮ್ಮ ಸಂಸಾರದ ಜವಾಬ್ದಾರಿಯನ್ನ ತೆಗೆದುಕೊಂಡರು. ನನಗೆ ನಟನೆಗಿಂತ ಮಹೇಶ್ ಬಾಬು ಅವರೇ ಮುಖ್ಯ, ಅವರೇ ನನ್ನ ಪ್ರಪಂಚ. ನಾನು ನಟನೆ ಬಿಟ್ಟೆ ಎಂದು ನನಗೆ ಬೇಸರವಿಲ್ಲ. ಅದಕ್ಕಿಂತ ನನಗೆ ಖುಷಿಯ ಜೀವನ ಸಿಕ್ಕಿದೆ ಎಂದು ನಟಿ ಮಾತನಾಡಿದ್ದಾರೆ. ಹಾಗೆಯೇ ಈ ವೇಳೆ ನಾವಿಬ್ಬರು ಜಗಳ ಆಡೋದು ನಮ್ಮ ಮಕ್ಕಳಿಂದ ಎಂದು ನಮ್ರತಾ ಹೇಳಿದ್ದಾರೆ.
Advertisement
ಮಹೇಶ್ ಬಾಬು ಅವರು ಮಾತನಾಡೋದು ಕಮ್ಮಿ, ಸಿನಿಮಾದ ನಂತರ ಅವರಿಗೆ ಮನೆಯೇ ಪ್ರಪಂಚ. ಹಾಗಾಗಿ ಶೂಟಿಂಗ್‌ಗೆ ಬ್ರೇಕ್ ಇದ್ದ ಸಮಯದಲ್ಲಿ ಕುಟುಂಬದ ಜೊತೆ ವಿದೇಶದ ಪ್ರವಾಸಕ್ಕೆ ಸಮಯ ಕೊಡುತ್ತಾರೆ. ಇನ್ನೂ ಮಕ್ಕಳಾದ ಗೌತಮ್, ಸಿತಾರಾ ತಮಗೆ ಏನೇ ಬೇಕಿದ್ದರೂ ಮಹೇಶ್ ಅವರನ್ನೇ ಕೇಳುತ್ತಾರೆ. ಅವರೂ ಎಲ್ಲದಕ್ಕೂ ಓಕೆ ಎನ್ನುತ್ತಾರೆ. ಈ ವಿಷ್ಯಕ್ಕೆ ನನಗೂ ಮಹೇಶ್‌ಗೂ ಜಗಳವಾಗುತ್ತದೆ ಎಂದು ಮಾತನಾಡಿದ್ದಾರೆ. ಮಕ್ಕಳು ಕೇಳಿದನ್ನೆಲ್ಲ ಕೊಡಿಸಬಾರದು ಎಂದು ಈ ವೇಳೆ ನಮ್ರತಾ ಮಾತನಾಡಿದ್ದಾರೆ.