ಫಾರಿನ್ ಟ್ರಿಪ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ ನಮ್ರತಾ ಗೌಡ

Public TV
1 Min Read
namratha gowda

ಕಿರುತೆರೆಯ ಬ್ಯೂಟಿ ನಮ್ರತಾ ಗೌಡ (Namratha Gowda) ಅವರು ಫಾರಿನ್‌ಗೆ ಹಾರಿದ್ದಾರೆ. ಇಂಡೋನೇಷ್ಯಾದಲ್ಲಿ ಬೀಡು ಬಿಟ್ಟಿರುವ ನಾಗಿಣಿ ಖ್ಯಾತಿಯ ನಟಿ ಫಾರಿನ್ ಟ್ರಿಪ್‌ನ ಮಸ್ತ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಟ್ರಿಪ್‌ನ ಸುಂದರ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

namratha

ನಮ್ರತಾ ಗೌಡ ಅವರು ಬಾಲನಟಿಯಾಗಿ ಮೊದಲು ಬಣ್ಣ ಹಚ್ಚಿದ್ದರು. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಆಕ್ಟೀವ್ ಆಗಿ ಕಾಣಿಸಿಕೊಂಡರು. ‘ಪುಟ್ಟಗೌರಿ ಮದುವೆ’ (Puttagowri Maduve) ಸೀರಿಯಲ್‌ನಲ್ಲಿ ರಕ್ಷ್, ರಂಜನಿ ರಾಘವನ್ ಜೊತೆ ನಮ್ರತಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡರು. ಬಳಿಕ ‘ನಾಗಿಣಿ 2’ ಸೀರಿಯಲ್‌ನಲ್ಲಿ ನಮ್ರತಾ ಮಿಂಚಿದ್ದರು. ಇದನ್ನೂ ಓದಿ:ಡೆವಿಲ್‌ ಕಥೆ ಹೇಳಲು ಸಜ್ಜಾದ ತೆಲುಗಿನ ನಟ ಕಲ್ಯಾಣ್‌ ರಾಮ್‌

namratha 1

‘ನಾಗಿಣಿ 2′ ಸೀರಿಯಲ್ ನಮ್ರತಾ ಗೌಡ ಅವರ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಡ್ತು. ಹೀರೋ ನಿನಾದ್- ನಮ್ರತಾ ಗೌಡ ಜೋಡಿಯನ್ನ ನೋಡಿ ಅನೇಕರು ಮೆಚ್ಚಿಕೊಂಡರು. ದೀಪಿಕಾ ದಾಸ್ ಬಳಿಕ `ನಾಗಿಣಿ’ ಪಾತ್ರಕ್ಕೆ ನಮ್ರತಾ ಜೀವ ತುಂಬಿದ್ದರು. ಈ ಸೀರಿಯಲ್‌ನಿಂದ ನಮ್ರತಾಗೆ ಜನಪ್ರಿಯತೆ ಸಿಕ್ಕಿತು.

namratha 2 1

‘ನಾಗಿಣಿ 2’ ಸೀರಿಯಲ್ ಮುಗಿದ ಬೆನ್ನಲ್ಲೇ ಫಾರಿನ್ ನಟಿ ತೆರಳಿದ್ದಾರೆ. ನಮ್ರತಾ ಗ್ಯಾಂಗ್ ಫಾರಿನ್‌ಲ್ಲಿ ಮಸ್ತ್ ಮಜಾ ಮಾಡ್ತಿದ್ದಾರೆ. ಬಾಲಿಯಲ್ಲಿ (Bali) ಸುಂದರ ತಾಣಗಳಿಗೆ ನಮ್ರತಾ ಗೌಡ ಭೇಟಿ ನೀಡ್ತಿದ್ದಾರೆ.

ಸೀರಿಯಲ್ ನಂತರ ಸಿನಿಮಾದಲ್ಲಿ ನಟಿಸಲು ನಮ್ರತಾ ಗೌಡ ತಯಾರಿ ನಡೆಸುತ್ತಿದ್ದಾರೆ. ಜಿಮ್, ವರ್ಕೌಟ್, ಫಿಟ್‌ನೆಸ್ ಅಂತಾ ಬ್ಯುಸಿಯಾಗಿದ್ದಾರೆ. ಈ ನಡುವೆ ನಟಿ ಬಗ್ಗೆ ಹೊಸ ವಿಚಾರವೊಂದು ಸದ್ದು ಮಾಡ್ತಿದೆ. ನಮ್ರತಾ ಗೌಡ ಬಿಗ್ ಬಾಸ್‌ಗೆ ಹೋಗುತ್ತಾರೆ ಎಂದು ಹೇಳಲಾಗಿತ್ತು.

Share This Article