ದೊಡ್ಮನೆಯಲ್ಲಿ ಮಕ್ಕಳ ದರ್ಬಾರ್: ಮಗುವನ್ನು ತಬ್ಬಿ ಗಳಗಳನೆ ಅತ್ತ ಮಯೂರಿ

Public TV
1 Min Read
MAYURI

ಬಿಗ್ ಬಾಸ್ ಮನೆ (Bigg Boss House) ಮೂರನೇ ವಾರದತ್ತ ಮುನ್ನುಗ್ಗುತ್ತಿದೆ. ಟಾಸ್ಕ್ ಜೊತೆ ಸಾಕಷ್ಟು ವಿಚಾರವಾಗಿ ದೊಡ್ಮನೆ ಸೌಂಡು ಮಾಡುತ್ತಿದೆ. ಇನ್ನೂ ಬಿಗ್ ಬಾಸ್ ಮನೆಗೆ ʻನನ್ನಮ್ಮ ಸೂಪರ್ ಸ್ಟಾರ್ ಕಿಡ್ಸ್ʼ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಮಕ್ಕಳನ್ನ ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ ನಟಿ ಮಯೂರಿ ಕಣ್ಣೀರಿಟ್ಟಿದ್ದಾರೆ.

mayuri 4

ಚಿನ್ನದ ಗಣಿ ಟಾಸ್ಕ್‌ನಲ್ಲಿ ಕ್ಯಾಪ್ಟೆನ್ಸಿ ವಿಚಾರವಾಗಿ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಪುಟ್ಟ ಮಕ್ಕಳ ಎಂಟ್ರಿಯಾಗಿದೆ. ತರಲೆ, ನಗು, ಅಳುವಿನ ಮೂಲಕ ಮನೆಯ ವಾತಾವರಣವನ್ನೇ ಈ ಮಕ್ಕಳು ಬದಲಿಸಿದ್ದಾರೆ. ಬಿಗ್ ಬಾಸ್ ಮನೆಯನ್ನು ನೋಡುತ್ತಿದ್ದಂತೆ ನನ್ನಮ್ಮ ಸೂಪರ್ ಸ್ಟಾರ್ ಪುಟಾಣಿ ಸ್ಪರ್ಧಿಗಳು ಮನೆಮಂದಿಯ ಜೊತೆ ಆಟವಾಡಿದ್ದಾರೆ. ಈ ವೇಳೆ ಪುಟ್ಟ ಮಕ್ಕಳನ್ನು ನೋಡಿ ತನ್ನ ಮಗನ ನೆನಪಾಗಿ ಮಯೂರಿ (Mayuri Kyatari) ಗಳಗಳನೆ ಅತ್ತಿದ್ದಾರೆ.

MAYURI 1

ಒಂದು ಮಗು ಸಂಬರ್ಗಿ ಭಜದ ಮೇಲೆ ಕುಳಿತು ತಲೆಗೆ ಸರಿಯಾಗಿ ಹೊಡೆಯುತ್ತಿದೆ. ಮತ್ತೊಂದು ಮಗು ರೂಪೇಶ್ ಶೆಟ್ಟಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ನಡುವೆ ಮಯೂರಿ ಒಂದು ಮಗುವನ್ನು ತಬ್ಬಿಕೊಂಡು ಭಾವುಕರಾಗಿದ್ದಾರೆ. ತನ್ನ ಮಗನಂತೆಯೇ ಈ ಮಗು ಇದೆ ಎಂದು ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದನ್ನೂ ಓದಿ:`ಕೆಜಿಎಫ್ 2’ಗೆ ಸೆಡ್ಡು ಹೊಡೆದ ಕಾಂತಾರ: 100 ಕೋಟಿ ಕಲೆಕ್ಷನ್‌ನತ್ತ ಸಿನಿಮಾ

 

View this post on Instagram

 

A post shared by mayuri (@mayurikyatari)

ನಟಿ ಮಯೂರಿ ಪುಟ್ಟ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆಗೆ (Bigg Boss) ಎಂಟ್ರಿ ಕೊಟ್ಟಿದ್ದಾರೆ. ಒಂದೊಳ್ಳೆ ಬ್ರೇಕ್‌ಗಾಗಿ ಕಿರುತೆರೆಯ ಬಿಗ್ ಬಾಸ್‌ಗೆ ಬಂದಿದ್ದಾರೆ. ಈ ವೇಳೆ ಮಕ್ಕಳನ್ನ ನೋಡಿ ನಟಿ ಭಾವುಕರಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *