ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಬಿಎಂಆರ್‌ಸಿಎಲ್ 1 ದಿನದ ಮತ್ತು 3 ದಿನದ ಪಾಸ್‍ಗಳನ್ನು ಪರಿಚಯಿಸಿದೆ.
ಬಿಎಂಆರ್‌ಸಿಎಲ್ ಕ್ಲೈಮ್ ಮಾಡದ ಆನ್‍ಲೈನ್ ಸ್ಮಾರ್ಟ್ ಕಾರ್ಡ್ ರೀಚಾರ್ಜ್‍ಗಳು ಮತ್ತು ಆನ್‍ಲೈನ್ ಸ್ಮಾರ್ಟ್‍ಕಾರ್ಡ್ ಟಾಪ್ ಆಪ್‍ಗಳನ್ನು ಮರುಪಾವತಿ ಮಾಡಲಾಗುತ್ತದೆ. ಇವುಗಳು ದಿನಾಂಕ ಏಪ್ರಿಲ್ 2 ರಿಂದ ಜಾರಿಯಾಗಲಿದೆ. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ
Advertisement
Advertisement
200 ರೂ.ಗಳ ಬೆಲೆಯ 1 ದಿನದ ಪಾಸ್ ದರದಲ್ಲಿ ಮರುಪಾವತಿಸಬಹುದಾದ ಭದ್ರತಾ ಠೇವಣಿ ರೂ.50 ಒಳಗೊಂಡಿದೆ. ಇದು ಖರೀದಿಯ ದಿನಾಂಕದಂದು ಮಾತ್ರ ನಮ್ಮ ಮೆಟ್ರೋದಲ್ಲಿ ಅನಿಯಮಿತ ಪ್ರಯಾಣವನ್ನು ಅನುಮತಿಸುತ್ತದೆ.
Advertisement
400 ರೂ.ಗಳ ಬೆಲೆಯ 3 ದಿನದ ಪಾಸ್ ದರದಲ್ಲಿ ಮರುಪವತಿಸಬಹುದಾದ ಭದ್ರತಾ ಠೇವಣಿ 50 ರೂ. ಒಳಗೊಂಡಿದೆ. ಈ ಪಾಸ್ ಖರೀದಿಸಿದ ದಿನಾಂಕದಿಂದ 3 ದಿನಗಳವರೆಗೆ ನಮ್ಮ ಮೆಟ್ರೋದಲ್ಲಿ ಅನಿಯಮಿತ ಪ್ರಯಾಣವನ್ನು ಅನುಮತಿಸುತ್ತದೆ.
Advertisement
1 ದಿನದ ಮತ್ತು 3 ದಿನದ ಪಾಸ್‍ಗಳು ನಿಲ್ದಾಣದ ಟಿಕೆಟ್ ಕೌಂಟರ್‍ಗಳಲ್ಲಿ ಲಭ್ಯವಿರುತ್ತದೆ. ಪ್ರಯಾಣಿಕರು 1 ದಿನದ ಅಥವಾ 3 ದಿನದ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ ಯಾವುದೇ ಗ್ರಾಹಕ ಸಂಪರ್ಕ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ ಅನ್ನು ಉತ್ತಮ ಸ್ಥಿತಿಯಲ್ಲಿ ಹಿಂದಿರುಗಿಸಿದರೆ, ಪ್ರಯಾಣಿಕರು 50 ರೂ. ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನು ಹಿಂಪಡೆಯಬಹುದು. ಇದನ್ನೂ ಓದಿ: ಆರ್.ಎನ್ ನಾಯಕ ಕೊಲೆ ಕೇಸ್ – ಭೂಗತಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ
ಪ್ರಯಾಣಿಕರು ಆನ್‍ಲೈನ್‍ನಲ್ಲಿ ಅಂದರೆ ವೆಬ್‍ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ರೀಚಾರ್ಜ್ ಮಾಡಿದ ಮೊತ್ತವನ್ನು ಸ್ಮಾರ್ಟ್ ಕಾರ್ಡ್‍ಗೆ 1 ಗಂಟೆಯ ನಂತರ ಮತ್ತು ರೀಚಾರ್ಜ್ ಮಾಡಿದ ದಿನಾಂಕದಿಂದ 7 ದಿನಗಳ ಒಳಗೆ ಎಫ್‍ಸಿ ಗೇಟ್‍ನಲ್ಲಿ ಟ್ಯಾಪ್ ಮಾಡುವ ಮೂಲಕ ಅಥವಾ ಕಾರ್ಡ್ ಟಾಪ್-ಅಪ್ ಟರ್ಮಿನಲ್‍ಗಳಲ್ಲಿ ಸಿಟಿಟಿ ರೀಚಾರ್ಜ್ ಮಾಡಿದ ದಿನಾಂಕದಿಂದ 15 ದಿನಗಳಲ್ಲಿ ನವೀಕರಿಸಬಹುದು.
ಆದಾಗ್ಯೂ, ಪ್ರಯಾಣಿಕರು ತಮ್ಮ ಸ್ಮಾರ್ಟ್‍ಗಳಲ್ಲಿ ಬ್ಯಾಲೆನ್ಸ್ ಮೊತ್ತವನ್ನು 15 ದಿನಗಳ ಒಳಗೆ ನವೀಕರಿಸಲು ಸಾಧ್ಯವಾಗದಿದ್ದರೆ. ಅಂತಹ ಕ್ಲೈಮ್ ಮಾಡದ ಮೋತ್ತವನ್ನು ರಿಚಾರ್ಜ್ ಮಾಡಿದ ದಿನಾಂಕದಿಂದ 30 ದಿನಗಳ ಒಳಗೆ ಅದೇ ಚಾನೆಲ್ ಮೂಲಕ ರಿಚಾರ್ಜ್ ಮಾಡಿದ ಮೊತ್ತದಿಂದ ಶೇ.2.5 ರದ್ದತಿ ಶುಲ್ಕವನ್ನು ಕಡಿತಗೊಳಿಸಿ ರೀಚಾರ್ಜ ಮೊತ್ತವನ್ನು ಮರುಪಾವತಿ ಮಾಡಲಾಗುವುದು.