ಬೆಂಗಳೂರು: ನಗರದ ಸಿಲ್ಕ್ ಬೋರ್ಡ್ ಬಳಿಯ ನಮ್ಮ ಮೆಟ್ರೋ ಕಾಮಗಾರಿ ವೇಳೆ ಸಂಭವಿಸಬೇಕಾಗಿದ್ದ ಭಾರೀ ಅನಾಹುತ ತಪ್ಪಿದೆ.
ನಮ್ಮ ಮೆಟ್ರೋ ಫೇಸ್ -2 ಕಾಮಗಾರಿ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಮೆಟ್ರೋ ಸಗ್ಮೆಂಟ್ಸ್ ಜೋಡಿಸುವ ಯಂತ್ರ ಅರ್ಧಕ್ಕೆ ತುಂಡಾಗಿ ನಲವತ್ತು ಅಡಿ ಎತ್ತರದಿಂದ ಕ್ರೇನ್ ಕೆಳಗೆ ಬಿದ್ದಿದೆ. ಬೆಳಗ್ಗೆ 6:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಭಾರೀ ಅನಾಹುದಿಂದ ನೂರಾರು ಮೆಟ್ರೋ ಕಾರ್ಮಿಕರು ಪಾರಾಗಿದ್ದಾರೆ. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ
ಸಿಲ್ಕ್ ಬೋರ್ಡ್, ಕೆ ಆರ್ ಪುರಂ ಮಾರ್ಗವಾಗಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಇದಾಗಿದ್ದು, ಲಾಂಚಿಂಗ್ ಗಾರ್ಡ್ ಎಂಬ ಬೃಹತ್ ಯಂತ್ರ ಆಯ ತಪ್ಪಿ ದಿಢೀರ್ ಕೆಳಗೆ ಬಿದ್ದಿದೆ. ಇದೀಗ ಯಂತ್ರವನ್ನು ಮೇಲೆತ್ತಲು ಕಾರ್ಮಿಕರು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಬ್ರದರ್ ಅಂತ ಕತ್ತು ಕೊಯ್ಯುತ್ತಾನೆ: ಜಮೀರ್ ಅಹ್ಮದ್



