ಧಾರವಾಡ: ಉಪ್ಪಿನ ಬೇಟಗೇರಿ ಗ್ರಾಮದಲ್ಲಿ ಉಂಟಾಗಿದ್ದ ವಕ್ಫ್ (Waqf) ಆಸ್ತಿ ಸಂಬಂಧಿತ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಜವಳಗಿ, ಮಸೂತಿ ಹಾಗೂ ಹುಟಗಿ ಎಂಬ ರೈತ ಕುಟುಂಬಗಳ ಪಹಣಿ ಕಾಲಂ ನಂ.11ರಲ್ಲಿ ನಮೂದಾಗಿದ್ದ ಸದರಿ ಆಸ್ತಿ ವಕ್ಫ್ ಆಸ್ತಿಗೆ ಒಳಪಟ್ಟಿದೆ ಎಂಬುದು ಈಗ ತೆರವಾಗಿದೆ.
ತಮ್ಮ ಜಮೀನು ಪಹಣಿಯಲ್ಲಿ ನಮೂದಾಗಿದ್ದ ವಕ್ಫ್ ಹೆಸರನ್ನು ಕಂಡು ರೈತರು ಆತಂಕ ಪಟ್ಟಿದ್ದರು. ಪಹಣಿಯಲ್ಲಿನ ವಕ್ಫ್ ಆಸ್ತಿ ಎಂಬ ಪದವನ್ನು ತೆಗೆಯಬೇಕು ಎಂದು ಆಗ್ರಹಿಸಿ ಗ್ರಾಮದ ರೈತರು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ನೇತೃತ್ವದಲ್ಲಿ ದೊಡ್ಡಮಟ್ಟದ ಹೋರಾಟ ಕೂಡ ನಡೆಸಿದ್ದರು. ಪಹಣಿಯಲ್ಲಿ ನಮೂದಾಗಿದ್ದ ವಕ್ಫ್ ಹೆಸರನ್ನು ತೆರವುಗೊಳಿಸುವಂತೆ ತಹಶೀಲ್ದಾರ್‌ಗೆ ಗಡುವು ನೀಡಿದ್ದರು. ಇದೀಗ ರೈತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಇದನ್ನೂ ಓದಿ: ಆನೇಕಲ್| ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು – ಚಾಲಕ ಪಾರು
ಉಪ್ಪಿನ ಬೆಟಗೇರಿ ಗ್ರಾಮದ ಒಟ್ಟು 6 ಪಹಣಿಗಳಲ್ಲಿ ತಪ್ಪಾಗಿ ವಕ್ಫ್ ಬೋರ್ಡ್ ಹೆಸರು ಬಂದಿದೆ ಅನ್ನೋದು ಇತ್ತೀಚೆಗೆ ತಹಶೀಲ್ದಾರ್ ನಡೆಸಿದ ಸಭೆಯಲ್ಲಿ ಸಾಬೀತಾಗಿತ್ತು. ವಕ್ಫ್ ಬೋರ್ಡ್ ಅಧಿಕಾರಿಗಳಿಗೆ ಸೂಕ್ತ ದಾಖಲೆ ತರುವಂತೆ ತಹಶೀಲ್ದಾರ್ ಹೇಳಿದ್ದರು. ಆದರೆ ಸೂಕ್ತ ದಾಖಲೆ ಇಲ್ಲದೇ ಇರೋ ಹಿನ್ನೆಲೆಯಲ್ಲಿ, ಇದು 1965ರಲ್ಲಿ ಸರ್ವೆ ನಂ. ಬ್ಲಾಕ್‌ಗಳಾಗಿ ಪರಿವರ್ತನೆಯಾದಾಗ ಅದನ್ನು ನವೀಕರಣ ಮಾಡಿಕೊಳ್ಳದೇ ವಕ್ಫ್ ಬೋರ್ಡ್ ತಪ್ಪಾಗಿ ಪಹಣಿಯಲ್ಲಿ ನಮೂದು ಮಾಡಿದೆ ಅನ್ನೋದು ಸಾಬೀತಾಗಿತ್ತು. ಹೀಗಾಗಿ ರೈತರ ಪಹಣಿಯಲ್ಲಿದ್ದ ವಕ್ಫ್ ಭಾರ ಇಳಿಸಿದ್ದಾರೆ. ಇದನ್ನೂ ಓದಿ: ಬಿಡಿಎ ಭರ್ಜರಿ ಬೇಟೆ – ನಾಗರಬಾವಿ ಬಡಾವಣೆಯಲ್ಲಿ 60 ಕೋಟಿ ಮೌಲ್ಯದ ಆಸ್ತಿ ಜಪ್ತಿ