ಬೆಂಗಳೂರು: ರಾಜಕೀಯಕ್ಕೆ ಬರೋದಾಗಿ ಘೋಷಿಸಿ ತೀವ್ರ ಸಂಚಲನ ಮೂಡಿಸಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಅವ್ರ ಪಾರ್ಟಿ ಹೆಸರೇನು? ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.
ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರ ರಾಜಕೀಯ ಪಕ್ಷದ ಹೆಸರು ಬಯಲಾಗಿದೆ. ಉಪೇಂದ್ರ ಅವರ ಪಕ್ಷದ ಹೆಸರು ಪ್ರಜಾಕಾರಣ ಅಲ್ಲ, ಪ್ರಜಾಕೀಯವೂ ಅಲ್ಲ. ಬದಲಾಗಿ ಉಪ್ಪಿಯ ಪೊಲಿಟಿಕಲ್ ಪಾರ್ಟಿ ಹೆಸರು `ಉತ್ತಮ ಪ್ರಜಾ ಪಾರ್ಟಿ’ ಎಂದು ತಿಳಿದುಬಂದಿದೆ. ಸದಸ್ಯತ್ವ ನೋಂದಣಿ ಅರ್ಜಿಯಲ್ಲಿ ಉಪ್ಪಿ ಪಕ್ಷದ ಹೆಸರು ಬಹಿರಂಗವಾಗಿದೆ.
ಈಗಾಗಲೇ ತಮ್ಮ ಆಪ್ತರ ಜೊತೆ ಸರಣಿ ಸಭೆ ನಡೆಸುತ್ತಿರುವ ಉಪೇಂದ್ರ, ತಮ್ಮ ಹೊಸ ಪಕ್ಷದ ಸದಸ್ಯತ್ವ ಪಡೆಯಲು ಬಯಸುವವರಿಗೆ ಅರ್ಜಿ ರೆಡಿ ಮಾಡಿದ್ದಾರೆ. ಶೀಘ್ರವೇ ರಾಜ್ಯದ ವಿವಿಧೆಡೆ ಸುತ್ತಾಡಿ ಜನರ ಅಭಿಪ್ರಾಯ ಸಂಗ್ರಹಿಸಲು ಉಪೇಂದ್ರ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
https://www.youtube.com/watch?v=yA2a-QU2DuI