ಬಳ್ಳಾರಿ: ಬಿಜೆಪಿ (BJP) ಬಗ್ಗೆ ಮಾತನಾಡಲ್ಲ. ಇದೀಗ ನನ್ನ ಕುಟುಂಬ ವೈಎಸ್‌ಆರ್ (YSR) ಪಕ್ಷವಾಗಿದೆ. ಹಿಂದೂಪುರ (Hindupur) ಕ್ಷೇತ್ರದ ಸಂಭವನೀಯ ಪಟ್ಟಿಯಲ್ಲಿ ನನ್ನ ಹೆಸರಿದೆ. ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ಶ್ರೀರಾಮುಲು ಸಹೋದರಿ, ಮಾಜಿ ಸಂಸದೆ ಜೆ.ಶಾಂತಾ (J Shantha) ಹೇಳಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ರಾಜಕೀಯ ಮಾಡಿದೆ. ಇದೀಗ ಆಂಧ್ರದ ಕಡೆ ರಾಜಕೀಯ ಮಾಡುತ್ತಿರುವೆ. ವೈಎಸ್‌ಆರ್ ಪಕ್ಷ ಸೇರುವ ಬಗ್ಗೆ ಶ್ರೀರಾಮುಲು ಜೊತೆಗೆ ಚರ್ಚೆ ಮಾಡಿಲ್ಲ. ಬಳ್ಳಾರಿ (Ballari) ತವರು ಮನೆ. ಆಂಧ್ರ ಗಂಡನ ಮನೆ. ತವರು ಮನೆ ರಾಜಕೀಯ ಮುಗೀತು. ಈಗ ಆಂಧ್ರದಲ್ಲಿ ರಾಜಕೀಯ ಮಾಡುತ್ತೇನೆ ಎಂದರು. ಇದನ್ನೂ ಓದಿ: 2030ರ ವೇಳೆಗೆ 5,000 ಕೋಟಿ ರೂ. ವಹಿವಾಟು ಗುರಿ – ಸಚಿವ ಎಂ.ಬಿ ಪಾಟೀಲ್
Advertisement
Advertisement
ವೈಎಸ್‌ಆರ್ ಪಕ್ಷ ಮತ್ತು ಜಗನ್ ಕಾರ್ಯವೈಖರಿ ಮೆಚ್ಚಿ ವೈಎಸ್‌ಆರ್ ಪಕ್ಷ ಸೇರಿದ್ದೇನೆ. 2009 ಚುನಾವಣೆ ಗೆದ್ದು, 2018ರ ಉಪಚುನಾವಣೆಯಲ್ಲಿ ಸೋತೆ. ಆದರೆ 2019ರಲ್ಲಿ ಚುನಾವಣೆ ಟಿಕೆಟ್ ನೀಡಲಿಲ್ಲ. ಟಿಕೆಟ್ ಕೊಟ್ಟಾಗ ಕೆಲಸ ಮಾಡಿದೆ. ಇಲ್ಲದೇ ಇದ್ದಾಗ ಸುಮ್ಮನಾದೆ. ಆದರೆ 2019ರಲ್ಲಿ ನಾನು ಆಕಾಂಕ್ಷಿಯಾಗಿದ್ದೆ. ಹಿಂದೂಪುರ ಕ್ಷೇತ್ರದ ಸಂಭವನೀಯ ಪಟ್ಟಿಯಲ್ಲಿ ನನ್ನ ಹೆಸರಿದೆ. ಟಿಕೆಟ್ ನೀಡುವ ವಿಶ್ವಾಸವಿದೆ. ಜನಾರ್ದನ ರೆಡ್ಡಿ ಶ್ರೀರಾಮುಲು ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಲ್ಲ. ಅದು ಅವರ ವೈಯಕ್ತಿಕ. ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ ಮಾಡಿದ ಕೆಲಸದಿಂದ ನನಗೆ ಆಂಧ್ರದಲ್ಲಿಯೂ ಯಶಸ್ಸು ಸಿಗಲಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ನಾಯಕತ್ವದಲ್ಲಿ ಕರ್ನಾಟಕ ಕಾಂಗ್ರೆಸ್ ಅಂತ್ಯವಾಗುತ್ತೆ: ಹೆಚ್‌ಡಿಡಿ ಭವಿಷ್ಯ
Advertisement