– ವಿವಾದಿತ ಜಾಗದಲ್ಲಿ ಏಕಾಏಕಿ ಅಂಗಡಿ, ಹೋಟೆಲ್‌ಗಳ ತೆರವು
ಚಿಕ್ಕಮಗಳೂರು: ಕೋರ್ಟ್ ಆದೇಶವಿದೆ ಎಂದು ಸ್ಥಳೀಯ ಆಡಳಿತದ ಗಮನಕ್ಕೆ ತರದೆ ಮಠದ ಜಾಗವನ್ನು ಮಸೀದಿ ಸದಸ್ಯರು ತೆರವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಸತ್ತಾರ್ ಷಾ ಹುಸೇನ್ ಅವರನ್ನು ಅಮಾನತು ಮಾಡಲಾಗಿದೆ.
ಮಾ.5 ರಂದು ಜಿಲ್ಲೆಯ ಹನುಮಂತಪ್ಪ ವೃತ್ತದ ಬಳಿಯ ನಲ್ಲೂರು ಮಠದ ವಿವಾದಿತ ಜಾಗದಲ್ಲಿ ಮುಸ್ಲಿಂ ಸಮುದಾಯವರು ಏಕಾಏಕಿ ಹೋಟೆಲ್, ಅಂಗಡಿಗಳನ್ನು ತೆರವು ಮಾಡಿದ್ದರು. ಈ ಹಿನ್ನೆಲೆ ವಕ್ಫ್ ಅಧಿಕಾರಿ ಸೇರಿ 14 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸದ್ಯ ರಾಜ್ಯ ವಕ್ಫ್ ಬೋರ್ಡ್ (State Waqf Board) ಸಿಇಓ ಜೀಲಾನಿ ಹೆಚ್ ಮೊಕಾಶಿಯವರು ಚಿಕ್ಕಮಗಳೂರು (Chikkamagaluru) ಜಿಲ್ಲಾ ವಕ್ಫ್ ಅಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: ಎಲ್ಲೆ ಮೀರದಿರಲಿ ಬಣ್ಣದೋಕುಳಿ – ಇದು ಮಾದಕ ಬಣ್ಣಗಳ ಮನಮೋಹಕ ಹಬ್ಬ!
ಪ್ರಕರಣ ಏನು?
ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಬಳಿಯ ಮಠದ ಜಾಗವನ್ನು ಬಡಾಮಕಾನ್ ಜಾಮಿಯ ಮಸೀದಿ ಕಮಿಟಿಯ ಸದಸ್ಯರು ಕೋರ್ಟ್ ಆದೇಶವಿದೆ ಎಂದು ಸ್ಥಳೀಯ ಆಡಳಿತದ ಗಮನಕ್ಕೆ ತರದೆ ತೆರವು ಮಾಡಿದ್ದರು.
250ಕ್ಕೂ ಹೆಚ್ಚು ಅನ್ಯಕೋಮಿನ ಯುವಕರು ನಗರಸಭೆ ಗಮನಕ್ಕೆ ತರದೆ ಜೆಸಿಬಿ ತಂದು ಮಾ.5 ರಂದು ಬೆಳ್ಳಂಬೆಳಗ್ಗೆ ಮನೆ, ಹೋಟೆಲ್ ಹಾಗೂ ಕಟ್ಟಡವನ್ನ ತೆರವು ಮಾಡಿದ್ದರು. ಈ ಬಗ್ಗೆ ನಲ್ಲೂರು ಮಠದ ವಂಶಸ್ಥರು, ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ನಲ್ಲೂರು ಮಠದ ಕುಟುಂಬಸ್ಥರು ಹಾಗೂ ಹೋಟೆಲ್ ಮಾಲೀಕರು ನಗರದ ಬಸವನಹಳ್ಳಿ ಠಾಣೆಗೆ ದೂರು ನೀಡಿದ್ದು, ವಕ್ಫ್ ಬೋರ್ಡ್ ಅಧಿಕಾರಿ ಸೇರಿ ಜಾಮೀಯ ಮಸೀದಿ ಕಮಿಟಿಯ 14 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ನಲ್ಲೂರು ಮಠದ ಕುಟುಂಬಸ್ಥರು ನಮ್ಮ ಮನೆ ತೆರವು, ತಮ್ಮ ಆಸ್ತಿಗೆ ಅಕ್ರಮ ಪ್ರವೇಶ ಹಾಗೂ ಆಸ್ತಿ ಹಾನಿಯಾಗಿದೆ ಎಂದು ದೂರು ನೀಡಿದ್ದರು. ಮಠದ ಕುಟುಂಬಸ್ಥರ ದೂರಿನ ಅನ್ವಯ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡರ ಅಟ್ಟಹಾಸ – ಮರಾಠಿಯಲ್ಲಿ ಪಹಣಿ ಕೊಡದಿದ್ದಕ್ಕೆ ಕನ್ನಡಿಗ ಕಾರ್ಯದರ್ಶಿ ಮೇಲೆ ಹಲ್ಲೆ