ಕಾಂಗ್ರೆಸ್ ವಿರೋಧ ಪಕ್ಷ ಆಗಿರಲು ನಾಲಾಯಕ್: ನಳಿನ್ ಕುಮಾರ್ ಕಟೀಲ್

Public TV
3 Min Read
Nalinkumar Kateel

– ಕಾಂಗ್ರೆಸ್‍ನ ಎಲ್ಲಾ ಕರ್ಮಕಾಂಡಗಳನ್ನು ಹೊರಗೆ ಹಾಕುತ್ತೇವೆ

ಹಾಸನ: ಕಾಂಗ್ರೆಸ್‍ನ (Congress) ಆಂತರಿಕ ಕಲಹ ಬೀದಿಗೆ ಬಿದ್ದಿದೆ. ಕಾಂಗ್ರೆಸ್‍ನಲ್ಲಿರುವ ಎಲ್ಲಾ ಪ್ರಮುಖ ನಾಯಕರು ಪಕ್ಷವನ್ನು ಬಿಟ್ಟು ಹೋಗುತ್ತಿದ್ದಾರೆ. ಕಾಂಗ್ರೆಸ್ ಒಂದು ವಿರೋಧ ಪಕ್ಷ ಆಗಿರಲು ನಾಲಾಯಕ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalinkumar Kateel) ವಾಗ್ದಾಳಿ ನಡೆಸಿದ್ದಾರೆ.

Congress BJP 2

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ಭಾರತ್ ಜೋಡೋ (Bharat Jodo Yatra) ಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಅವರು, ಈ ದೇಶದಲ್ಲಿ ಎಲ್ಲಾ ಕಡೆ ವಿಭಜನೆ ಮಾಡಿದ್ದು ಕಾಂಗ್ರೆಸ್, ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಪಾಕಿಸ್ತಾನ, ಭಾರತ ವಿಭಜನೆ, ನಂತರ ಮತ್ತು ಮೊದಲಿಗೆ ಈ ದೇಶದಲ್ಲಿದ್ದ ವಂದೇ ಮಾತರಂ ವಿಭಜನೆ ಮಾಡಿದ್ರು, ರಾಷ್ಟ್ರದ ವಿಭಜನೆ ಮಾಡಿದ್ರು, ಆನಂತರದ ದಿನಗಳಲ್ಲಿ ಕಾಶ್ಮೀರವನ್ನು ಪ್ರತ್ಯೇಕ ಮಾಡುವಂತಹ ಪ್ರಯತ್ನಗಳಾದವು. ಕಾಂಗ್ರೆಸ್ ಈ ದೇಶದಲ್ಲಿ ವಿಭಜನೆಗೆ ಕಾರಣಿಭೂತವಾಗಿರುವ ಪಾರ್ಟಿ. ಆ ಪಾಪದ ಕೈ ತೊಳೆಯಲು ಯಾತ್ರೆಯನ್ನು ಮಾಡ್ತಾ ಇದ್ದಾರೆ. ಭಾರತ್ ಜೋಡೋ ಬದಲು ಮೊದಲಿಗೆ ಕಾಂಗ್ರೆಸ್ ಜೋಡೋ ಆಗಬೇಕಿದೆ. ಇವತ್ತು ಕಾಂಗ್ರೆಸ್‍ನಲ್ಲಿರುವ ಎಲ್ಲಾ ಹಿರಿಯರು 23ಜಿಯನ್ನು ಬಿಟ್ಟು ಹೋಗ್ತಾ ಇದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಪ್ರಾರಂಭವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ರತನ್‌ ಟಾಟಾ ಈಗ PM CARES Fund ಟ್ರಸ್ಟಿ- ಸುಧಾಮೂರ್ತಿಗೆ ಸಲಹಾ ಮಂಡಳಿಯಲ್ಲಿ ಸ್ಥಾನ

CONGRESS 1

ರಾಹುಲ್‍ಗಾಂಧಿಯವರು (Rahul Gandhi)  ಕಾಂಗ್ರೆಸ್‍ನ್ನು ಸ್ಥಿರ ಮಾಡುವ ಬದಲು ಜನರನ್ನು ಧಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಒಂದಾಗಬೇಕಿದ್ದ ಕಾಂಗ್ರೆಸ್ ಒಳಜಗಳ, ಬೀದಿಜಗಳ ಜೋಡೋ ಹೆಸರಿನಲ್ಲಿ ಎರಡು ತುಂಡು ಆಗಿರುವುದು ಕಾಣ್ತಾ ಇದೆ. ಸಿದ್ದರಾಮಣ್ಣ ಈ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ನಿರಾಸಕ್ತಿಯನ್ನು ತೋರಿಸುತ್ತಿದ್ದಾರೆ. ಡಿಕೆಶಿಯವರು ಹೋದಲೆಲ್ಲಾ ಭಯವನ್ನು ಸೃಷ್ಟಿ ಮಾಡುತ್ತಿದ್ದಾರೆ. ಆತಂರಿಕ ಗೊಂದಲದಿಂದ ಅವರವರ ಹೇಳಿಕೆಗಳು, ಇದರ ಜೊತೆ ಐಟಿ (IT) ನೋಟೀಸ್‍ಗಳು, ಭ್ರಷ್ಟಾಚಾರದಿಂದ ಯಾರು, ಯಾವಾಗ ಜೈಲಿಗೆ ಹೋಗ್ತಾರೆ ಎನ್ನುವ ಭಯ ಕಾಂಗ್ರೆಸ್‍ನ ಒಳಗಡೆ ಕಾಡುತ್ತಿದೆ. ಇದರಿಂದ ಕಾಂಗ್ರೆಸ್‍ಗೆ ನಷ್ಟವಾಗುತ್ತೆ ಹೊರತು ಬಿಜೆಪಿಗಲ್ಲ. ಅವರವರ ಕಾರ್ಯ ಮಾಡಲಿ, ನಮ್ಮ ನಮ್ಮ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇವೇಗೌಡ್ರ ಮನೆಗೆ ಬೊಮ್ಮಾಯಿ ಭೇಟಿ – ಆರೋಗ್ಯ ವಿಚಾರಿಸಿ, ಈಗ್ಲೂ ಮುದ್ದೆ ತಿಂತೀರಾ ಸರ್ ಎಂದ ಸಿಎಂ

Bharat Jodo Yatra

ಭ್ರಷ್ಟಾಚಾರ ಪ್ರಶ್ನೆ ಮಾಡಿದ್ದಕ್ಕೆ ಇಡಿ (ED), ಐಟಿ ದಾಳಿ ಮಾಡಿಸಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ (D.K Shivakumar)  ಹೇಳಿಕೆಗೆ ತಿರುಗೇಟು ನೀಡಿದ ಕಟೀಲ್, ಇಡಿ ಮತ್ತು ಐಟಿ ಸ್ವತಂತ್ರವಾಗಿ ತನಿಖೆ ಮಾಡುವ ಸಂಸ್ಥೆಗಳು, ಅದಕ್ಕೆ ಪೂರ್ಣವಾದ ಸಹಕಾರ ಕೊಡಬೇಕು, ಎಲ್ಲರನ್ನು ತನಿಖೆ ಮಾಡ್ತಾರೆ. ನಾಲ್ಕು ವರ್ಷದ ಹಿಂದೆ ಡಿಕೆಶಿ ಮೇಲೆ ದಾಳಿ ಆಗಿತ್ತು, ಒಂದು ವರ್ಷದ ಹಿಂದೆಯೂ ಆಗಿತ್ತು, ಆಗ ಯಾರು ದಾಳಿ ಮಾಡ್ಸಿದ್ರು, ಆದರೆ ಇವತ್ತು ಅವರ ಭ್ರಷ್ಟಾಚಾರದ ವ್ಯವಸ್ಥೆಯನ್ನು ಮುಚ್ಚಿಹಾಕಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಸಿದ್ದರಾಮಣ್ಣ ತಿರುಕನ ಕನಸನ್ನು ಕಾಣ್ತಾ ಇದ್ದಾರೆ. ಅವರಿಗೆ ಕಾಂಗ್ರೆಸ್‍ನ್ನು ಗಟ್ಟಿ ಮಾಡಲು ಆಗಲಿಲ್ಲ, ಅವರೇ ಟೀಂ ರಚನೆ ಮಾಡಲು ಆಗಲಿಲ್ಲ ಇನ್ನೆಲ್ಲಿ ರಾಜ್ಯದ ಅಧಿಕಾರ ಹಿಡಿತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: PayCM ಪೋಸ್ಟರ್‌ಗೆ ಸಿಎಂ ಗರಂ – ಎಫ್‌ಐಆರ್‌ ದಾಖಲು

ಪಿಎಸ್‍ಐ (PSI Scam), ಶಿಕ್ಷಕರ ನೇಮಕಾತಿ ಅಷ್ಟೇ ಅಲ್ಲಾ ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ನ ಎಲ್ಲಾ ಕರ್ಮಕಾಂಡಗಳನ್ನು ಹೊರಗೆ ಹಾಕುತ್ತೇವೆ. ನನಗೆ ಸಂಶಯ ಇದೆ, ಸಿದ್ದರಾಮಣ್ಣ ಎಲ್ಲಿ ಇರ್ತಾರೆ ಗೊತ್ತಿಲ್ಲ, ಕಾದುನೋಡಿ. ಎರಡು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತೇವೆ. ಸೆ.26 ನಂತರ ನನ್ನ ಟೀಂ ಹೊರಡುತ್ತೆ, ಅ.9 ನಂತರ ಯಡಿಯೂರಪ್ಪ (B.S Yediyurappa), ಮುಖ್ಯಮಂತ್ರಿಯ ಟೀಂ ಹೊರಡುತ್ತೆ, ಇಡೀ ರಾಜ್ಯ ಪ್ರವಾಸ ಮಾಡುತ್ತೇವೆ. ಸಚಿವ ಸ್ಥಾನ ಬೇಕೆಂದು ಈಶ್ವರಪ್ಪ ಬೇಸರ ವ್ಯಕ್ತಪಡಿಸಿಲ್ಲ, ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟದ್ದು. ಎಲ್ಲರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತಾಂಧ ಶಕ್ತಿಗಳು ಉಗ್ರವಾದಿಗಳ ಜೊತೆ ಕೈಜೊಡಿಸಿಕೊಂಡು ದೇಶ ಹಾಗೂ ರಾಜ್ಯದಲ್ಲಿ ಗೊಂದಲವನ್ನು ಸೃಷ್ಟಿ ಮಾಡಲು ಮುಂದಾಗಿರುವುದು ಗೊತ್ತಾಗಿದ್ದು, ಉಗ್ರರು ಎಲ್ಲೇ ಇದ್ದರು ಬಂಧಿಸುವ ಕೆಲಸವಾಗುತ್ತೆ. ಈಗಾಗಲೇ ಕೆಲವೊಂದು ಕಡೆಗಳಲ್ಲಿ ಈ ರಾಜ್ಯದ ಮತಾಂಧ ಶಕ್ತಿಗಳು ಉಗ್ರರೊಂದಿಗೆ ಕೈಜೋಡಿಸಿರುವ ಸಾಕ್ಷ್ಯಧಾರಗಳು ಸಿಗ್ತಾ ಇವೆ, ಹಿಂದೆ ಯಾಸಿನ್ ಭಟ್ಕಳ ಬಂಧನವಾಗಿದೆ. ಅರು ತಿಂಗಳ ಹಿಂದೆ ಮಂಗಳೂರಿನಲ್ಲಿ ಎನ್‍ಐಎ (NIA) ಮೂರು ಜನರನ್ನು ಬಂಧಿಸಿದ್ದರು. ಈಗ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಇಬ್ಬರ ಬಂಧನವಾಗಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂದ ಮೇಲೆ ಇಂತಹ ಭಯೋತ್ಪಾದನಾ ಚಟುವಟಿಕೆಗಳಿಗೆ ನಿಯಂತ್ರಣ ಮಾಡುವ ಕೆಲಸವಾಗಿದೆ ಉಗ್ರರು ಎಲ್ಲೇ ಇದ್ದರು ಬಂಧಿಸುವ ಕೆಲಸವಾಗುತ್ತೆ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *