ಬೆಂಗಳೂರು: ಅನ್ನಭಾಗ್ಯ ಯೋಜನೆಯ (Anna Bhagya Yojana) ಅಕ್ಕಿ ಬದಲು ಹಣ ಕೊಡುವ ಕಾಂಗ್ರೆಸ್ (Congress) ಸರ್ಕರದ ನಿರ್ಧಾರಕ್ಕೆ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಖಂಡನೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ವಚನ ಭ್ರಷ್ಟ ಸರ್ಕಾರವಾಗಿದೆ. ಅಕ್ಕಿ ಕೊಡದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ಹೊರಹಾಕಿದ್ರು.
Advertisement
Advertisement
ಹಣ ಏನು ತಿನ್ನೋಕೆ ಆಗುತ್ತಾ ಅಂತಾ ಈ ಹಿಂದೆ ಸಿದ್ದರಾಮಯ್ಯ ಹೇಳಿದ್ರು. ನಿಮಗೆ ಶಕ್ತಿ ಇದ್ರೆ 10 ಅಕ್ಕಿ ಕೊಡಬೇಕು. ಹಣ ಹಾಕುವ ಡೋಂಗಿ ರಾಜಕಾರಣ ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಬೇಕು. ಇಲ್ಲವಾದಲ್ಲಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಜುಲೈ 1 ರಿಂದ ಎಕ್ಸ್‌ಪ್ರೆಸ್ ವೇ 2ನೇ ಟೋಲ್ ಆರಂಭ, ಯಾವ ವಾಹನಗಳಿಗೆ ಎಷ್ಟು ಶುಲ್ಕ ?
Advertisement
Advertisement
5 ಕೆ.ಜಿ ಅಕ್ಕಿ ಬದಲು ಹಣ: ಕ್ಯಾಬಿನೆಟ್ ಸಭೆಯ ನಿಧಾರದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆ. ಹೆಚ್. ಮುನಿಯಪ್ಪ ಕೇಂದ್ರ ಸಚಿವರಿಗೆ ಮನವಿ ಮಾಡಿ ಒತ್ತಾಯ ಮಾಡಿದ್ದೇವು. 15 ಲಕ್ಷ ಟನ್ ಅನ್ನು ಒಪನ್ ಟೆಂಡರ್ ಕರೆದು ಕೇಂದ್ರದವರು ಕೊಟ್ಟಿದ್ದಾರೆ. ಆದ್ರೆ ನಮಗೆ ಅಕ್ಕಿ ಕೊಡಲು ನಿರಾಕರಣೆ, ರಾಜಕೀಯ ಮಾಡಿದ್ರು. ಎಫ್ ಸಿಐ 34 ರೂ ದರ ಫಿಕ್ಸ್ ಮಾಡಿದ್ದಾರೆ. ಎಫ್ ಸಿಐ ರೇಟ್ ಗೆ ಬೇರೆ ಸಂಸ್ಥೆಗಳು ಅಕ್ಕಿ ಕೊಡಲು ಮುಂದೆ ಬರಲಿಲ್ಲ. ಅಕ್ಕಿ ದಾಸ್ತಾನು ತಯಾರಾಗುವ ತನಕ ಕೆಜಿಗೆ 34 ರೂಪಾಯಿ ಹಣವನ್ನ ಕೊಡುತ್ತೇವೆ. ಪ್ರತಿ ಕಾರ್ಡ್ ಗೆ ಕರ್ನಾಟಕ ಸರ್ಕಾರ ಕೊಡುವ ಅಕ್ಕಿ ಆಧಾರದ ಮೇಲೆ ಕೆಜಿ 34 ರೂಪಾಯಿ ಅಕ್ಕಿ ಕೊಡುತ್ತೇವೆ. ಅಕ್ಕಿ ದಾಸ್ತಾನು ಆಗುವ ತನಕ ಹಣ ಕೊಡುತ್ತೇವೆ. ಎಷ್ಟು ಬೇಗ ಅಷ್ಟು ಬೇಗ ಅಕ್ಕಿ ಕೊಡುತ್ತೇವೆ. ಸದ್ಯಕ್ಕೆ ಹಣವನ್ನ ಕೊಡುತ್ತೇವೆ. ಇದಕ್ಕೆ ಈಗ 750ಕೋಟಿ ಅಥವಾ 800 ಕೋಟಿ ಅಂದಾಜು ಆಗಲಿದೆ. ಹೆಡ್ ಆಫ್ ದಿ ಫ್ಯಾಮಿಲಿ ಸದಸ್ಯರ ಅಕೌಂಟ್ ಗೆ ಹಣ ಹಾಕುತ್ತೇವೆ. 90% ಕಾರ್ಡ್ ಹೊಂದಿರುವವರ ಅಕೌಂಟ್ ಇದೆ, ಆಧಾರ್ ಲಿಂಕ್ ಮಾಡಿದ್ದಾರೆ, ಹಾಗಾಗಿ ಅವರಿಗೆ ಹಣ ಹಾಕುತ್ತೇವೆ ಎಂದರು. ಇದನ್ನೂ ಓದಿ: 5 ಕೆ.ಜಿ ಅಕ್ಕಿ, ಉಳಿದ 5 ಕೆ.ಜಿ ಅಕ್ಕಿಯ ಹಣ ಕೊಡಲು ಸರ್ಕಾರ ನಿರ್ಧಾರ
Web Stories