ಬಾಲಕಿ ಮೇಲೆ ಅತ್ಯಾಚಾರ – ಆದ್ರೂ ಬೇರೆಯವರ ಜೊತೆ ಸೆಕ್ಸ್ ಮಾಡು ಅಂದ್ಲು ಆರೋಪಿ ತಾಯಿ

Public TV
1 Min Read

ಭೋಪಾಲ್: 22 ವರ್ಷದ ಯುವಕನೊಬ್ಬ ಹದಿಹರಿಯದ ಹುಡುಗಿ (Teen Girl) ಮೇಲೆ ಅತ್ಯಾಚಾರ ಎಸಗಿದರೆ, ಆರೋಪಿ ತಾಯಿ ಅದೇ ಸಂತ್ರಸ್ತೆಗೆ ಮತ್ತೊಬ್ಬರ ಜತೆಗೆ ದೈಹಿಕ ಸಂಪರ್ಕ ಮಾಡುವಂತೆ ಬಲವಂತ ಮಾಡಿದ ಘಟನೆ ಮಧ್ಯಪ್ರದೇಶದ (Madhya Pradesh) ಭೋಪಾಲ್‌ನಲ್ಲಿ (Bhopal) ನಡೆದಿದೆ.

ಮಹಾರಾಷ್ಟ್ರ ನಾಗ್ಪುರದ (Maharastra Nagpur) ಹುಡುಗಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ (Accused) ಹಾಗೂ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸಿದ ತಾಯಿ ವಿರುದ್ಧ ಪ್ರಕರಣ (FIR) ದಾಖಲಾಗಿದ್ದು, ಪೊಲೀಸರು (Police) ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರೌಡಿಸಂನಲ್ಲಿ ಹವಾ ಮೆಂಟೇನ್ ಮಾಡಲು ಯುವಕನ ಕೊಲೆ

RApe 1

ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾಗ್ಪುರದ ಹುಡುಗಿ, ಕಳೆದ ಮೇ ತಿಂಗಳಲ್ಲಿ ಭೋಪಾಲ್‌ಗೆ ಹೋಗಿದ್ದಳು. ಆಗ ಆರೋಪಿ ಅಭಿಷೇಕ್ ಕುರ್ಲಿ (AbhiSheak Kurli) ಎಂಬಾತನ ಪರಿಚಯವಾಗಿದೆ. ಆತ ಹುಡುಗಿಗೆ ದೈಹಿಕ ಸಂಪರ್ಕಕ್ಕೆ ಆಹ್ವಾನಿಸಿದ್ದಾನೆ. ಒಪ್ಪದೇ ಇದ್ದಾಗ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದಲಿತ ಬಾಲಕಿಯನ್ನ ಇಡೀ ರಾತ್ರಿ ಠಾಣೆಯಲ್ಲಿರಿಸಿ ಥಳಿಸಿದ ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

STOP RAPE CRIME 2

ಬೇರೆಯವರೊಂದಿಗೆ ಸೆಕ್ಸ್ ಮಾಡು ಅಂದ್ಲು ತಾಯಿ:
45 ವರ್ಷದ ರಜಿನಿ ಎಂಬಾಕೆ ಆರೋಪಿ ಅಭಿಷೇಕ್ ಕುರ್ಲಿಯ ತಾಯಿ. ಈಕೆಯ ವಿರುದ್ಧವೂ ಪ್ರಕರಣವನ್ನು ದಾಖಲಿಸಲಾಗಿದೆ. ದೂರಿನ ಪ್ರಕಾರ, ಅತ್ಯಾಚಾರಕ್ಕೀಡಾದ ಹುಡುಗಿಗೆ ಈಕೆ ಬೇರೆಯವರ ಜತೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದಳು. ಆರೋಪಿ, ಅಭಿಷೇಕ್ ಸಂತ್ರಸ್ತೆಯ ಮೊಬೈಲ್ ಕದ್ದು, ಆಕೆಯ ಆಕ್ಷೇಪಾರ್ಹ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ ಎಂಬ ಆರೋಪ ಬಂದಿದೆ.

ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಇತರ ಅಪರಾಧಗಳನ್ನಾಧರಿಸಿ ಅಭಿಷೇಕ್ ಕುರ್ಲಿ ಹಾಗೂ ಆತನ ತಾಯಿ ವಿರುದ್ಧ ಕೇಸ್ ದಾಖಲಿಸಲಾಗಿದೆ. ಇಬ್ಬರನ್ನು ಬಂಧಿಸಲು ತನಿಖೆ ನಡೆಸಲಾಗುತ್ತಿದೆ ಎಂದು ನಾಗ್ಪುರದ ಜರಿಪಟ್ಕಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *