ಮುಂಬೈ: ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನೋಟುಗಳನ್ನು ಎಸೆದಿದ್ದ ಪೇದೆಯನ್ನು ಮಹಾರಾಷ್ಟ್ರ ಪೊಲೀಸ್ ವಜಾಗೊಳಿಸಿ ಆದೇಶ ಹೊರಡಿಸಿದೆ.
ಪ್ರಮೋದ್ ವಾಲ್ಕೆ ವಜಾಗೊಂಡ ಪೇದೆ. ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಪೇದೆಯನ್ನು ವಜಾ ಮಾಡಿದ್ದಾರೆ.
Advertisement
ಆಗಿದ್ದೇನು?:
ನಾಗ್ಪುರದ ಜಿಲ್ಲಾ ಪರಿಷದ್ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ನಡೆದಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಮೋದ್ ವಾಲ್ಕೆ ನೋಡುತ್ತಿದ್ದರು. ಈ ವೇಳೆ 6ನೇ ತರಗತಿಯ ವಿದ್ಯಾರ್ಥಿನಿಯರು ವೇದಿಕೆಯ ಮೇಲೆ ಚಕ್ ದ್ ಇಂಡಿಯಾ ಸಿನಿಮಾದ ‘ಆಜಾ ಆಜಾ ಜಿಂದೆ ಶಾಮೆ ಆನೆ ಕೇತಲೆ’ ಹಾಡಿಗೆ ನೃತ್ಯ ಮಾಡುತ್ತಿದ್ದರು. ತಕ್ಷಣವೇ ವೇದಿಕೆ ಏರಿದ ಪ್ರಮೋದ್ ವಾಲ್ಕೆ ಮಕ್ಕಳ ಮೇಲೆ ನೋಟುಗಳನ್ನು ಹಾಕಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Advertisement
#WATCH Police constable showers cash on students during Republic Day function at a government school in Nagpur district's Nand. The police constable was suspended following the incident. (26 January) #Maharashtra pic.twitter.com/nyTZeRCznO
— ANI (@ANI) January 29, 2019
Advertisement
ವೇದಿಕೆಯ ಹತ್ತಿ, ಮಕ್ಕಳ ಮೇಲೆ ನೋಟ್ ಹಾಕಿರುವುದು ಆಕ್ಷೇಪಾರ್ಹವಾಗಿದೆ. ಹೀಗಾಗಿ ಅವರನ್ನು ವಜಾ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಂತೋಷ್ ವೈರಗಡೆ ತಿಳಿಸಿದ್ದಾರೆ.
Advertisement
ಈ ಕುರಿತು ಸ್ಪಷ್ಟನೆ ನೀಡಿರುವ ಪ್ರಮೋದ್ ವಾಲ್ಕೆ, ಕಾರ್ಯಕ್ರಮದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ನನ್ನನ್ನು ಜಿಲ್ಲಾ ಪರಿಷದ್ ಶಾಲೆಗೆ ನಿಯೋಜನೆ ಮಾಡಲಾಗಿತ್ತು. ಕೆಲವರು ಮಕ್ಕಳನ್ನು ಪ್ರೋತ್ಸಾಹಿಸಲು ಹಣ ಹಾಕಲು ವೇದಿಕೆಯ ಮೇಲೆ ಹತ್ತಲು ಮುಂದಾಗಿದ್ದರು. ಅವರನ್ನು ತಡೆದು, ಹಣವನ್ನು ಸಂಗ್ರಹಿಸಿ, ನಾನೇ ಮಕ್ಕಳ ಮೇಲೆ ಹಾಕಿದ್ದೇನೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv