ನಟ ನಾಗಾರ್ಜುನ ಫಾರ್ಮ್ ಹೌಸ್‍ನಲ್ಲಿ ಅಸ್ಥಿಪಂಜರ ಪತ್ತೆ

Public TV
1 Min Read
nagarjuna 1

ಹೈದರಾಬಾದ್: ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಅವರ ಫಾರ್ಮ್ ಹೌಸ್‍ನಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ.

ಪಾಪಿರೆಡ್ಡಿಗುಡ್ಡ ಗ್ರಾಮದಲ್ಲಿ ನಾಗಾರ್ಜುನ ಅವರ 40 ಎಕರೆ ಜಮೀನಿದೆ. ಸುಮಾರು ದಿನಗಳಿಂದ ಈ ಜಮೀನ್ ಅನ್ನು ಉಪಯೋಗಿಸುತ್ತಿರಲಿಲ್ಲ. ಆದರೆ ಈಗ ಇದೇ ಜಮೀನಿನಲ್ಲಿ ಸಿಕ್ಕ ಅಜ್ಞಾತ ಶವವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

nagarjuna

ಪೊಲೀಸರ ಪ್ರಕಾರ 40 ಎಕರೆ ಜಮೀನಿನಲ್ಲಿ ನಾಗಾರ್ಜುನ ಪತ್ನಿ ಅಮಲಾ ಅವರು ಕೃಷಿ ಮಾಡುವ ಆಸಕ್ತಿ ವಹಿಸಿದ್ದರು. ಹೀಗಾಗಿ ಅವರು ಕೆಲಸಗಾರರನ್ನು ಜಮೀನಿಗೆ ಕಳುಹಿಸಿ ಭೂಮಿ ಸಿದ್ಧಪಡಿಸಲು ಹೇಳಿದ್ದರು. ಕೆಲಸಗಾರರು ಜಮೀನು ಸಿದ್ಧಪಡಿಸಲು ಹೋದ ವೇಳೆ ಅಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

nagarjuna 2

ಮೃತದೇಹ ನೋಡುತ್ತಿದ್ದಂತೆ ಕೆಲಸಗಾರರು ಪೊಲೀಸರಿಗೆ ತಿಳಿಸಿದ್ದಾರೆ. ಈ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಲವು ದಿನಗಳಿಂದ ಈ ಜಮೀನು ಕೃಷಿಗೆ ಬಳಸದ ಪರಿಣಾಮ ಇಷ್ಟು ದಿನ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಈ ಸ್ಥಳದಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸದ್ಯ ಈ ಬಗ್ಗೆ ಸೆಕ್ಷನ್ 174 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ಭಾಗವಾಗಿ ಕಾಣೆಯಾದವರ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ಬಗ್ಗೆ ಇದುವರೆಗೂ ಅಕ್ಕಿನೇನಿ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *