ಚೆನ್ನೈ: ಟಾಲಿವುಡ್ ಸ್ಟಾರ್ ನಾಗಾರ್ಜುನ ಅಕ್ಕಿನೇನಿ ತೆಲುಗು ಚಲನಚಿತ್ರಗಳನ್ನು ಲೈಂಗಿಕತೆ(ಸೆಕ್ಸಿಸ್ಟ್) ಹೆಚ್ಚಿರುತ್ತೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತೆಲುಗಿನ ಎಲ್ಲ ಸಿನಿಮಾಗಳು ಮತ್ತು ಹಾಡಿನ ಸಾಹಿತ್ಯವು ‘ಸೆಕ್ಸಿಸ್ಟ್’ ಆಗಿರುತ್ತೆ ಎಂಬ ಆರೋಪದ ಮಾತುಗಳು ಸರಿಯಲ್ಲ. ನಮ್ಮ ಭಾಷೆಯನ್ನು ಬೇರೆ ಭಾಷೆಯಲ್ಲಿ ಅನುವಾದಿಸಿದರೆ ಅದು ತನ್ನ ನಿಜವಾದ ಸತ್ವ ಕಳೆದುಕೊಳ್ಳುತ್ತೆ ಎಂದರು.
Advertisement
Advertisement
ತೆಲುಗು ಭಾಷೆಯನ್ನು ನೀವು ಅಕ್ಷರಶಃ ಇಂಗ್ಲಿಷ್‍ಗೆ ಅನುವಾದಿಸಿದರೆ, ಅದು ತುಂಬಾ ಸೆಕ್ಸಿಸ್ಟ್ ಆಗಿ ಕಾಣುತ್ತದೆ. ನಾನು ಇದನ್ನು ಅನೇಕ ಜನರೊಂದಿಗೆ ಚರ್ಚೆಸಿದ್ದೇನೆ. ಈ ಬಗ್ಗೆ ನಾನು ತುಂಬಾ ಮಾತನಾಡಿದ್ದೇನೆ ಎಂದು ವಿವರಿಸಿದರು.
Advertisement
ನಮ್ಮ ಸಿನಿಮಾ ‘ಬಂಗಾರರಾಜು’ ಹಾಡುಗಳನ್ನು ನೀವು ತೆಗೆದುಕೊಂಡರೂ ಅದು ಶುದ್ಧ ಜಾನಪದ ರಾಗಗಳೇ. ಆ ಸಾಲುಗಳನ್ನು ಇಂಗ್ಲಿಷಿನಲ್ಲಿ ಅನುವಾದಿಸಿದರೆ ‘ನೀನು ಇಂದು ರಾತ್ರಿ ನನ್ನೊಂದಿಗೆ ಮಲಗುತ್ತೀಯಾ?’ ಎಂಬ ಅರ್ಥದ ಸಾಲು ಬರುತ್ತದೆ. ಅದು ಸೆಕ್ಸಿಸ್ಟ್ ಆಗಿ ಕಾಣುತ್ತದೆ. ಆದರೆ ಆ ಹಾಡನ್ನು ತೆಲುಗು ಮಹಿಳೆಯರು ಹಾಡಿರುವುದನ್ನು ನೀವು ಗಮನಿಸಬಹುದು ಎಂದು ಹೇಳಿದರು. ಇದನ್ನೂ ಓದಿ: ಮಾನಸಿಕವಾಗಿ ಕುಗ್ಗಿ, ಸುಧಾರಿಸಿಕೊಂಡು ಮತ್ತೆ ಯಶಸ್ವಿಯಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಸಮಂತಾ
Advertisement
ಕೆಲವೊಂದು ಸಿನಿಮಾಗಳು ನೀವು ಹೇಳಿದ ರೀತಿಯಲ್ಲೇ ಇರುತ್ತೆ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಪದಗಳನ್ನು ನಾವು ಸರಿಯಾಗಿ ಬಳಸಲಿಲ್ಲ ಎಂದರೆ ಈ ರೀತಿ ತಪ್ಪಾಗುವುದನ್ನು ನಾವು ನೋಡಬಹುದು. ಆದರೆ ಹೆಚ್ಚು ಸಿನಿಮಾಗಳು ಲೈಂಗಿಕತೆಯನ್ನೆ ಹೆಚ್ಚು ಪ್ರಚೋದಿಸುತ್ತದೆ ಎಂಬುದು ಸುಳ್ಳು ಎಂದರು.
ನಾಗಾರ್ಜುನ ಪ್ರಸ್ತುತ ತೆಲುಗು ಚಿತ್ರ ‘ಬಂಗಾರರಾಜು 2’ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ತಮ್ಮ ಮಗ ‘ನಾಗಚೈತನ್ಯ’ ಅವರೊಂದಿಗೆ ನಟಿಸಿದ್ದಾರೆ. 2016ರಲ್ಲಿ ತೆರೆಕಂಡ ‘ಸೊಗ್ಗಡೆ ಚಿನ್ನಿ ನಾಯನ’ ಸಿನಿಮಾದ ಮುಂದುವರಿದ ಭಾಗ ಈ ‘ಬಂಗಾರರಾಜು’ ಸಿನಿಮಾವಾಗಿದೆ. ಈ ಚಿತ್ರಕ್ಕೆ ಕಲ್ಯಾಣ್ ಕೃಷ್ಣ ಕುರಸಾಲ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ಮತ್ತು ಕೃತಿ ಶೆಟ್ಟಿ ಕೂಡ ನಟಿಸಿದ್ದಾರೆ.
ಈ ಸಿನಿಮಾ ಇದೇ ತಿಂಗಳು 14 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್-19 ಹಿನ್ನೆಲೆ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹೋಗಿದೆ. ಇದನ್ನೂ ಓದಿ: ಮನೆಯಲ್ಲಿ ಕ್ವಾರಂಟೈನ್‍ನಲ್ಲಿದ್ದವರಿಗೆ ಆನ್‍ಲೈನ್ ಯೋಗ ಕ್ಲಾಸ್: ಕೇಜ್ರಿವಾಲ್
ಇದರ ಹೊರತಾಗಿ, ನಾಗಾರ್ಜುನ ಅಯಾನ್ ಮುಖರ್ಜಿ ಅವರ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಅಲಿಯಾ ಭಟ್, ಅಮಿತಾಬ್ ಬಚ್ಚನ್ ಮತ್ತು ಡಿಂಪಲ್ ಕಪಾಡಿಯಾ ಕೂಡ ನಟಿಸಿದ್ದಾರೆ. ಇದು ಸೆಪ್ಟೆಂಬರ್ 30 ರಂದು ಬೆಳ್ಳಿತೆರೆ ಮೇಲೆ ಬರಲಿದೆ.