Connect with us

Bengaluru City

ವಿಜಿಗೆ ರಕ್ತಕಣ್ಣೀರು ಸಿನಿಮಾ ನೋಡೋಕೆ ಹೇಳಿ: ನಾಗರತ್ನ

Published

on

ಬೆಂಗಳೂರು: ದುನಿಯಾ ವಿಜಯ್ ಅವರಿಗೆ ರಕ್ತಕಣ್ಣೀರು ಸಿನಿಮಾ ನೋಡೋಕೆ ಹೇಳಿ. ಯಾರ ಜೀವನ ಹಾಳಾಗುತ್ತದೆ ಎನ್ನುವುದು ತಿಳಿಯುತ್ತದೆ. ಅವರ ಬಳಿ ಸಿನಿಮಾ ಇಲ್ಲದಿದ್ದರೆ ಬೇಕಾದರೆ ನಾನೇ ಸಿಡಿ ತರಿಸಿ ಕೊಡುತ್ತೇನೆ ಎಂದು ವಿಜಯ್ ಮೊದಲ ಪತ್ನಿ ನಾಗರತ್ನ ಹೇಳಿದ್ದಾರೆ.

ಕತ್ರಿಗುಪ್ಪೆಯ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಇಂದು ಮಾತನಾಡಲು ನಿಮ್ಮ ಮುಂದೆ ಬಂದಿದ್ದು, ನನ್ನ ಕುಟುಂಬ ಬೀದಿಗೆ ಬರಲು ಕಾರಣರಾಗಿರುವ ಕೀರ್ತಿ ಬಗ್ಗೆ ಮಾತನಾಡಲು ಬಂದಿದ್ದೇನೆ. ಆಕೆ ಬಗ್ಗೆ ನನಗೆ ಎಲ್ಲಾ ಗೊತ್ತಿದೆ. ಏನಕ್ಕೆ ವಿಜಯ್ ಆಕೆ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾಳೆ ಎನ್ನುವುದು ತಿಳಿದಿದೆ. ಆಕೆ ಸ್ಲಂ ನಿಂದ ಬಂದಿದ್ದಾಳೆ. ಆದರೆ ನಾನು ವಿಜಯ್ ಅವರಿಗೆ ಡಿವೋರ್ಸ್ ಕೊಟ್ಟಿಲ್ಲ.  ವರ್ಷಕ್ಕೆ ಒಬ್ಬರೂ ಬರುತ್ತಾರೆ, ಹೋಗುತ್ತಾರೆ ಎಂದು ಸುಮ್ಮನಿದ್ದೆ. ಅದಕ್ಕೆ ಕೀರ್ತಿ ಜೊತೆ ಇದ್ದಾಗಲೂ ನಾನು ಪ್ರಶ್ನೆ ಮಾಡಿಲ್ಲ. ಕೀರ್ತಿ ಯಾರ ಯಾರ ನಿರ್ಮಾಪಕ ಜೊತೆ ಓಡಾಡಿದ್ದಾಳೆ ಎನ್ನುವುದರ ಬಗ್ಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ನನ್ನ ಮಕ್ಕಳು, ಕುಟುಂಬವನ್ನು ಬೀದಿಪಾಲು ಮಾಡಲೆಂದೇ ಕೀರ್ತಿ ಆಗಮಿಸಿದ್ದು, ವಿಜಯ್ ವರ್ಷಕ್ಕೆ ಒಬ್ಬರಂತೆ ಕರೆದುಕೊಂಡು ಬರುತ್ತಿದ್ದರು. ಈಕೆಯೂ ಹಾಗೇ ಎಂದುಕೊಂಡಿದ್ದೆ. ಆದರೆ ಮಾಧ್ಯಮಗಳಲ್ಲಿ 2ನೇ ಹೆಂಡತಿ ಎಂದು ಹೇಳುತ್ತಿದ್ದರೆ ಸುಮ್ಮನೆ ಇರುವುದು ಹೇಗೆ? ವಿಜಯ್ ಅವರಿಗೆ ಈ ಕುರಿತು ಸಾಕಷ್ಟು ಬಾರಿ ಹೇಳಿದರೂ ಅವರು ಮಾತು ಕೇಳಲಿಲ್ಲ. ಕೀರ್ತಿ ಕುರಿತು ಎಲ್ಲಾ ದಾಖಲೆ ಇದ್ದು, ಅವುಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ. ನನ್ನ ಮಕ್ಕಳಿಗೆ ಅಪ್ಪ-ಅಮ್ಮ ಇಬ್ಬರು ಬೇಕು. ನಾನು ನನ್ನ ಮಕ್ಕಳು ಬೀದಿಗೆ ಬರೋ ಪರಿಸ್ಥಿತಿಯಲ್ಲಿದ್ದೇವೆ. ನಾನು ಆಸ್ತಿಗೆ ಬಂದವಳಲ್ಲ, ನನಗೆ ವಿಜಯ್ ಬೇಕಷ್ಟೇ ಎಂದರು.

ಇದೇ ವೇಳೆ ವಿಜಯ್ ಮಾಡಿರುವ ಆರೋಪಗಳ ಕುರಿತು ಉತ್ತರಿಸಿದ ಅವರು, ಮಕ್ಕಳ ಹೆಸರಲ್ಲಿ ಯಾವುದೇ ಆಸ್ತಿ ಇಲ್ಲ. ಮನೆ ಮಾತ್ರ ನನ್ನ ಹೆಸರಿನಲ್ಲಿದೆ. ಆದರೆ ನಮ್ಮ ಕುಟುಂಬದ ಹೆಸರಿನಲ್ಲಿ ಮೂರು ಮನೆ ಇದ್ದು, ಅವೆಲ್ಲಾ ಏನಾಗಿದೆ ಗೊತ್ತಿಲ್ಲ. ಈಗ ಬಾಡಿಗೆ ಮನೆಯಲ್ಲಿ ಯಾಕೆ ಇದ್ದಾರೆ ಎನ್ನುವುದು ಗೊತ್ತಿಲ್ಲ. ನನ್ನ ಗಂಡ ಅಮಾಯಕ ಈ ಕುರಿತು ಅವರಿಗೆ ಏನು ಗೊತ್ತಿಲ್ಲ. ಅತ್ತೆ ಮಾವ ಅವರನ್ನು ನೋಡಿಕೊಳ್ಳೋಕೆ ಬಂದೆ ಎಂದು ಹೇಳುವ ಕೀರ್ತಿ ಈಗ ಎಲ್ಲಿದ್ದಾಳೆ ಎಂದು ಪ್ರಶ್ನಿಸಿದರು.

ಮಾಧ್ಯಮದ ಮುಂದೇ ವಿಜಯ್ ನನ್ನ ಪತಿ ಎಂದು ಪೋಸ್ ನೀಡಲು ಕೀರ್ತಿಗೆ ನಾಚಿಕೆ ಆಗಲ್ವಾ? ಅವಳ ನಡೆ ಮೀತಿ ಮೀರುತ್ತಿದೆ. ವಿಜಯ್ ಬಾಡಿಗೆ ಮನೆಗೆ ಹೋಗಲು ಕೀರ್ತಿಗೌಡ ಕಾರಣ. ಅಲ್ಲದೇ ಜೈಲಿಗೆ ಹೋಗಲು ಅವಳೇ ಕಾರಣ. ಅವಳು ದುಡ್ಡು ಮಾಡಲು ಬಂದಿದ್ದಾಳೆ. ಈ ಕುರಿತು ಎಲ್ಲಾ ದಾಖಲೆ ಸಂಗ್ರಹಿಸುತ್ತಿದ್ದೇನೆ. ಈ ಎಲ್ಲಾ ವಿಚಾರಗಳ ಸತ್ಯ ಇವತ್ತು ಅಲ್ಲದಿದ್ದರೂ ನಾಳೆ ವಿಜಿ ಅವರಿಗೆ ಗೊತ್ತಾಗುತ್ತೆ. ಅದಕ್ಕಾಗಿ ನಾನು ಕಾಯುತ್ತೇನೆ ಎಂದು ತಿಳಿಸಿದರು.

ನನಗೆ ಇಬ್ಬರು ಎರಡು ಎರಡು ಹೆಣ್ಣು ಮಕ್ಕಳಿದ್ದಾರೆ. ಅವರ ಭವಿಷ್ಯ ಹಾಳಾಗಬಾರದೆಂದು ಸುಮ್ಮನಿದ್ದೆ. ಆದರೆ ನನಗೆ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮಾಧ್ಯಮದ ಮುಂದೆ ಬರಬೇಕಾಯಿತು. ಕೀರ್ತಿ ಜೊತೆ ಇರುವ ಮಗು ಬಾಡಿಗೆ ಮಗು ಅದು ವಿಜಯ್ ಅವರದ್ದು ಅಲ್ಲ. ಈ ಕುರಿತು ವಿಜಯ್ ಅವರಿಗೆ ಅರ್ಥವಾದರೆ ಅವರೇ ನನ್ನ ಬಳಿ ಬಂದು ಮಾತನಾಡುತ್ತಾರೆ. ಯಾರಾದರು ವಿಜಯ್ 2ನೇ ಮದುವೆಗೆ ಹೋಗಿದ್ದೀರಾ? ಗಂಡ ಅಂತಾ ಹೇಗೆ ಹೇಳುತ್ತಾಳೆ? ಏನ್ ದಾಖಲೆ ಇದೆ? ಕೀರ್ತಿಗೌಡ ತಂದೆ ಯಾರು ಎಂದು ಮೊದಲು ಕೇಳಿ? ಯಾವತ್ತು ಕೀರ್ತಿಗೌಡ ನನ್ನ ಮಕ್ಕಳಿಗೆ ಚಿಕ್ಕಮ್ಮ ಅಲ್ಲ. ಏಕೆಂದರೆ ಇಟ್ಟುಕೊಂಡವರು ಎಲ್ಲರು ಚಿಕ್ಕಮ್ಮಂದಿರಲ್ಲ ಎಂದು ಕಿಡಿಕಾರಿದರು.

ನನ್ನ ಗಂಡ ಹೇಗೆ ಮತ್ತೆ ನನ್ನ ಬಳಿ ಬರುತ್ತಾರೆ ಎಂಬುವುದು ನನಗೆ ಗೊತ್ತಿದೆ. ಅವರ ಮೇಲೆ ಈಗಲೂ ನನಗೆ ನಂಬಿಕೆ ಇದೆ. ಆದರೆ ಅವರು ಕಳೆದ ಸುದ್ದಿಗೋಷ್ಠಿಯಲ್ಲಿ ಹೇಳಿರುವ ಮಾತಿನಂತೆ ವಕೀಲರ ದಾಖಲೆ ಬಿಡುಗಡೆ ಮಾಡಲು ತಿಳಿಸಿ. ಈ ಕುರಿತು ಎಲ್ಲಾ ಮಾಹಿತಿ ಲಭ್ಯವಾದ ಬಳಿಕ ದಾಖಲೆ ಸಮೇತ ಉತ್ತರಿಸುತ್ತೇನೆ ಎಂದು ತಿಳಿಸಿದರು.

ಸುದ್ದಿಗೋಷ್ಠಿ ವೇಳೆ ವಿಜಯ್ ಹಾಗೂ ಕೀರ್ತಿ ಕುರಿತ ದಾಖಲೆ, ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಸುದ್ದಿಗೋಷ್ಠಿಯಲ್ಲಿ ಯಾವುದೇ ದಾಖಲೆ ಬಿಡುಗಡೆ ಮಾಡದೇ ಜಾರಿಕೊಂಡರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *