ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮದ ಬರ್ಸಬೆಟ್ಟು ಮನೆಯಲ್ಲಿ ನಡೆದ ನಾಗ ಪವಾಡ ಸಾಕಷ್ಟು ಸುದ್ದಿ ಮಾಡಿದ್ದು, ಇದೀಗ ಆ ಘಟನೆ ಕುರಿತು ಸ್ವತಃ ನಾಗರಾಜ್ ಭಟ್ ಅವರೆ ಸ್ಪಷ್ಟನೆ ನೀಡಿದ್ದಾರೆ.
ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಾಗರಾಜ್ ಭಟ್, ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನ ವೈರಲ್ ಮಾಡಿದ್ದಾರೆ. ಇದು ಸುಳ್ಳು ಅನ್ನೋದಕ್ಕೆ ಹೇಗೆ ಸಾದ್ಯ? ಹಿಂದೆ ಜೈನರ ಕಾಲದಲ್ಲಿ ಇದ್ದಂತಹ ಎಲ್ಲಾ ಪ್ರತಿಮೆಗಳು ಒಂದೇ ರೂಪದಲ್ಲಿ ಇರುತ್ತಿತ್ತು. ಈಗ ಬೇರೆ ಬೇರೆ ಆಕಾರ ರೂಪದಲ್ಲಿ ಪ್ರತಿಮೆಗಳು ಬರುತ್ತದೆ. ಹೀಗಾಗಿ ಇದು ಜೈನರ ಕಾಲದ ನಾಗ ಪ್ರತಿಮೆ ಆಗಿರುವುದರಿಂದ ಆರೋಪ ಮಾಡಿರುವ ವ್ಯಕ್ತಿ ಇದು ಅವರ ಮನೆಯ ಪ್ರತಿಮೆ ಅಂದುಕೊಂಡಿದ್ದಾನೆ. ಉದಯ್ ಅವರ ಮನೆಯಲ್ಲಿ ನಾಗರ ಪ್ರತಿಮೆ ಹೊರ ತೆಗೆಯುವ ವಿಡಿಯೋ ಇದೆ. ಸ್ಥಳದಲ್ಲಿ ಏನೇನು ಸಿಕ್ಕಿದೆ ಅಂತಾ ಸಂಪೂರ್ಣ ವಿಡಿಯೋ ಇದೆ. ಯಾರೋ ಇದು ಸುಳ್ಳು ಸುದ್ದಿ ಅಂತಾ ಪ್ರಚಾರ ಮಾಡ್ತಿದ್ದಾರೆ ಎಂದು ಹೇಳಿದರು.
ಈ ತರಹ ನಾಗರ ಕಲ್ಲು ಸಿಕ್ಕಿರೋದು ಮೊದಲ ಬಾರಿ ಅಲ್ಲ. ಹಿಂದೆ ಮೈಸೂರು, ತುಮಕೂರು ಇನ್ನೂ ಹಲವೆಡೆ ಒಂದೇ ತರಹದ ಪ್ರತಿಮೆಗಳು ಸಿಕ್ಕಿದೆ. ಅಲ್ಲದೆ ಹಲವು ನಾಗರ ಪ್ರತಿಮೆ ಪ್ರತಿಸ್ಠಾಪನೆ ಕೂಡ ಆಗಿದೆ. ಉದಯ್ ಅವರ ಮನೆಯ ಸಮಸ್ಯೆ ನಿವಾರಣೆ ಆಗಬೇಕು ಅಂತಾನೆ ನಾಗರ ಕಲ್ಲನ್ನು ಹೊರ ತಗೆಸಿದ್ದು. ಇನ್ನು ಮುಂದೆ ಅವರಿಗೆ ಒಳ್ಳೆದಾಗುತ್ತೆ. ಜೈನರ ಕಾಲದಲ್ಲಿ ಪ್ರತಿಮೆಗಳಿಗೆ ಕೆತ್ತನೆ ಇರುತ್ತಿರಲಿಲ್ಲ. ಆದರೆ ಈಗಿನ ಕಾಲದಲ್ಲಿ ವಿಧ ವಿಧವಾದ ಆಕಾರದಲ್ಲಿ ಪ್ರತಿಮೆಗಳು ಬರುತ್ತದೆ. ನಾನು ಪತ್ತೆ ಮಾಡಿರುವ ಹಲವು ಪ್ರತಿಮೆಗಳು ಜೈನರ ಕಾಲದ್ದು. ಅದಕ್ಕೆ ಎಲ್ಲಾ ಒಂದೇ ತರಹ ಇದೆ ಎಂದು ಸ್ಪಷ್ಟ ಪಡಿಸಿದರು.
ಸುಮಾರು 7-8 ವರ್ಷದಿಂದ ಈ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ. ಸಿಕ್ಕ ಕಲ್ಲನ್ನು ಪೂಜೆ ಮಾಡಿ ನೀರಿನಲ್ಲಿ ಬಿಡುತ್ತಾರೆ. ಕೆಲವರು ಹೊಸ ಪ್ರತಿಮೆ ಮಾಡಿ ಪ್ರತಿಸ್ಠಾಪನೆ ಮಾಡ್ತಾರೆ. ಇದು ಸತ್ಯ ಘಟನೆ ಕೆಲವರು ಸುಮ್ಮನೆ ಸುಳ್ಳು ಎಂದು ಪ್ರಚಾರ ಮಾಡ್ತಿದ್ದಾರೆ. ಅದಕ್ಕೆ ನಾನೇನು ಮಾಡೋಕೆ ಆಗಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews