– ಎ1 ನಿಂದ ಎ 23 ಮಾಡಿರುವುದಕ್ಕೆ ಬಿಜೆಪಿ ನಾಯಕರ ಕಿಡಿ
– ಪೊಲೀಸರ ಮುಂದೆಯೇ ಕಲ್ಲು, ಬೆಂಕಿ ಹಚ್ಚಿದ್ದರೂ ಸರ್ಕಾರದಿಂದ ಓಲೈಕೆ
ಬೆಂಗಳೂರು/ಮಂಡ್ಯ: ನಾಗಮಂಗಲ ಗಲಭೆ (Nagamangala Riot) ಪ್ರಕರಣದಲ್ಲಿ ಹಿಂದೂಗಳನ್ನೇ (Hindu) ಟಾರ್ಗೆಟ್ ಮಾಡಲಾಗಿದ್ಯಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಆರೋಪಿಗಳ ಪೈಕಿ ಎ1 ನಿಂದ ಎ-23 ವರೆಗಿನ ಯುವಕರೇ ಹಿಂದೂಗಳೇ ಆಗಿದ್ದಾರೆ ಎಂದು ಬಿಜೆಪಿ (BJP) ನಾಯಕರು ಗಂಭೀರ ಆರೋಪ ಮಾಡಿದ್ದರಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.
ಗಲಭೆ ನಡೆದ ಬಳಿಕ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಆರ್ ಅಶೋಕ್, ಸಿಟಿ ರವಿ, ಅಶ್ವತ್ಥನಾರಾಯಣ, ನಾರಾಯಣ ಗೌಡ, ಪ್ರತಾಪ್ ಸಿಂಹ ಸೇರಿ ಹಲವು ಕಲವು ಕಮಲ ನಾಯಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪರಿಸ್ಥಿತಿ ಅವಲೋಕಿಸಿ, ಗಣೇಶೋತ್ಸವದ ಆಯೋಜಕರು ಮತ್ತು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಭರವಸೆ ನೀಡಿದರು.
Advertisement
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕರು ಗಣೇಶನನ್ನು ಕೂರಿಸಿದ್ದು ಹಿಂದೂಗಳು (Hindu) ಕಲ್ಲು ತೂರಿದ್ದು ಮುಸ್ಲಿಮ್ ಯುವಕರು. ಆದರೆ ಪೊಲೀಸರ ವೈಫಲ್ಯ ಮುಚ್ಚಿಕೊಳ್ಳಲು ಹಿಂದೂಗಳನ್ನು ಬಂಧನ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಬುದ್ಧಿ ಹೇಳಿದ್ದಕ್ಕೆ ಕೆಎಸ್‍ಆರ್‌ಟಿಸಿ ಅಧಿಕಾರಿಗೆ ಚಾಕು ಇರಿದ ಅಸಿಸ್ಟೆಂಟ್!
Advertisement
Advertisement
ಬಿಜೆಪಿ ನಾಯಕರ ಆರೋಪ ಏನು?
ಕಲ್ಲು ತೂರಿದವರನ್ನು ಮೊದಲು ಆರೋಪಿಗಳನ್ನಾಗಿ ಮಾಡಬೇಕಿತ್ತು. ಆದರೆ ಗಣೇಶೋತ್ಸವ ಮಾಡಿದವರನ್ನೇ ಆರೋಪಿಗಳನ್ನಾಗಿ ಮಾಡಿದ್ದಾರೆ. ಅಲ್ಪಸಂಖ್ಯಾರ ಒಲೈಕೆಗಾಗಿ ಹಿಂದೂ ಯುವಕರನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ. ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಅಮಾಕರು ಬಲಿಯಾಗಿದ್ದಾರೆ. ಮೆರವಣಿಗೆ ತಡೆದು ಗಲಾಟೆ ಮಾಡಿದವರು ಯಾರು?
Advertisement
ಕಾಂಗ್ರೆಸ್ ನಾಯಕರು ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುತ್ತಿದ್ದಾರೆ. ಹಿಂದೆ ಕೆರಗೋಡಿನಲ್ಲಿ ಹನುಮ ಧ್ವಜ ವಿರೋಧ ಮಾಡಿದರು. ಈಗ ಗಣಪತಿ ಮೆರವಣಿಗೆ ವಿಚಾರದಲ್ಲಿ ಪೊಲೀಸರು ಭದ್ರತೆ ನೀಡಬೇಕಿತ್ತು. ಪೊಲೀಸರ ಮುಂದೆಯೇ ಕಲ್ಲು ತೂರಾಟ, ಬೆಂಕಿ ಹಚ್ಚಿದ್ದರೂ ಮುಸ್ಲಿಂ ಮತಗಳ ಓಲೈಕೆಗೆ ಕಾಂಗ್ರೆಸ್ ನಾಯಕರ ಈ ನಡವಳಿಕೆ ಸರಿಯಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಾಗಮಂಗಲ ಗಲಭೆ ಕೇಸ್ – ಪುತ್ರ ಜೈಲುಪಾಲಾದ ಸುದ್ದಿ ಕೇಳಿ ಕುಸಿದು ಬಿದ್ದ ತಾಯಿ
53 ಮಂದಿ ಅರೆಸ್ಟ್:
ಗಲಭೆ ಪ್ರಕರಣ ಸಂಬಂಧ 150 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು 53 ಮಂದಿಯನ್ನು ಬಂಧಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.
ಯಾವ ಸೆಕ್ಷನ್‌ಗಳಡಿ ಕೇಸ್?
* ಬಿಎನ್‌ಎಸ್ ಸೆಕ್ಷನ್ 109 – ಕೊಲೆ ಯತ್ನ
* ಬಿಎನ್‌ಎಸ್ ಸೆಕ್ಷನ್ 115 – ವೈಯಕ್ತಿಕ ದಾಳಿ, ಗಾಯ
* ಬಿಎನ್‌ಎಸ್ ಸೆಕ್ಷನ್ 118 – ಮಾರಾಕಾಸ್ತ್ರಗಳಿಂದ ಗಂಭೀರ ಹಲ್ಲೆ
* ಬಿಎನ್‌ಎಸ್ ಸೆಕ್ಷನ್ 121 – ಸಾರ್ವಜನಿಕ ಸೇವಕನ ಮೇಲೆ ಹಲ್ಲೆ, ಗಾಯ
* ಬಿಎನ್‌ಎಸ್ ಸೆಕ್ಷನ್ 132 – ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ ಹಲ್ಲೆ
* ಬಿಎನ್‌ಎಸ್ ಸೆಕ್ಷನ್ 189 – ಅಕ್ರಮವಾಗಿ ಗುಂಪು ಸೇರುವುದು
* ಬಿಎನ್‌ಎಸ್ ಸೆಕ್ಷನ್ 190 – ಸಮಾನ ಉದ್ದೇಶದಿಂದ ಅಕ್ರಮವಾಗಿ ಗುಂಪು ಸೇರುವುದು