ಮಂಡ್ಯ: ನಾವು ಬಡವರು. ಬ್ಯಾಂಕ್ ಸಾಲ, ಬಡ್ಡಿಗೆ ಹಣ ಪಡೆದು ಕಟ್ಟಿದ ಅಂಗಡಿ ಇದು. ಒಂದು ಕ್ಷಣದ ಗಲಾಟೆಗೆ ಈ ಥರ ಮಾಡಿದ್ದಾರೆ. ಇನ್ನು 10 ವರ್ಷ ಪ್ರಯತ್ನ ಪಟ್ಟರು ಆಗಿರುವ ನಷ್ಟ ಭರಿಸಲು ಸಾಧ್ಯವಿಲ್ಲ. ಈಗ ನಾವು ಎಲ್ಲಿಂದ ಆ ಸಾಲ ತೀರಿಸಲಿ ಎಂದು ಗುಜುರಿ ಅಂಗಡಿ (Scrap Godown) ಮಾಲೀಕ ಬೇಸರ ವ್ಯಕ್ತಪಡಿಸಿದ್ದಾರೆ.
ನಾಗಮಂಗಲದಲ್ಲಿ (Nagamangala) ನಡೆದ ಕೋಮು ಗಲಭೆಯ ಕುರಿತು ಮಾಧ್ಯಮದ ಮುಂದೆ ಮಾತನಾಡಿದ ಅವರು, ನಾನು ಇಲ್ಲಿ ವ್ಯಾಪಾರ ಮಾಡುವುದಕ್ಕೆ ಬಂದು 5 ತಿಂಗಳು ಆಗಿದೆ. ಘಟನೆ ನಡೆಯುವಾಗ ನಾನಿಲ್ಲಿ ಇರಲಿಲ್ಲ. ನನ್ನ ತಾಯಿಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಮೈಸೂರಿಗೆ (Mysuru) ಹೋಗಿದ್ದೆ. ನಿನ್ನೆ ನಡೆದ ಘಟನೆಯಲ್ಲಿ ಒಟ್ಟು 10 ಲಕ್ಷ ರೂ. ಮೊತ್ತದ ವಸ್ತುಗಳು ಧ್ವಂಸವಾಗಿದೆ. ಮೋಟರ್ ಪಂಪ್‌ಗಳು, ಸುಮಾರು 3 ಲಕ್ಷ ರೂ ಮೌಲ್ಯದ ಹನಿ ನೀರಾವರಿ ಡ್ರಿಪ್ ಪೈಪ್‌ಗಳು, ಅನೇಕ ವಾಹನಗಳು ಸೇರಿದಂತೆ ಇನ್ನಿತರೆ ವಸ್ತುಗಳು ಬೂದಿಯಾಗಿವೆ ಏನೂ ಉಳಿದಿಲ್ಲ ಎಂದು ಅಳಲು ತೋಡಿಕೊಂಡರು. ಇದನ್ನೂ ಓದಿ: ನಾಗಮಂಗಲದ ಘಟನೆ ಕಿಡಿಗೇಡಿಗಳ ಕೆಲಸ, ಹೆಚ್‌ಡಿಕೆ ಕಡ್ಡಿ ಗೀರುವುದು ಬೇಡ: ಬಾಲಕೃಷ್ಣ
Advertisement
Advertisement
ನನಗೆ ಜಮೀನಿನ ಮಾಲೀಕರು ಕರೆ ಮಾಡಿ ಗಲಾಟೆ ನಡೆಯುತ್ತಿರುವ ವಿಚಾರ ತಿಳಿಸಿದರು. ಸಣ್ಣ ಪುಟ್ಟ ಗಲಾಟೆ ಅಂದುಕೊಂಡಿದ್ದೆ ಆದರೆ ಈ ಮಟ್ಟಕ್ಕೆ ಗಲಾಟೆ ನಡೆಯುತ್ತದೆ ಅಂದುಕೊಂಡಿರಲಿಲ್ಲ. ಧೈರ್ಯ ಇರುವವರು ಇರುತ್ತಾರೆ ಇಲ್ಲದವರು ವಿಷ ಕುಡಿದು ಸಾಯಬೇಕಷ್ಟೇ. ಇಲ್ಲಿ ಬಡವರ ಜೀವನ ಹಾಳಾಗಿ ಹೋಯಿತು ಎಂದರು. ಇದನ್ನೂ ಓದಿ: ದುರುಳರು ಯಾವುದೇ ಧರ್ಮದವರಾಗಿರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ
Advertisement
ಘಟನೆ ಬಗ್ಗೆ ಜಮೀನು ಮಾಲೀಕ ಶಿವರಾಜ್ ಮಾತನಾಡಿ, ನಾವು ರಾತ್ರಿ ಸುಮಾರು 10 ಗಂಟೆ ತನಕ ಇಲ್ಲೇ ಇದ್ದೆವು. ನಂತರ ಈ ಘಟನೆ ಸಂಭವಿಸಿದೆ. ಯಾರೋ 10-20 ಕಿಡಿಗೇಡಿ ಯುವಕರು ಬಂದು ಕಿಚ್ಚು ಹಚ್ಚಿದರು. ಓಡಿ ಬಂದು ನೋಡಿದಾಗ ಬೆಂಕಿ ಪೂರ್ತಿ ಅಂಗಡಿಗೆ ಹತ್ತುಕೊಂಡಿತ್ತು. ಅವರು ಮುಖ ಕಾಣಿಸದ ಹಾಗೆ ಬಟ್ಟೆ ಮುಚ್ಚಿದ್ದರು. ಅಷ್ಟರಲ್ಲಿ ಪೊಲೀಸರು ಬಂದರು ಆಗ ಅಲ್ಲಿದ್ದ ಎಲ್ಲರೂ ಪರಾರಿಯಾಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ನಮಾಜ್ ವೇಳೆ ಎಲ್ಲಾ ಮಂದಿರಗಳ ಮೈಕ್ ಬಂದ್ ಆಗ್ಬೇಕು – ಬಾಂಗ್ಲಾ ಸರ್ಕಾರ ಆದೇಶ
Advertisement
ನಮ್ಮ ದೇಶದಲ್ಲಿ ಮಹಾತ್ಮರು ಹೋರಾಡಿ ತಂದ ಸ್ವಾತಂತ್ರ್ಯವನ್ನು ಇಂತಹ ಕಿಡಿಗೇಡಿಗಳು ದುರುಪಯೋಗ ಪಡಿಸುತ್ತಿದ್ದಾರೆ. ಮುಸ್ಲಿಮರಿಗೆ ನಾವು ಅವರ ಆಚರಣೆಗಳನ್ನು ಮಾಡುವುದಕ್ಕೆ ಸಾತ್ ನೀಡುತ್ತೇವೆ. ಅವರ ಕಾರ್ಯಕ್ರಮಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಆದರೆ ಅವರು ನಮ್ಮ ಕಾರ್ಯಕ್ರಮಕ್ಕೆ ಈ ರೀತಿಯ ದಂಧೆ ಮಾಡಬಾರದಿತ್ತು. ಗಣಪತಿ ವಿಸರ್ಜನೆಗೆ ಅವಕಾಶ ಮಾಡಿ ಕೊಡಬೇಕಿತ್ತು ಎಂದರು. ಇದನ್ನೂ ಓದಿ: Madhya Pradesh | ಸೇನಾ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಸ್ನೇಹಿತೆಯ ಗ್ಯಾಂಗ್ ರೇಪ್