ಹುಡುಗಿಯರೇ.. ನಾನು ನಿಮ್ಮನ್ನ ಕಡೆಗಣಿಸಿಲ್ಲ – ನಾಗಾಲ್ಯಾಂಡ್ ಸಚಿವರು ಹೀಗ್ಯಾಕಂದ್ರು?

Public TV
1 Min Read
Nagaland Minister Temjen Imna

ಕೊಹಿಮಾ: ನಾಗಾಲ್ಯಾಂಡ್ (Nagaland) ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ (Temjen Imna) ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದು, ಅನೇಕ ಬಾರಿ ತಮ್ಮನ್ನು ತಾವೇ ಟ್ರೋಲ್ ಮಾಡುಕೊಳ್ಳುತ್ತಾರೆ. ಈ ಬಾರಿ ತಾವು ತಿಂಡಿಯನ್ನು (Food) ತಿನ್ನುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ.

ವೈರಲ್ ಫೋಟೋದಲ್ಲಿ ಏನಿದೆ?: ಏರ್‌ಪೋರ್ಟ್ ಫುಡ್‍ಕೋರ್ಟ್‍ನಲ್ಲಿ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಅವರನ್ನು ನೋಡಿ ಕೆಲವು ಹುಡುಗಿಯರು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಬಂದಿದ್ದಾರೆ. ಅಷ್ಟೇ ಅಲ್ಲದೇ ಅವರ ಹಿಂದೆ ನಿಂತು ಪೋಸ್ ನೀಡಿದ್ದಾರೆ. ಆದರೆ ಸಚಿವರು ಮಾತ್ರ ಆ ಕಡೆ ಗಮನ ನೀಡದೇ ತಮ್ಮ ತಿಂಡಿಯನ್ನು ನೋಡುತ್ತಿದ್ದಾರೆ.

ಈ ಫೋಟೋವನ್ನು ಖುದ್ದು ಸಚಿವರೇ ಹಂಚಿಕೊಂಡಿದ್ದು, ಅದಕ್ಕೆ ಶೀರ್ಷಿಕೆಯನ್ನು ನೀಡಿದ್ದಾರೆ. ಹುಡುಗಿಯರೇ, ನಾನು ನಿಮ್ಮನ್ನು ನಿರ್ಲಕ್ಷಿಸುವುದಿಲ್ಲ ಎಂದು ಭರವಸೆ ನೀಡುತ್ತೇನೆ. ನನ್ನ ತಿಂಡಿಯೊಂದಿಗೆ ನಾನು ಸ್ವಲ್ಪ ಸಮಯ ಕಳೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿನ್ನದ ಗಣಿ ಕುಸಿದು 15 ಕಾರ್ಮಿಕರು ಸಾವು

ಈ ಪೋಸ್ಟ್ ಅನ್ನು ಏಪ್ರಿಲ್ 3 ರಂದು ಸಚಿವರು ಹಂಚಿಕೊಂಡಿದ್ದಾರೆ. ಈಗಾಗಲೇ 24 ಸಾವಿರಕ್ಕೂ ಅಧಿಕ ಲೈಕ್‍ಗಳು ಮತ್ತು 1 ಸಾವಿರಕ್ಕೂ ರಿಟ್ವೀಟ್‍ಗಳು ಬಂದಿವೆ. ಇದನ್ನೂ ಓದಿ: ಕೈ ನಾಯಕರು ಕುಡಿದು ಪಂಚಮಸಾಲಿ ಶ್ರೀಗಳಿಗೆ ಕರೆ ಮಾಡಿ ಕಿರುಕುಳ- ಸಿ.ಸಿ. ಪಾಟೀಲ್ ಗಂಭೀರ ಆರೋಪ

Share This Article