ಇಸ್ಪೀಟ್ ಅಡ್ಡೆ ನಡೆಸುತ್ತಿದ್ದ ನಟ ನಾಗಶೌರ್ಯ ತಂದೆ ಬಂಧನ

Public TV
1 Min Read
naga shouryas

ಹೈದರಾಬಾದ್: ಇಸ್ಪೀಟ್ ಅಡ್ಡೆ ನಡೆಸುತ್ತಿದ್ದ ಆರೋಪದ ಮೇರೆಗೆ ಟಾಲಿವುಡ್ ನಟ ಖ್ಯಾತ ನಟ ನಾಗಶೌರ್ಯ ತಂದೆಯನ್ನು ಪೊಲೀಸರು ಬಂಧಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಹೈದರಾಬಾದ್ ಹೊರ ವಲಯದ ಮಂಚಿರೇವಾ ಪ್ರದೇಶದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ನಾಗಶೌರ್ಯ ತಂದೆ ಶಂಕರ್ ಪ್ರಸಾದ್ ಅವರನ್ನು ಬಂಧಿಸಲಾಗಿದೆ.

Naga Shourya 1

ಪ್ರಸಾದ್ ನರಸಿಂಗಡಿ ಪೊಲೀಸರು ಉಪ್ಪಾರಪಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಶಂಕರ್ ಪ್ರಸಾದ್ ಅವರು ಕ್ಯಾಸಿನೊ ಕಿಂಗ್‍ಪಿನ್ ಗುಟ್ಟಾ ಸುಮನ್ ಜೊತೆ ಇಸ್ಪೀಟ್ ಆಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ತಾವು ಪುರಾವೆಗಳನ್ನು ಸಂಗ್ರಹಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ. ಬಂಧನದೊಂದಿಗೆ ಮಂಚಿರೇವಾ ಫಾರ್ಮ್ ಹೌಸ್ ಪೋಕರ್ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ: ಬೊಮ್ಮಾಯಿ ಗರಂ

 

View this post on Instagram

 

A post shared by Naga Shaurya (@actorshaurya)

ತೆಲಂಗಾಣ ಅಪರಾದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ತೆಲಂಗಾಣದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಪಿಡಿ ಕಾಯ್ದೆ (ಅಪಾಯಕಾರಿ ಚಟುವಟಿಕೆಗಳ (ಪಿಡಿ) ನಿಯಂತ್ರಣ ಕಾಯ್ದೆ)ಯಡಿ ಕೇಸ್ ದಾಖಲಾಗಲಿದೆ. ಈ ಪ್ರಕರಣದಲ್ಲಿ ಈ ವರೆಗೂ 30ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತ 30 ಮಂದಿ ಹೈದರಾಬಾದ್‍ನ ದೊಡ್ಡ ವ್ಯಕ್ತಿಗಳಾಗಿದ್ದಾರೆ. ಈ ಇಸ್ಪೀಟ್ ಅಡ್ಡೆ ಆಯೋಜನೆ ವೇಳೆ ದೊಡ್ಡ ಮಟ್ಟದ ಎಣ್ಣೆ ಪಾರ್ಟಿ, ಭೋಜನ ಕೂಟ ಕೂಡ ಇತ್ತು ಎನ್ನಲಾಗಿದೆ. ಇದನ್ನೂ ಓದಿ:  ಬಿಟ್‌ಕಾಯಿನ್‌ ಹಗರಣದಲ್ಲಿ ಸಿಎಂ ತಲೆದಂಡ ಪಡೆಯಲಿದೆ: ಪ್ರಿಯಾಂಕ್ ಖರ್ಗೆ

Share This Article
Leave a Comment

Leave a Reply

Your email address will not be published. Required fields are marked *