ಹಿಂದೂ ಧರ್ಮದಲ್ಲಿ ನಾಗಪಂಚಮಿ (Naga Panchami) ಹಬ್ಬವು ವಿಶೇಷ ಮಹತ್ವವನ್ನು ಹೊಂದಿದೆ. ಪಂಚಾಂಗದ ಪ್ರಕಾರ, ಪ್ರತಿ ವರ್ಷ ಈ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುತ್ತದೆ. ನಾಗಪಂಚಮಿಯಂದು ಶಿವನನ್ನು ಸರ್ಪ ದೇವತೆಯೊಂದಿಗೆ ಪೂಜಿಸಲಾಗುತ್ತದೆ. ಜೀವನದ ಅಡೆತಡೆಗಳು ನಿವಾರಣೆಯಾಗಲೆಂದು ಶಿವನಲ್ಲಿ ಪಾರ್ಥಿಸಲಾಗುತ್ತದೆ. ಹಿಂದೂಗಳು ಹಾವಿನ ದೇವನಾದ ನಾಗ ದೇವರನ್ನು ಪೂಜಿಸುತ್ತಾರೆ. ನಾಗದೇವರಿಗೆ ಹಾಲು ಮತ್ತು ಬೆಳ್ಳಿಯನ್ನು ಅರ್ಪಿಸಿ ಪೂಜಿಸುತ್ತಾರೆ. ಹುತ್ತಗಳಿಗೆ ತನಿ ಎರೆದು (ಹಾಲು ಎರೆದು) ಪ್ರಾರ್ಥಿಸುತ್ತಾರೆ.
ಈ ವಿಶೇಷ ದಿನದಂದು ಶಿವಲಿಂಗದ ಮೇಲೆ ಕೆಲವು ವಿಶೇಷ ವಸ್ತುಗಳನ್ನು ಅರ್ಪಿಸಿ ಪೂಜಿಸುವುದರಿಂದ ಕಾಳ ಸರ್ಪದೋಷದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕಾಲಸರ್ಪ ದೋಷ ಇರುವವರು ಏನು ಮಾಡಬೇಕು? ನಾಗಪಂಚಮಿಯ ದಿನದಂದು ಶಿವಲಿಂಗದ ಮೇಲೆ ಏನು ಅರ್ಪಿಸಬೇಕೆಂದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಳೆಯಾರ್ಭಟ – ಕೃಷ್ಣಾ ನದಿಗೆ ಹೆಚ್ಚಿದ ಒಳಹರಿವು, 8 ಸೇತುವೆಗಳು ಜಲಾವೃತ
ಏನಿದು ಕಾಳ ಸರ್ಪದೋಷ?
ಗ್ರಹಗಳಿಂದ ಉಂಟಾಗುವ ದೋಷಗಳಲ್ಲಿ ಕಾಳ ಸರ್ಪದೋಷವೂ ಒಂದು. ಜ್ಯೋತಿಷ್ಯ ಶಾಸ್ತçದಲ್ಲಿ, ರಾಹುವಿನ ಅಧಿದೇವತೆ ‘ಕಾಳ’ ಮತ್ತು ಕೇತುವಿನ ಅಧಿದೇವತೆ ‘ಸರ್ಪ’. ಜಾತಕದ ಗ್ರಹಗಳು ಈ ಎರಡು ಗ್ರಹಗಳ ನಡುವೆ ಬಂದಾಗ, ‘ಕಾಳ ಸರ್ಪ’ ದೋಷವು ಉಂಟಾಗುತ್ತದೆ. ಜಾತಕದಲ್ಲಿ ರಾಹು ಮತ್ತು ಕೇತುವಿನ ಅಶುಭ ಸ್ಥಾನವು ಕಾಳ ಸರ್ಪದೋಷವನ್ನು ಸೃಷ್ಟಿಸುತ್ತದೆ. ಎಲ್ಲ ಗ್ರಹಗಳು ರಾಹು ಮತ್ತು ಕೇತುವಿನ ನಡುವೆ ಕಂಡುಬಂದರೆ ದೋಷ ಉಂಟಾಗುತ್ತದೆ. ರಾಹು ಸೂರ್ಯ, ಚಂದ್ರ ಮತ್ತು ಗುರುಗಳೊಂದಿಗೆ ಬಂದಾಗ ದೋಷವಿದೆ. ರಾಹು-ಕೇತುಗಳು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತವೆ. ಹೀಗಾಗಿ, ಅವು ಕ್ರೂರ ಗ್ರಹಗಳೆಂದು ಬಿಂಬಿತವಾಗಿವೆ.
ಕಾಳ ಸರ್ಪದೋಷದಿಂದ ಏನಾಗುತ್ತೆ?
ಜೀವನದಲ್ಲಿ ಅಡೆತಡೆಗಳು, ಶಾಂತಿ ಭಂಗ, ಆತ್ಮವಿಶ್ವಾಸದ ಕೊರತೆ, ಆರೋಗ್ಯ ಸಮಸ್ಯೆಗಳು, ಬಡತನ, ನಿರುದ್ಯೋಗ, ವ್ಯಾಪಾರದ ನಷ್ಟ, ಆತಂಕ, ಸ್ನೇಹಿತರಿಂದ ದ್ರೋಹ, ಸಂಬಂಧಿಕರಿಂದ ಬೆಂಬಲ ಸಿಗದಿರುವುದು ಮೊದಲಾದ ಸಮಸ್ಯೆಗಳು ಎದುರಾಗುತ್ತವೆ.
ಜೇನುತುಪ್ಪ
ನಾಗಪಂಚಮಿಯ ದಿನದಂದು ಶಿವಲಿಂಗದ ಮೇಲೆ ಜೇನುತುಪ್ಪವನ್ನು ಅರ್ಪಿಸುವುದರಿಂದ ಕೌಟುಂಬಿಕ ಕಲಹ ದೂರವಾಗುತ್ತದೆ. ವೃತ್ತಿಜೀವನದಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೆ, ಇದು ವ್ಯಕ್ತಿಗೆ ಅದೃಷ್ಟವನ್ನು ತರುತ್ತದೆ. ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಶ್ರದ್ಧಾಭಕ್ತಿಯಿಂದ ಅಂದು ಶಿವಲಿಂಗದ ಮೇಲೆ ಜೇನುತುಪ್ಪವನ್ನು ಅರ್ಪಿಸಿ. ಇದನ್ನೂ ಓದಿ: Mann ki Baat: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಗೆ ಮೋದಿ ಪ್ರಶಂಸೆ
ಹಸಿ ಹಾಲು
ನಿಮ್ಮ ಜಾತಕದಲ್ಲಿ ಕಾಳ ಸರ್ಪದೋಷವಿದ್ದರೆ, ನಾಗಪಂಚಮಿಯ ಹಬ್ಬದಂದು ಶಿವಲಿಂಗದ ಮೇಲೆ ಹಸಿ ಹಾಲನ್ನು ಅರ್ಪಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ, ನೀವು ಬ್ರಾಹ್ಮಿ ಮುಹೂರ್ತದಲ್ಲಿ ಶಿವಲಿಂಗದ ಮೇಲೆ ಹಾಲು ಅರ್ಪಿಸಬೇಕು. ಇದರಿಂದ ನಿಮಗೆ ಶಿವನ ವಿಶೇಷ ಆಶೀರ್ವಾದ ಸಿಗುತ್ತದೆ. ಜೀವನದಲ್ಲಿನ ಅಡೆತಡೆಗಳನ್ನು ನಿವಾರಣೆಯಾಗುತ್ತವೆ.
ಧಾತುರ
ಧಾತುರವನ್ನು ಅರ್ಪಿಸುವುದರಿಂದ ಶಿವನು ಸಂತುಷ್ಟನಾಗುತ್ತಾನೆ. ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ನಾಗಪಂಚಮಿಯ ದಿನದಂದು ಶಿವಲಿಂಗದ ಮೇಲೆ ಧಾತುರವನ್ನು ಅರ್ಪಿಸುವುದರಿಂದ ನಿಮ್ಮೆಲ್ಲ ಆಸೆಗಳು ಈಡೇರುತ್ತವೆ.
ಬಿಲ್ವಪತ್ರೆ
ಬಿಲ್ವಪತ್ರೆಯು ಶಿವನಿಗೆ ತುಂಬಾ ಪ್ರಿಯವಾದದ್ದು. ವಿಶೇಷ ದಿನ, ಶಿವಲಿಂಗದ ಮೇಲೆ ಭಕ್ತಿಯಿಂದ ಬಿಲ್ಪತ್ರೆಯನ್ನು ಅರ್ಪಿಸಿ. ಶಿವನು ಇದರಿಂದ ಪ್ರಸನ್ನನಾಗುತ್ತಾನೆ. ಭಕ್ತನ ಎಲ್ಲಾ ಆಸೆಗಳು ಈಡೇರುತ್ತವೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ.
ಅಕ್ಷತೆ-ಚಂದನ
ನಾಗಪಂಚಮಿಯ ಹಬ್ಬದಂದು ಶಿವಲಿಂಗದ ಮೇಲೆ ಅಕ್ಷತೆ ಮತ್ತು ಚಂದನವನ್ನು ಅರ್ಪಿಸುವುದನ್ನು ಶುಭವೆಂದು ಪರಿಗಣಿಸಲಾಗಿದೆ. ಶಿವನಿಗೆ ಅಕ್ಷತೆ-ಚಂದನವನ್ನು ಅರ್ಪಿಸುವುದರಿಂದ ಪಾಪಗಳು ನಾಶವಾಗುತ್ತವೆ. ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ಇದನ್ನೂ ಓದಿ: ರಾಜ್ಯದಲ್ಲಿ ರಸಗೊಬ್ಬರ ಕೊರತೆಗೆ ಕಳ್ಳದಂಧೆ ಕಾರಣ – ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ
ಕಪ್ಪು ಎಳ್ಳು
ನಾಗಪಂಚಮಿಯಂದು, ಕಪ್ಪು ಎಳ್ಳು ಬೆರೆಸಿದ ನೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಕಾಲಸರ್ಪ ದೋಷದಿಂದ ಪರಿಹಾರ ದೊರೆಯುವುದಲ್ಲದೆ, ಕುಟುಂಬದಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಸಂತೋಷ ಮತ್ತು ಶಾಂತಿ ಸಿಗುತ್ತದೆ.