ಚಿಕ್ಕಬಳ್ಳಾಪುರ: ಇಶಾ ಫೌಂಡೇಶನ್(Isha Foundation) ವತಿಯಿಂದ ರಾಜ್ಯದಲ್ಲೂ ಆದಿ ಯೋಗಿ ಶಿವನ ಪ್ರತಿಮೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮೊದಲ ಕಾರ್ಯಕ್ರಮವಾಗಿ ನಾಗಮಂಟಪ(Naga Mantapa) ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಾಕ್ಷಿಯಾದರು.
ಚಿಕ್ಕಬಳ್ಳಾಪುರ(Chikkaballapura) ತಾಲೂಕಿನ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ನಂತರ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಹದೇವರಬೆಟ್ಟದ ತಪ್ಪಲಿನಲ್ಲಿ ಇಶಾ ಫೌಂಡೇಶನ್ ವತಿಯಿಂದ ತಮಿಳುನಾಡಿನ ಕೊಯಮತ್ತೂರಿನಲ್ಲಿರುವಂತೆ 112 ಅಡಿಯ ಆದಿಯೋಗಿ(Adiyogi) ಶಿವನ ಪ್ರತಿಮೆ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯವಾಗಿದೆ.
Advertisement
Advertisement
Advertisement
ಅದಿಯೋಗಿ ಶಿವನ(Shiva) ಅವತಾರದ ಪ್ರತಿಮೆ ನಿರ್ಮಾಣದ ಕಾರ್ಯದ ಅಂಗವಾಗಿ ಇಶಾ ಫೌಂಡೇಶನ್ ವತಿಯಿಂದ ಮೊದಲ ಕಾರ್ಯಕ್ರಮವಾಗಿ ನಾಗಮಂಟಪ ಲೋಕಾರ್ಪಣೆ ಇಂದು ನೇರವೇರಿತು. ಕಾರ್ಯಕ್ರಮಕ್ಕೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ(Basvaraj Bommai) ಹಾಗೂ ಸಚಿವ ಕೆ ಸುಧಾಕರ್(K Sudhakar) ಆಗಮಿಸಿದ್ದರು.
Advertisement
ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್(Jaggi Vasudev ) ನಾಗಮಂಟಪ ಪೂಜಾ ಕೈಂಕರ್ಯಗಳನ್ನು ನಡೆಸಿ ಲೋಕಾರ್ಪಣೆಗೊಳಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪೂಜಾ ಕೈಂಕರ್ಯಗಳನ್ನ ಸಿಎಂ ಬೊಮ್ಮಾಯಿ ಹಾಗೂ ಸಚಿವ ಸುಧಾಕರ್ ಕಣ್ತುಂಬಿಕೊಂಡರು. ಇದನ್ನೂ ಓದಿ: ಟಿಪ್ಪು ಹೆಸರೇ ಗೊಂದಲದಲ್ಲಿದೆ, ಹಾಗಾಗಿ ಟ್ರೈನ್‌ನ ಹೆಸರು ಬದಲಿಸಿದ್ದೇವೆ: ನಳೀನ್ ಕುಮಾರ್ ಕಟೀಲ್
ಅದಿಯೋಗಿ ಶಿವನ ಪ್ರತಿಮೆ ದಿವ್ಯ ಮುಖ ರೂಪ ಅಂತಿಮ ಹಂತ ತಲುಪಿದ್ದು ಮುಂದಿನ ಜನವರಿ ಸಂಕ್ರಾಂತಿ ಸಮಯದಲ್ಲಿ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಸುಮಾರು 110 ಎಕ್ರೆ ವಿಶಾಲವಾದ ಪ್ರದೇಶದಲ್ಲಿ ಇಶಾ ಯೋಗ ಕೇಂದ್ರ ತಲೆ ಎತ್ತುತ್ತಿದ್ದು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ 9 ಕಿಲೋಮೀಟರ್ ದೂರದಲ್ಲಿದೆ.
ಇಶಾ ಯೋಗ ಕೇಂದ್ರಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳು ಪ್ರಮುಖವಾಗಿ ರಸ್ತೆ ಸೇರಿದಂತೆ ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳ ನಿರ್ಮಾಣ ಕಾರ್ಯ ಮುಂದುವರೆದಿದೆ. ಭಾನುವಾರ ಸಹ ನಾಗಮಂಟಪ ಪ್ರತಿಷ್ಠಾಪನಾ ಕಾರ್ಯ ಜರುಗಲಿದ್ದು ಸರಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಲಿದ್ದಾರೆ. 2023ರ ಮಹಾಶಿವರಾತ್ರಿಯಂದು ಈ ಆದಿಯೋಗಿ ಶಿವನ ಪ್ರತಿಮೆ ಎದುರು ಸದ್ಗುರುಗಳ ನೇತೃತ್ವದಲ್ಲಿ ಜಾಗರಣೆ, ಶಿವನ ಅರಾಧನೆ ನಡೆಯಲಿದೆ.