ಹೈದರಾಬಾದ್: ತೆರೆ ಮೇಲೆ ಸಮಂತಾ ಜೊತೆಗೆ ಉತ್ತಮ ಕೆಮಿಸ್ಟ್ರಿ ಇತ್ತು ಎಂದು ನಾಗಚೈತನ್ಯ ಮಾಜಿ ಪತ್ನಿಯ ಕುರಿತಾಗಿ ಹೇಳಿದ್ದಾರೆ.
ಬಂಗಾರ ರಾಜು ಚಿತ್ರದ ವೇಳೆ ಸಂದರ್ಶನವೊಂದರಲ್ಲಿ ಮಾತನಾಡುವಾಗ ನೀವು ಆನ್ಸ್ಕ್ರೀನ್ ಮೇಲೆ ಯಾವ ನಟಿಯು ಜೊತೆ ಉತ್ತಮ ಕೆಮಿಸ್ಟ್ರಿ ಹೊಂದಿದ್ದೀರಿ ಎಂಬ ಪ್ರಶ್ನೆಯನ್ನು ಕೇಳಲಾಯ್ತು. ಪ್ರಶ್ನೆಗೆ ಉತ್ತರಿಸಿದ ನಾಗಚೈತನ್ಯ ಸಮಂತಾ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ನಾಗ ಚೈತನ್ಯ ನೀಡಿದ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:ಮಲಯಾಳಂ ನಟ ಮಮ್ಮುಟ್ಟಿಗೆ ಕೋವಿಡ್-19 ಪಾಸಿಟಿವ್
ನಾಗಚೈತನ್ಯ ಡಿವೋರ್ಸ್ ವಿಚಾರ ಬಗ್ಗೆ ಮೌನ ಮುರಿದಿದ್ದಾರೆ. ಆನ್ಸ್ಕ್ರೀನ್ ಮೇಲೆ ನಾನು ಸಮಂತಾ ಜೊತೆ ಒಳ್ಳೆಯ ಕೆಮಿಸ್ಟ್ರೀ ಹೊಂದಿದ್ದೇನೆ ಎಂದು ಹೇಳಿದ್ದಾರೆ. ವಿಚ್ಛೇದನ ಪಡೆದ ನಂತರ ಸಮಂತಾ ಹಾಗೂ ನಾಗಚೈತನ್ಯ ತಮ್ಮ ಸಿನಿಮಾ ಕರಿಯರ್ ಮೇಲೆ ಹೆಚ್ಚು ಪೋಕಸ್ ನೀಡಿದ್ದಾರೆ. ಡಿವೋರ್ಸ್ ಬಳಿಕ ಸಮಂತಾ ಸಾಕಷ್ಟು ಬಾರಿ ತಮ್ಮ ವಿಚ್ಛೇಧನದ ಬಗ್ಗೆ ಮಾತನಾಡಿದ್ದಾರೆ. ಆದರೆ ನಾಗ ಚೈತನ್ಯ ಮಾತ್ರ ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ಇದನ್ನೂ ಓದಿ: ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಭಾಮ
ಸಮಂತಾ ನಾಗಚೈತನ್ಯ ಜೋಡಿ ನಾಲ್ಕು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿಯನ್ನು ಪ್ರೇಕ್ಷಕರು ಕೂಡ ಮೆಚ್ಚುಕೊಂಡಿದ್ದಾರೆ. ನಾಗ ಚೈತನ್ಯ ಕೂಡಾ ಅವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.