ಸೌತ್ ನಟ ನಾಗಚೈತನ್ಯ (Nagachaitanya) ಅವರು ಡಿವೋರ್ಸ್ ಬಳಿಕ ಸಿನಿಮಾಗಳತ್ತ ಹೆಚ್ಚು ಗಮನ ನೀಡುತ್ತಿದ್ದಾರೆ. ಸದ್ಯ ಸಮಂತಾ (Samantha) ಮಾಜಿ ಪತಿ ನಾಗಚೈತನ್ಯ ಅವರು 2ನೇ ಮದುವೆಗೆ ಸಜ್ಜಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಾದ್ರೆ ನಾಗಾರ್ಜುನ ಮದುವೆಯಾಗುತ್ತಿರುವ ಹುಡುಗಿ ಯಾರು? ಎಂದು ಚರ್ಚೆಯಾಗುತ್ತಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಸಮಂತಾ ಜೊತೆಗಿನ ದಾಂಪತ್ಯಕ್ಕೆ (Wedding) ಅಂತ್ಯ ಹಾಡಿ 2 ವರ್ಷಗಳಾಗಿದೆ. ವೃತ್ತಿರಂಗದಲ್ಲಿ ಇಬ್ಬರು ಬ್ಯುಸಿಯಾಗಿದ್ದಾರೆ. ಆಗಾಗ ನಾಗಚೈತನ್ಯ ಅವರು ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿ ಹೆಚ್ಚು ಸುದ್ದಿಯಾಗುತ್ತಾರೆ. ಈಗ 2ನೇ ಮದುವೆ ನಾಗಚೈತನ್ಯ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ನಾಗಾರ್ಜುನ (Nagarjuna) ಅವರು ಪುತ್ರನ ಮದುವೆಗೆ ಆಯ್ಕೆ ಮಾಡಿರುವ ಆ ಹುಡುಗಿ ಬೇರೆ ಯಾರೂ ಅಲ್ಲ. ನಾಗಾರ್ಜುನನ ಸೋದರ ಸಂಬಂಧಿಯಾಗಿದ್ದು, ಮದುವೆಗೆ ಸಕಲ ಸಿದ್ಧತೆ ನಡೆದಿದೆಯಂತೆ. ಸಮಂತಾ ಜೊತೆಗಿನ ಡಿವೋರ್ಸ್ ನಂತರ ನಾಗಚೈತನ್ಯ ಬಾಲಿವುಡ್‌ನ (Bollywood) ಶೋಭಿತಾ ದೂಳಿಪಾಲ ಅವರೊಂದಿಗೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇದಲ್ಲದೇ ವಿದೇಶದಲ್ಲಿ ಡಿನ್ನರ್ ಡೇಟ್ ಮಾಡಿರುವ ಫೋಟೋ ಕೂಡ ಬಿಡುಗಡೆಯಾಗಿ ಸಂಚಲನ ಮೂಡಿಸಿತ್ತು. ಇದನ್ನೂ ಓದಿ:ಪ್ರಿಯಾಂಕ ಉಪೇಂದ್ರ ನಟನೆಯ ‘ಕಮರೊಟ್ಟು 2’ ಟ್ರೈಲರ್ ರಿಲೀಸ್
ನಾಗಚೈತನ್ಯ ಕುಟುಂಬ ಮದುವೆ ಬಗ್ಗೆ ಮತ್ತು ಹುಡುಗಿ ಬಗ್ಗೆ ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.