ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಹಳ್ಳಿ ಸುಂದರಿ ನವ್ದೀಪ್ ಕೌರ್

Public TV
1 Min Read

ನವದೆಹಲಿ: ಮಿಸೆಸ್ ಇಂಡಿಯಾ ವಿಜೇತೆ ನವ್ದೀಪ್ ಕೌರ್ ಅವರು ಲಾಸ್ ವೇಗಾಸ್‌ನಲ್ಲಿ ನಡೆಯಲಿರುವ ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಜನವರಿ 15 ರಂದು ಫಿನಾಲೇ ನಡೆದಿದ್ದು, ಶೀಘ್ರವೇ ಫಲಿತಾಂಶ ಹೊರ ಬೀಳಲಿದೆ.

ಮಿಸೆಸ್ ವರ್ಲ್ಡ್ 2022ರಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ನವ್ದೀಪ್ ಕೌರ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಡಿಶಾದ ಸಣ್ಣ ಹಳ್ಳಿಯಿಂದ ಬಂದಿರುವ ನವ್ದೀಪ್ ಕೌರ್ ಮಿಸೆಸ್ ಇಂಡಿಯಾ ವಿಜೇತೆಯಾದಾಗ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಪುಟ್ಟ ಗ್ರಾಮದಿಂದ ಬಂದಿದ್ದರೂ ಫ್ಯಾಶನ್ ಲೋಕದಲ್ಲಿ ಮಿಂಚಿ ಇದೀಗ ಜಗತ್ತನೇ ಗೆಲ್ಲಲು ಮುಂದಾಗಿದ್ದಾರೆ. ಇದನ್ನೂ ಓದಿ: ನಾನು ಸ್ವಲ್ಪ ಸೈಕೊ- ರಶ್ಮಿಕಾ ಮಂದಣ್ಣ

navdeep kaur 4

ಕೌರ್ ಅವರು ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿAಗ್ ಕಲಿತು ನಂತರ ಬಿಸಿನೆಸ್ ಅಡ್ಮಿನಿಸ್ಟೆçÃಷನ್‌ನಲ್ಲಿ(ಎಂಬಿಎ) ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಬ್ಯಾಂಕ್ ಒಂದರಲ್ಲಿ ವ್ಯವಸ್ಥಾಪಕರಾಗಿ ದುಡಿದು ನಂತರ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.

navdeep kaur 1

ಕೌರ್ 7 ವರ್ಷದ ಹಿಂದೆ ಮದುವೆಯಾಗಿದ್ದು, 6 ವರ್ಷದ ಮಗಳು ಇದ್ದಾಳೆ. ಬಿಡುವಿನ ಸಮಯದಲ್ಲಿ ಕೌರ್ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ತೊಡಗಿಕೊಳ್ಳುತ್ತಾರೆ. ಅಲ್ಲದೇ ಇವರು, ಸಾವಿರ ಮಕ್ಕಳನ್ನು ಶಿಕ್ಷಣಕ್ಕಾಗಿ ದತ್ತು ತೆಗೆದುಕೊಂಡಿರುವ ಲೇಡೀಸ್ ಕ್ಲಬ್ ಇಂಡಿಯಾದ ಸದ್ಭಾವನಾ ರಾಯಭಾರಿಯೂ ಆಗಿದ್ದಾರೆ. ಇದನ್ನೂ ಓದಿ: ಮಗು ಪಡೆಯುವುದು ನಮ್ಮ ಜೀವನದ ಅತಿ ದೊಡ್ಡ ಕನಸು: ಪ್ರಿಯಾಂಕಾ ಚೋಪ್ರಾ

ಇದೀಗ ಮಿಸೆಸ್ ವರ್ಲ್ಡ್ 2022ರ ಕಿರೀಟವನ್ನು ನವ್ದೀಪ್ ಕೌರ್ ಮುಡಿಗೇರಿಸಿಕೊಳ್ಳಲಿ ಎಂಬುದು ಭಾರತೀಯ ಅಭಿಮಾನಿಗಳ ಆಶಯ.

Share This Article
Leave a Comment

Leave a Reply

Your email address will not be published. Required fields are marked *