ಮುಂಬೈ: ಮಗು ಪಡೆಯುವುದು ನಮ್ಮ ಜೀವನದ ಅತಿ ದೊಡ್ಡ ಬಯಕೆಯಾಗಿದೆ ಎಂದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
Advertisement
ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಭವಿಷ್ಯದಲ್ಲಿ ತಾವು ತಾಯಿಯಾಗುವುದರ ಬಗ್ಗೆ ಮಾತನಾಡಿದ್ದಾರೆ. ವರದಿಗಾರರ ಪ್ರಶ್ನೆಗೆ ಪ್ರಿಯಾಂಕಾ ನೇರವಾಗಿ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ:ಹೊಸ ಉದ್ಯಮದತ್ತ ಮುಖ ಮಾಡಿದ ಪ್ರಿಯಾಂಕಾ ಚೋಪ್ರಾ
Advertisement
Advertisement
ಪ್ರಿಯಾಂಕಾಗೆ ತಮ್ಮ ತಾಯಿ ಮಧು ಚೋಪ್ರಾ ಅಜ್ಜಿಯಾಗಬೇಕೆಂದು ಆಶಿಸುತ್ತಿದ್ದಾರೇ ಎಂಬ ಪ್ರಶ್ನೆಯನ್ನು ಸಂದರ್ಶನವೊಂದರಲ್ಲಿ ಕೇಳಲಾಗಿತ್ತು. ಆಗ ಪ್ರಿಯಾಂಕಾ ನಗುತ್ತಲೇ, ಮಗು ಪಡೆದುಕೊಳ್ಳಬೇಕೆಂಬುದು ನಮ್ಮ ಜೀವನದ ಅತಿ ದೊಡ್ಡ ಕನಸಾಗಿದೆ. ದೇವರ ದಯೆಯಿಂದ ಅದು ಯಾವಾಗ ಸಂಭವಿಸುತ್ತದೋ ಆಗಲೇ ಸಂಭವಿಸಲಿ. ನಾನು ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೆನೆ. ನಮ್ಮ ಜೀವನದಲ್ಲಿ ಮಗು ಆಗಮನವಾಗುವ ಸಂದರ್ಭದಲ್ಲಿ ನಾನು ಚಿತ್ರರಂಗದಿಂದ ನಿಧಾನವಾಗಿ ಬ್ರೇಕ್ ತೆಗೆದುಕೊಳ್ಳಲು ಆರಂಭಿಸುತ್ತೇವೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
Advertisement
ಪ್ರಿಯಾಂಕಾ ಅವರು ಪಾಪ್ ಸ್ಟಾರ್ ನಿಕ್ ಜೋನಾಸ್ ಅವರನ್ನು 2018 ಡಿಸೆಂಬರ್ 1ರಂದು ವಿವಾಹವಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಪ್ರಿಯಾಂಕಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಇತ್ತೀಚೆಗಷ್ಟೆ ಹೊಸ ಮನೆಯನ್ನು ಖರೀದಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್‍ನಲ್ಲಿ ರೆಸ್ಟೋರೆಂಟ್ ಒಂದನ್ನು ಆರಂಭಿಸಿದ್ದಾರೆ. ಈ ಹೋಟೆಲ್‍ಗೆ ಸೋನಾ ಎಂದು ಪ್ರಿಯಾಂಕಾ ಹೆಸರು ಇಟ್ಟಿದ್ದಾರೆ.