ಕನ್ನಡತಿ ನಭಾ ನಟೇಶ್ (Nabha Natesh) ಅವರು ಟಾಲಿವುಡ್‌ನಲ್ಲಿ (Tollywood) ಗುರುತಿಸಿಕೊಳ್ತಿದ್ದಾರೆ. ಆಕ್ಸಿಡೆಂಟ್ ನಂತರ ಇದೀಗ ಮತ್ತೆ ಬಣ್ಣದ ಲೋಕಕ್ಕೆ ನಟಿ ಎಂಟ್ರಿ ಕೊಡುತ್ತಿದ್ದಾರೆ. ಬಂಪರ್ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. ಕೆರಿಯರ್ ಮುಗಿದೇ ಹೋಯ್ತು ಎನ್ನುವಾಗ ನಭಾಗೆ ಗೋಲ್ಡನ್ ಚಾನ್ಸ್ ಸಿಕ್ಕಿದೆ.

ನಭಾ ನಟೇಶ್ (Nabha Natesh) ಅವರು ಮತ್ತೊಂದು ಮಹಿಳಾ ಪ್ರಧಾನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಹನುಮಾನ್’ ನಿರ್ಮಾಪಕರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಭಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇವೆರಡೂ ಸಿನಿಮಾಗಳು ನಭಾಗೆ ಕೆರಿಯರ್‌ನಲ್ಲಿ ಬಿಗ್ ಬ್ರೇಕ್ ಕೊಡುವ ಸಾಧ್ಯತೆ ಇದೆ.
ಅಂದಹಾಗೆ, ಶೃಂಗೇರಿ ಬೆಡಗಿ ನಭಾ ನಟೇಶ್ ‘ವಜ್ರಕಾಯ’ (Vajrakaya) ಚಿತ್ರದಲ್ಲಿ ನಟಿಸಿದ್ದರು. ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿ ಮಿಂಚಿದ್ದರು. ತದನಂತರ ತೆಲುಗಿನಲ್ಲಿ ನಟಿ ಹೈಲೆಟ್ ಆದರು.


