ನವದೆಹಲಿ: ಜನಪ್ರಿಯ ಮಾಡೆಲ್ ಪದ್ಮಾ ಲಕ್ಷ್ಮಿ ಭಾರತೀಯ ಖಾದ್ಯಗಳ ಅಭಿಮಾನಿಯಾಗಿದ್ದಾರೆ. ಹೀಗಾಗಿ ಅವರು ಬೆಡ್ಶೀಟ್, ತಲೆದಿಂಬನ್ನು ರೊಟ್ಟಿಯಂತೆ ಡಿಸೈನ್ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಉತ್ತರ ಭಾರತದ ಖ್ಯಾತ ತಿನಿಸುಗಳಲ್ಲೊಂದಾದ ನಾನ್ನ (ಮೈದಾಹಿಟ್ಟಿನ ರೊಟ್ಟಿ) 3ಡಿ ಪ್ರಿಂಟ್ ಇರುವ ಬೆಡ್ಶೀಟ್ ಹಾಗೂ ತಲೆ ದಿಂಬಿನ ಕವರ್ಗಳನ್ನು ಡಿಸೈನ್ ಮಾಡಿಸಿಕೊಂಡಿದ್ದಾರೆ. ಬೆಡ್ರೂಮ್ನ್ನು ವಿಭಿನ್ನವಾಗಿ ಅಂಕರಿಸುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಫೋಟೋಶೂಟ್ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್ನಲ್ಲಿ ಗ್ಯಾಂಗ್ರೇಪ್
???????????? pic.twitter.com/G3xpH2V01x
— Padma Lakshmi (@PadmaLakshmi) December 4, 2021
ಹಾಸಿಗೆಗೆ ಸಾಕಾಗುವಷ್ಟು ನಾನ್ ತಯಾರಿಸಿ ತಂದು ಹಾಸಿಗೆಗೆ ಹೊದಿಸಿದ್ದಾರೆ ಎನ್ನುವ ಹಾಗೆ ಬೆಡ್ ಕಾಣಿಸುತ್ತದೆ. ನಾನ್ಬೆಡ್ ಮಾರಾಟಕ್ಕಿದೆ, ನಾನ್ನಿಂದ ತಯಾರಿಸಿದ 2 ದಿಂಬುಗಳು ಉಚಿತ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋ ಟ್ವಿಟರ್ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ತುಮಕೂರಿನಲ್ಲಿ ಮತ್ತೆ ಕೊರೊನಾ ಭೀತಿ – 42 ಪುಟ್ಟ ಮಕ್ಕಳಿಗೆ ವಕ್ಕರಿಸಿದ ಕೋವಿಡ್
Mmmm I’m going to load that bedspread up with tzaziki or hummus and eat it ! K, now I want Naan. pic.twitter.com/bSiKTrTUCe
— ArtemisDi (@ArtemisDLW) December 4, 2021
ನೀವು ಮಲಗಿದ್ದಾಗ ಇಡೀ ಬೇಡ್ನ್ನು ಸ್ವಲ್ಪ ಸ್ವಲ್ಪ ತಿನ್ನತ್ತಾ ಹೋದರೆ ಏನು ಗತಿ? ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಲಕ್ಷ್ಮಿ ಕೂಡಾ ತಮಾಷೆಯಾಗಿ ಉತ್ತರವನ್ನು ನೀಡಿದ್ದಾರೆ. ಹಾಸ್ಯಾಸ್ಪದವಾದ ಕಲವರು ಕಾಮೆಂಟ್ಗಳು ಈ ಪೋಸ್ಟ್ಗೆ ಬಂದಿದೆ.